ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ, ಆಸ್ಪತ್ರೆಗೆ ವಯಸ್ಸಾದವರನ್ನು ಒಬ್ಬರನ್ನೇ ಕಳಿಸಬೇಡಿ, ಕಣ್ಣೀರು ಹಾಕಿದ ಖ್ಯಾತ ನಿರೂಪಕಿ
ಯಾರೇ ಆಗಿರಲಿ ಜನ್ಮ ಕೊಟ್ಟ ತಂದೆ-ತಾಯಿಯನ್ನು ಕೊನೆಗಾಲದಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು. ಆದರೆ ಕಷ್ಟ ಪಟ್ಟು ಬೆಳೆಸಿ ಒಂದೊಳ್ಳೆ ಬದುಕು ಕಟ್ಟಿಕೊಟ್ಟ ತಂದೆ ತಾಯಿಯನ್ನು ನೋಡಿಕೊಳ್ಳಲು ಈಗಿನ ಮಕ್ಕಳಿಗೆ ಸಮಯವಿಲ್ಲ. ಹೀಗಾಗಿ ಮುಪ್ಪಿನ ಕಾಲದಲ್ಲಿ ಹಿರಿಜೀವಗಳು ಒಂಟಿಯಾಗಿ ಆಸ್ಪತ್ರೆ ಅಲೆಯುವುದನ್ನು ನೋಡಿರಬಹುದು. ಆದರೆ ಇದೀಗ ಖ್ಯಾತ ನಿರೂಪಕಿ ದಿವ್ಯಾ ಆಲೂರ್ ವಯಸ್ಸಾದ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ, ಅದಲ್ಲದೇ, ದಯವಿಟ್ಟು ಹಿರಿಯ ನಾಗರೀಕರು ತಮ್ಮ ಮೊಬೈಲ್ ಗೆ ನಂಬರ್ ಲಾಕ್ ಹಾಕಬೇಡಿ ಎಂದು ಒಂದೊಳ್ಳೆ ಸಂದೇಶ ನೀಡಿದ್ದಾರೆ.

ಈಗಿನ ಕಾಲದಲ್ಲಿ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ (smart phone) ಇದೆ. ಒಂದೊಂದು ಆಪ್ ಗೂ ಒಂದೊಂದು ರೀತಿಯ ಪಾಸ್ ವರ್ಡ್ ಹಾಕಿರುತ್ತಾರೆ. ಹೀಗಾಗಿ ಮೊಬೈಲ್ ತುಂಬೆಲ್ಲಾ ಪಾಸ್ ವರ್ಡ್ ಗಳೇ ತುಂಬಿರುತ್ತದೆ. ಆದರೆ ವಯಸ್ಸಾದ ವ್ಯಕ್ತಿಗಳು ಮೊಬೈಲ್ ಗೆ ಪಾಸ್ ವರ್ಡ್ ಅಥವಾ ನಂಬರ್ ಲಾಕ್ ಹಾಕುವುದು ಒಳ್ಳೆಯದಲ್ಲ. ಹೌದು, ಇದೀಗ ಖ್ಯಾತ ನಿರೂಪಕಿ ದಿವ್ಯಾ ಆಲೂರ್ (Anchor Divya Alur) ಈ ಬಗ್ಗೆ ವಿಡಿಯೋ ಶೇರ್ ಮಾಡಿಕೊಂಡು, ದಯವಿಟ್ಟು ಹಿರಿಯ ನಾಗರೀಕರು ತಮ್ಮ ಮೊಬೈಲ್ ಗೆ ನಂಬರ್ ಲಾಕ್ (number lock) ಹಾಕಬೇಡಿ, ತುರ್ತು ಸಂದರ್ಭದಲ್ಲಿ ಈ ರೀತಿ ಲಾಕ್ ಆಗುವುದರಿಂದ ನಿಮ್ಮ ಮನೆಯವರನ್ನು ಸಂಪರ್ಕಿಸುವುದು ಸಾಧ್ಯವಾಗದೇ ಇರಬಹುದು ಎಂದು ಕಿವಿ ಮಾತು ಹೇಳಿದ್ದಾರೆ.
divya alur ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಖ್ಯಾತ ನಿರೂಪಕಿ ದಿವ್ಯಾ ಆಲೂರ್, ನಾನು ಗಂಟಲು ನೋವೆಂದು ಆಸ್ಪತ್ರೆಗೆ ಬಂದಿದ್ದೆ. ಆದರೆ ಇಲ್ಲೊಬ್ಬರು ಆರೋಗ್ಯವಾಗಿದ್ದ ವ್ಯಕ್ತಿಗೆ ಲೋ ಬಿಪಿಯಾಗಿದೆ. ಆ ವ್ಯಕ್ತಿಗೆ ವಯಸ್ಸು ಆಗಿದ್ದು, ಒಬ್ಬರೇ ಆಸ್ಪತ್ರೆಗೆ ಬಂದಿದ್ದಾರೆ. ಅವರನ್ನು ನೋಡಿದಾಗ ನನ್ನ ಅಪ್ಪ ತುಂಬಾ ನೆನಪು ಆಗಿ ಹೋದ್ರು. ಆ ವ್ಯಕ್ತಿ ಫೋನ್ ಲಾಕ್ ಮೂಡ್ ನಲ್ಲಿದ್ದೆ. ಅಲ್ಲಿದ್ದವರು ಫೋನ್ ಓಪನ್ ಮಾಡಿ ಹೇಳ್ತಾ ಇದ್ದಾರೆ. ಆದರೆ ವಯಸ್ಸಾದ ವ್ಯಕ್ತಿಗೆ ಅಷ್ಟು ಪ್ರಜ್ಞೆ ಇರಲಿಲ್ಲ. ಅವರನ್ನು ಐಸಿಯುಗೆ ಶಿಫ್ಟ್ ಮಾಡಿದ್ದು, ಅವರ ಕಡೆಯವರಿಗೆ ಈ ವಿಷಯ ತಿಳಿಸಲು ಡಾಕ್ಟರ್ ಒದ್ದಾಡ್ತಾ ಇದ್ರು. ಪುಣ್ಯಕ್ಕೆ ಆ ವ್ಯಕ್ತಿಯ ಕಡೆಯವರಿಗೆ ಹೇಳಿ ಆಸ್ಪತ್ರೆಗೆ ಕರೆಸಿಕೊಂಡಿದ್ದಾರೆ. ವಯಸ್ಸಾದವರು ದಯವಿಟ್ಟು ನಂಬರ್ ಲಾಕ್ ಇಟ್ಟುಕೊಳ್ಬೇಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಕೋಟಿ ಸಂಬಳ ಪಡೆಯುತ್ತಿದ್ದ ಎಂಜಿನಿಯರ್ ಈಗ ಫುಡ್ ಡೆಲಿವರಿ ಬಾಯ್; ಇದು ಭಾರತದ ಕಥೆಯಲ್ಲ, ಅಮೆರಿಕದ್ದು
ಮಕ್ಕಳು ಯಾವುದೇ ಕಾರಣಕ್ಕೂ ವಯಸ್ಸಾದವರ ಜೊತೆಗೆ ಸಿಟ್ಟು ಸಿಡುಕು ತೋರಿಸ್ಬೇಡಿ. ಒಮ್ಮೆ ಕಳೆದು ಹೋದ್ಮೇಲೆನೇ ಅವರ ಬೆಲೆ ಗೊತ್ತಾಗೋದು. ಆ ವ್ಯಕ್ತಿನಾ ನೋಡಿ ನಂಗೆ ನನ್ನ ತಂದೆ ನೆನಪಾಗಿ ಹೋದ್ರು. ಅಪ್ಪ ಅಮ್ಮನ ಬಗ್ಗೆ ಹೆಚ್ಚು ಗಮನ ಕೊಡಿ. ಅತ್ತೆ ಮಾವ ಮನೆಯಲ್ಲಿದ್ರೆ ಮಾನವೀಯತೆ ದೃಷ್ಟಿ ಇರಲಿ. ಕೆಲವೊಮ್ಮೆ ವಯಸ್ಸಾದವರು ಸ್ವಲ್ಪ ಕಿರಿಕಿರಿ ಮಾಡ್ತಾರೆ. ಆದರೆ ಆವಾಗ ನಮಗೆ ಹಿಂಸೆ ಆಗುತ್ತೆ ಎಂದಿದ್ದಾರೆ. ಇದೇ ವೇಳೆಯಲ್ಲಿ ತನ್ನ ತಾಯಿ ಸ್ನೇಹಿತೆ ಒಬ್ಬರು ಮನೆಯಲ್ಲಿ ಜಗಳ ಮಾಡಿಕೊಂಡು ಹೋಗಿ ಸುಮಾರು ನಾಲ್ಕು ವರ್ಷ ಆಯ್ತು ಎಂದಿದ್ದು, ಅವರ ಬಗ್ಗೆ ನೆನಪಿಸಿಕೊಂಡಿರುವ ದಿವ್ಯಾ ಆಲೂರ್ ಅವರು ಯಾರಿಗಾದರೂ ಸುಳಿವು ಇದ್ದರೆ ತಿಳಿಸಿ ಎಂದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಖ್ಯಾತ ನಿರೂಪಕಿ ದಿವ್ಯಾ ಆಲೂರ್ ಶೇರ್ ಮಾಡಿಕೊಂಡಿರುವ ಈ ವಿಡಿಯೋ 1.1 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಈ ವಿಡಿಯೋಗೆ ಬಳಕೆದಾರರೊಬ್ಬರು, ಒಳ್ಳೆಯ ಸಂದೇಶ ಎಂದಿದ್ದಾರೆ. ಇನ್ನೊಬ್ಬರು, ನೀವು ಹೇಳುವುದು ಸರಿ, ದಯವಿಟ್ಟು ಹಿರಿ ಜೀವಗಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಳ್ಳೆಯ ಸಲಹೆ ಮೇಡಂ ಎಂದಿರುವುದನ್ನು ನೋಡಬಹುದು.
ಇನ್ನಷ್ಟು ವೈರಲ್ ಸುದ್ದಿ ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:18 am, Thu, 22 May 25




