AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ಬೆಂಗಳೂರಿನ ರಸ್ತೆಯಲ್ಲಿ ಓಡಾಡಲಿದೆ ಟೈಟಾನಿಕ್​​​​ ಹಡಗು, ಊಬರ್​​​ ಹೊಸ ಪ್ರಯೋಗ

ಬೆಂಗಳೂರಿನ ಬಹುತೇಕ ಜನರು ತಮ್ಮ ದಿನನಿತ್ಯ ಓಡಾಟಗಳಿಗೆ ಊಬರ್, ಓಲಾ ಹಾಗೂ ಟ್ಯಾಕ್ಸಿ ಸೇರಿದಂತೆ ಇನ್ನಿತ್ತರ ಸೇವೆಗಳನ್ನು ಅವಲಂಬಿಸಿದವರೇ ಹೆಚ್ಚು. ಆದರೆ ಇದೀಗ ಊಬರ್ ಕಂಪೆನಿಯೂ ಹೊಸ ಪ್ರಯೋಗಕ್ಕೆ ಮುಂದಾಗಿರುವ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದೆ. ಹೌದು, ಊಬರ್ ಕಂಪೆನಿಯೂ ಬೆಂಗಳೂರಿನ ಜನರ ಓಡಾಟಕ್ಕಾಗಿ ಟ್ಯಾಕ್ಸಿ ಬದಲಾಗಿ ಟೈಟಾನಿಕ್ ಹಡಗಿನ ವ್ಯವಸ್ಥೆಯಿದೆ ಎನ್ನುವ ಬಗ್ಗೆ ತಿಳಿಸಿದ್ದು, ನೀವೇನಾದ್ರೂ ಇದನ್ನು ನಿಜ ಅಂದುಕೊಂಡ್ರಾ? ಈ ಕುರಿತಾದ ಮಾಹಿತಿ ಇಲ್ಲಿದೆ.

ಇನ್ಮುಂದೆ ಬೆಂಗಳೂರಿನ ರಸ್ತೆಯಲ್ಲಿ ಓಡಾಡಲಿದೆ ಟೈಟಾನಿಕ್​​​​ ಹಡಗು, ಊಬರ್​​​ ಹೊಸ ಪ್ರಯೋಗ
ವೈರಲ್ ಪೋಸ್ಟ್Image Credit source: Instagram
ಸಾಯಿನಂದಾ
|

Updated on:May 21, 2025 | 5:11 PM

Share

ಕಳೆದ ಕೆಲ ದಿನಗಳಿಂದ ವರುಣನ ಅಬ್ಬರದಿಂದ ಬೆಂಗಳೂರು (Bengaluru) ತತ್ತರಿಸಿ ಹೋಗಿದೆ. ತಗ್ಗು ಪ್ರದೇಶಗಳಲ್ಲಿ ನೀರೂ ತುಂಬಿಕೊಂಡಿದ್ದು, ಜನ ಜೀವನವೇ ಅಸ್ತವ್ಯಸ್ತವಾಗಿದೆ. ಇನ್ನು ಈ ಬೆಂಗಳೂರಿನ ರಸ್ತೆಗಳ ತುಂಬೆಲ್ಲಾ ನೀರೇ ನೀರು, ಹೀಗಾಗಿ ವಾಹನ ಸವಾರರಂತೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಊಬರ್ ಕಂಪನಿಯೂ ಬೆಂಗಳೂರಿಗೆ ಟೈಟಾನಿಕ್ ಬೋಟ್‌ (titanic boat) ನ ವ್ಯವಸ್ಥೆಯಿದೆ ಎನ್ನುವ ಬಗ್ಗೆ ಪೋಸ್ಟ್ ವೊಂದನ್ನು ಮಾಡಿಕೊಂಡಿದೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

uber india ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಟೈಟಾನಿಕ್ ಬೋಟ್ ನ ವ್ಯವಸ್ಥೆಯಿರುವ ಫೋಟೋವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಫೋಟೋದಲ್ಲಿ ಬೆಂಗಳೂರಿಗೆ ಟ್ಯಾಕ್ಸಿ ಬದಲಿಗೆ ಟೈಟಾನಿಕ್ ಬೋಟ್ ನ ವ್ಯವಸ್ಥೆಯಿದೆ ಎಂದು ಉಲ್ಲೇಖಿಸಿರುವುದನ್ನು ನೋಡಿರಬಹುದು. ಅದಲ್ಲದೇ ಒಂದು ನಿಮಿಷದಲ್ಲೇ ಕೇವಲ 149 ರೂಪಾಯಿಯಲ್ಲಿ ಈ ಟೈಟಾನಿಕ್ ಸೇವೆಯೂ ಸಿಗಲಿದೆ ಎಂದಿರುವುದನ್ನು ನೀವಿಲ್ಲಿ ನೋಡಬಹುದು. ಈ ಪೋಸ್ಟ್ ಮೂಲಕ ಊಬರ್ ಕಂಪೆನಿಯೂ ಬೆಂಗಳೂರಿನ ಪ್ರಸ್ತುತ ಸ್ಥಿತಿಯನ್ನು ಆಡಿಕೊಂಡು ನಕ್ಕಿರುವುದು ಇಲ್ಲಿ ಸ್ಪಷ್ಟವಾಗಿ ಕಾಣಬಹುದು.

ಇದನ್ನೂ ಓದಿ
Image
ಲಾರಿಗೆಡಿಕ್ಕಿ ಹೊಡೆದ ಕಾರು, ಮೂವರು ಸಾವು
Image
ಈ ಮನೆಯಲ್ಲಿ ಹಾವುಗಳದ್ದೇ ರಾಶಿ, ವಿಡಿಯೋ ವೈರಲ್
Image
ಪ್ರವಾಸಿಗರ ಮೇಲೆ ಕಲ್ಲು ಎಸೆದ ಮರಿಗೆ ಹಿಗ್ಗಾಮುಗ್ಗಾ ಬಾರಿಸಿದ ಚಿಂಪಾಂಜಿ
Image
ಟೈಮ್‌ ಟ್ರಾವೆಲಿಂಗ್‌ ಮಾಡಿ ಮಹಾತ್ಮರನ್ನು ಭೇಟಿಯಾದ ಮೋದಿಜಿ-ಯೋಗಿಜಿ

ಇದನ್ನೂ ಓದಿ : Video: ಮೂವರ ಪಾಲಿಗೆ ಯಮನಾದ ಕಾರು, ಲಾರಿಗೆ ಡಿಕ್ಕಿ ಹೊಡೆದ ಕಾರು, ಮೂರು ಸಾವು

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

View this post on Instagram

A post shared by Uber India (@uber_india)

ಈ ಪೋಸ್ಟ್ ವೊಂದು ಇಪ್ಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು ಬಳಕೆದಾರರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ನಾವು ಸಿದ್ಧರಿದ್ದೇವೆ ಎಂದಿದ್ದಾರೆ. ಇನ್ನೊಬ್ಬರು, ಇದು ಒಳ್ಳೆಯ ಪ್ರಯತ್ನ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಊಬರ್ ಕಂಪೆನಿಯ ಹೊಸ ಸೇವೆಯಾದ ಈ ಟೈಟಾನಿಕ್ ನಲ್ಲಿ ಹೋಗಬೇಡಿ, ಈ ಟೈಟಾನಿಕ್ ನೊಂದಿಗೆ ನೀರಿನಲ್ಲಿ ನೀವು ಮುಳುಗಿ ಹೋಗುವಿರಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:04 pm, Wed, 21 May 25

ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ
ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ
ಟರ್ನಿಂಗ್​ನಲ್ಲಿ ಕಂಟ್ರೋಲ್ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು
ಟರ್ನಿಂಗ್​ನಲ್ಲಿ ಕಂಟ್ರೋಲ್ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ