ಪ್ರವಾಸಿಗರ ಮೇಲೆ ಕಲ್ಲು ಎಸೆದ ಮರಿ ಚಿಂಪಾಂಜಿ, ತಾಯಿ ಚಿಂಪಾಂಜಿಯ ರಿಯಾಕ್ಷನ್ ನೋಡಿ!
ತಾಯಿಯ ಪ್ರೀತಿಯೇ ಹಾಗೆ, ತನ್ನ ಮಕ್ಕಳನ್ನು ಎಷ್ಟು ಮುದ್ದಾಗಿ ಸಾಕುತ್ತಾಳೋ ತಪ್ಪು ಮಾಡಿದಾಗ ದಂಡಿಸಿ ಬುದ್ಧಿ ಹೇಳುತ್ತಾಳೆ. ಈ ವಿಚಾರದಲ್ಲಿ ಪ್ರಾಣಿಗಳು ಕೂಡ ತಮ್ಮ ಮರಿಗಳಿಗೆ ಬುದ್ಧಿ ಹೇಳುವುದನ್ನು ನೀವು ನೋಡಿರಬಹುದು. ಇಂತಹದೊಂದು ವಿಡಿಯೋ ವೈರಲ್ ಆಗಿದ್ದು, ಪ್ರವಾಸಿಗರ ಮೇಲೆ ಕಲ್ಲು ಎಸೆದ ಮರಿಗೆ ತಾಯಿ ಚಿಂಪಾಜಿ ಹೊಡೆದು ಬುದ್ಧಿ ಹೇಳಿದೆ. ಈ ವಿಡಿಯೋವೊಂದುಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಾಣಿಗಳು ಎಷ್ಟು ಬುದ್ಧಿವಂತರಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ತಾಯಿ (mother) ಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತನ್ನ ಕರುಳ ಕುಡಿಯ ರಕ್ಷಣೆಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಜೀವವೆಂದರೆ ಅದುವೇ ತಾಯಿ. ಈ ವಿಚಾರದಲ್ಲಿ ಪ್ರಾಣಿಗಳು ಕೂಡ ಹೊರತಾಗಿಲ್ಲ ಎನ್ನಬಹುದು. ಈ ಮೂಕ ಪ್ರಾಣಿಗಳು ಕೂಡ ತನ್ನ ಕಂದಮ್ಮನ ಮೇಲೆ ಕಾಳಜಿ, ಪ್ರೀತಿಯನ್ನು ತೋರಿಸುತ್ತದೆ. ಮರಿಗಳು ತಪ್ಪು ಮಾಡಿದಾಗ ಗದರಿ ಬುದ್ಧಿ ಹೇಳುವ ಪ್ರಾಣಿಗಳ ವಿಡಿಯೋಗಳು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮರಿ ಚಿಂಪಾಂಜಿ (chimpanzee) ಯೂ ಪ್ರವಾಸಿಗರ ಮೇಲೆ ಕಲ್ಲು ಎಸೆದಿದ್ದು, ಇದನ್ನು ಕಂಡ ತಾಯಿ ಚಿಂಪಾಂಜಿಯೂ ಮೆಲ್ಲನೆ ಬೆನ್ನಿಗೆ ತಟ್ಟಿ, ಹಾಗೆಲ್ಲಾ ಮಾಡ್ಬಾರ್ದು ಎನ್ನುವ ರೀತಿ ಬುದ್ಧಿ ಹೇಳಿದೆ.
@crazyclips ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಚಿಂಪಾಂಜಿಗಳು ಮೃಗಾಲಯದೊಳಗೆ ಗುಹೆಯ ಮೇಲೆ ಕುಳಿತಿರುವುದನ್ನು ನೋಡಬಹುದು. ಪ್ರವಾಸಿಗರು ಈ ಚಿಂಪಾಂಜಿಗಳನ್ನು ನೋಡುತ್ತಾ ನಿಂತಿದ್ದಾರೆ. ಇದರಲ್ಲಿ ಒಂದು ಮರಿ ಚಿಂಪಾಜಿಯೂ ತನ್ನ ತುಂಟಾಟವನ್ನು ಶುರು ಮಾಡಿದೆ. ಪ್ರವಾಸಿಗರನ್ನು ಕಂಡೊಡನೆ ಮೆಲ್ಲನೆ ಅವರತ್ತ ಕಲ್ಲು ಎಸೆದಿದೆ. ಇದನ್ನು ನೋಡಿದ ತಾಯಿ ಚಿಂಪಾಂಜಿಯೂ ಕೈಯಲ್ಲಿ ಕೋಲು ಹಿಡಿದು ಹೊಡೆಯಲು ಮುಂದಾಗುತ್ತದೆ. ಇದನ್ನು ನೋಡುತ್ತಿದ್ದ ಪ್ರವಾಸಿಗರು ಜೋರಾಗಿ ನಗುವುದನ್ನು ಕಾಣಬಹುದು.
ಇದನ್ನೂ ಓದಿ : ಟೈಮ್ ಟ್ರಾವೆಲಿಂಗ್ ಮಾಡಿ ರಾಮ, ಕೃಷ್ಣನ ಆಶಿರ್ವಾದ ಪಡೆದು ಬಂದ ಮೋದಿಜಿ-ಯೋಗಿಜಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Mother chimpanzee hits her son who was throwing rocks at people pic.twitter.com/XWKFMYjq1N
— Crazy Clips (@crazyclips_) May 17, 2025
ಬಳಕೆದಾರರ ಕಾಮೆಂಟ್ ಗಳು ಹೀಗಿವೆ:
ಈ ವಿಡಿಯೋವೊಂದು 8.6 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಲೈಕ್ಸ್ ಗಳು ಹಾಗೂ ಕಾಮೆಂಟ್ ಗಳು ಹರಿದು ಬಂದಿವೆ. ಬಳಕೆದಾರರೊಬ್ಬರು, ಈ ಚಿಂಪಾಂಜಿಗಳು ಬುದ್ಧಿವಂತ ಪ್ರಾಣಿಗಳು, ಹೀಗಾಗಿ ಅವುಗಳನ್ನು ಮೃಗಾಲಯದಲ್ಲಿ ನಿಯಂತ್ರಿಸುವುದು ಕಷ್ಟಕರ ಎಂದಿದ್ದಾರೆ. ಇನ್ನೊಬ್ಬರು, ತಾಯಿ ಯಾವತ್ತಿದ್ರು ಮಕ್ಕಳಿಗೆ ಸಂಸ್ಕಾರವನ್ನು ಕಲಿಸಿ, ತಪ್ಪು ಮಾಡಿದಾಗ ತಿಂದಿ ಬುದ್ಧಿ ಹೇಳುತ್ತಾಳೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು, ಈ ಚಿಂಪಾಜಿಗಳ ತರಲೆ ತುಂಟಾಟ ನೋಡುವುದೇ ಚಂದವೇ ಬೇರೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:29 am, Wed, 21 May 25








