ವಿಡಿಯೋ ವೈರಲ್: ಈ ಮನೆಯಲ್ಲಿ ಹಾವುಗಳದ್ದೇ ರಾಶಿ, ಮೈ ಜುಮ್ ಎನಿಸುವ ದೃಶ್ಯ
ನಾವೆಲ್ಲರೂ ಈ ಹಾವು ಹೆಸರು ಕೇಳಿದರೆ ಕೂಡಲೇ ಭಯ ಪಡುತ್ತೇವೆ. ಅಪ್ಪಿ ತಪ್ಪಿ ಈ ಹಾವು ಮನೆಯೊಳಗೆ ಬಂದು ಬಿಟ್ಟರೆ, ಅದು ಹೊರಗೆ ಹೋಗುವ ತನಕ ನಾವು ಮನೆಯೊಳಗೆ ಕಾಲಿಡಲ್ಲ. ಆದರೆ ಇಲ್ಲೊಂದು ಮನೆಯ ನೆಲಮಾಳಿಗೆಯ ಮೇಲೆ ಹತ್ತಕ್ಕೂ ಹೆಚ್ಚು ಹಾವುಗಳು ಕಾಣಿಸಿಕೊಂಡಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ದೃಶ್ಯ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಭಯಭೀತರಾಗಿದ್ದಾರೆ.

ಉತ್ತರ ಪ್ರದೇಶ, ಮೇ 21 : ಮಳೆಗಾಲ (rainy season) ದಲ್ಲಿ ಹಾವುಗಳು ಮನೆಯ ಸುತ್ತಮುತ್ತ ಕಾಣಿಸಿಕೊಳ್ಳುತ್ತವೆ. ಹಲವು ಬಾರಿ ಮನೆಯ ಮೂಲೆಯಲ್ಲಿ ಅಥವಾ ಬೆಚ್ಚಗೆಗಿರುವ ಸ್ಥಳಗಳಲ್ಲಿ ಅವಿತು ಕುಳಿತುಕೊಳ್ಳುವುದನ್ನು ನೀವು ನೋಡಿರಬಹುದು. ಸಾಮಾನ್ಯವಾಗಿ ಒಂದು ಹಾವು (snake) ಕಣ್ಣಿಗೆ ಬಿದ್ದ ಕೂಡಲೇ ಎದೆ ಹಿಡಿದು ಓಡಿ ಹೋಗುವವರೇ ಹೆಚ್ಚು. ಆದರೆ ಇದೀಗ ಮನೆಯ ನೆಲ ಮಾಳಿಗೆಯ ಗೂಡಿನಂತಹ ರಚನೆಯಲ್ಲಿ ಹತ್ತಕ್ಕೂ ಹೆಚ್ಚು ಹಾವುಗಳು ಕಂಡು ಬಂದಿದೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ವೈರಲ್ ಆಗಿದ್ದು, ಈ ದೃಶ್ಯವು ಎಲ್ಲರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಈ ಘಟನೆಯೂ ಉತ್ತರ ಪ್ರದೇಶ (Uttar Pradesh) ದ ಮಹಾರಾಜ್‌ಗಂಜ್‌ನ ಹಾರ್ದಿದಾಲಿ ಗ್ರಾಮ (Hardidali village of maharajganj)ದಲ್ಲಿ ನಡೆದಿದೆ ಎನ್ನಲಾಗಿದೆ.
ಸ್ಥಳೀಯ ಸುದ್ದಿ ಸಂಸ್ಥೆ ಭಾರತ ಸಮಾಚಾರ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನೆಲಮಾಳಿಗೆಯ ಗೂಡಿನಂತಹ ರಚನೆಯಲ್ಲಿ ಹತ್ತಕ್ಕೂ ಹೆಚ್ಚು ಹಾವುಗಳನ್ನು ಕಾಣಬಹುದು. ಹಾವುಗಳು ಗಿಜಿಗುಟ್ಟುತ್ತಾ ನಿಧಾನವಾಗಿ ಚಲಿಸುತ್ತಿದೆ. ಈ ದೃಶ್ಯವು ಒಂದು ಕ್ಷಣ ಮೈ ಜುಮ್ ಎನ್ನುವಂತೆ ಮಾಡುತ್ತದೆ. ಮನೆಯ ನೆಲಮಾಳಿಗೆಯ ಮೇಲೆ ಹಾವುಗಳ ರಾಶಿಯನ್ನು ಕಂಡ ಗ್ರಾಮಸ್ಥರು ತಕ್ಷಣವೇ ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ : ಪ್ರವಾಸಿಗರ ಮೇಲೆ ಕಲ್ಲು ಎಸೆದ ಮರಿ ಚಿಂಪಾಜಿ, ತಾಯಿ ಚಿಂಪಾಂಜಿಯ ರಿಯಾಕ್ಷನ್ ನೋಡಿ?
ವೈರಲ್ ವಿಡಿಯೋ ಇಲ್ಲಿದೆ ನೋಡಿ:
🚨 महराजगंज : घर में बने बेसमेंट में सांपों का बसेरा 🚨
🐍 दर्जनों सांपों को देखकर मचा हड़कंप 📞 ग्रामीणों ने वन विभाग को दी सूचना 📍 सोनौली थाना क्षेत्र के हरदीडाली का मामला#Maharajganj #SnakeNest #WildlifeAlert pic.twitter.com/D79E0QcuYa
— भारत समाचार | Bharat Samachar (@bstvlive) May 19, 2025
ಇನ್ನು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎರಡು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು, ಇದು ಎಐ ಎಫೆಕ್ಟ್ ಎಂದಿದ್ದಾರೆ. ಇನ್ನೊಬ್ಬರು, ಇಷ್ಟೊಂದು ಹಾವುಗಳು ಇಲ್ಲಿಗೆ ಹೇಗೆ ಬಂತು ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಇದಕ್ಕೆ ಸಂಬಂಧ ಪಟ್ಟಂತೆ ತಕ್ಷಣವೇ ಕ್ರಮ ಕೈಗೊಳ್ಳಿ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:23 pm, Wed, 21 May 25








