
ಬೆಂಗಳೂರು, ಜನವರಿ 27: ಕೆಲಸಕ್ಕೆಂದು ಬೆಂಗಳೂರಿಗೆ (Bengaluru) ಹೋಗುವ ಯುವಕ ಯುವತಿಯರಿಗೆ ಪ್ರಾರಂಭದಲ್ಲಿ ಈ ನಗರಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ದಿನ ಕಳೆಯುತ್ತ ಹೋದಂತೆ ತಮ್ಮ ಊರಿನಷ್ಟೇ ಹತ್ತಿರವಾಗಿ ಬಿಟ್ಟಿರುತ್ತದೆ. ಕೆಲವರು ಬೆಂಗಳೂರಿನಲ್ಲಿ ಸೆಟಲ್ ಆಗಿ ಬಿಡುತ್ತಾರೆ. ಆದರೆ ಮಹಿಳೆಯೊಬ್ಬರು ನನ್ನ ಸರ್‌ನೇಮ್ ಬೇರೆಯದ್ದೇ ಆಗಿತ್ತು. ತನ್ನ ಹೆಸರಿನ ಜತೆಗೆ ಬೆಂಗಳೂರು ಸರ್‌ನೇಮ್ ಆಗಿ ಬಂದದ್ದು ಹೇಗೆ ಎಂದು ಹೇಳಿದ್ದಾರೆ. ಉಪನಾಮ ಬದಲಾದ ಬಗ್ಗೆ ಹಂಚಿಕೊಂಡಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ.
ವಿಪ್ರಾ ಬೆಂಗಳೂರು (Vipra Bengaluru) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ತನ್ನ ಹೆಸರು ವಿಪ್ರಾ ಬೆಂಗಳೂರು ಎಂದು ಹೇಳಿಕೊಂಡಿದ್ದಾರೆ. ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲೇ. ಆದರೆ, ನನ್ನ ಸರ್‌ನೇಮ್ ಬೇರೆಯದ್ದೇ ಆಗಿತ್ತು. ನನ್ನ ಅಜ್ಜ ತಮ್ಮ ಮಕ್ಕಳಿಗೆ (ನನ್ನ ತಂದೆಗೆ) ಸರ್ ನೇಮ್ ನೀಡಿರಲಿಲ್ಲ. ಆ ಸಮಯದಲ್ಲಿ ಜನರು ತಮ್ಮಸರ್‌ನೇಮ್, ಸ್ಥಾನಮಾನಗಳ ಆಧಾರದ ಮೇಲೆ ಅವರನ್ನು ನಿರ್ಣಯಿಸುತ್ತಾರೆ ಎಂದು ನಂಬಿದ್ದರು. ಹೀಗಾಗಿ ತಮ್ಮ ಮಕ್ಕಳು ಸರ್‌ನೇಮ್ ನೀಡಿರಲಿಲ್ಲ. ಆದರೆ ನಾನು ಹುಟ್ಟಿದಾಗ, ಸರ್‌ನೇಮ್ ಇಡುವುದು ಕಡ್ಡಾಯವಾಯಿತು. ನಾನು ಇಲ್ಲಿ ಜನಿಸಿದ ಕಾರಣ, ಬೆಂಗಳೂರು ನನ್ನ ಸರ್‌ನೇಮ್ ಆಯಿತು ಎಂದು ಹೇಳಿಕೊಂಡಿದ್ದಾರೆ.
ನಮ್ಮ ತಂದೆಯವರಿಗೆ ಒಂದು ಆದರ್ಶವಿತ್ತು. ತಮ್ಮ ಸರ್‌ನೇಮ್ ಇಲ್ಲದೇ ತಮ್ಮ ಮಕ್ಕಳು ಸ್ವತಂತ್ರವಾಗಿ ಬದುಕಬೇಕೆಂಬ ಆಸೆಯಿತ್ತು. ಹಾಗಾಗಿ, ಮದುವೆಗೂ ಮುನ್ನವೇ ತಮಗೆ ಹುಟ್ಟುವ ಮಕ್ಕಳಿಗೆ ತಮ್ಮ ಸರ್ ನೇಮ್ ಇಡಬಾರದೆಂದು ಮೊದಲೇ ನಿರ್ಧರಿಸಿ ಬಿಟ್ಟಿದ್ದರು. ಅವರ ಮದುವೆಯಾದ ನಂತರ ನಾನು ಹುಟ್ಟಿದೆ. ಆಗ ತಮ್ಮ ರೂಢಿಗತ ಸರ್ ನೇಮ್ ಬಿಟ್ಟು ಬೇರೆ ಏನನ್ನು ಇಡಬೇಕೆಂದು ಆಲೋಚನೆ ಮಾಡಿದ್ದರು. ಹೀಗಾಗಿ ಬದುಕು ಕೊಟ್ಟ ಬೆಂಗಳೂರಿನ ಹೆಸರನ್ನೇ ಇಡೋಣ ಎಂದು ತೀರ್ಮಾನಿಸಿ ಬೆಂಗಳೂರು ಎಂದು ನನ್ನ ಹೆಸರಿನ ಜೊತೆಗೆ ಸರ್ ನೇಮ್ ಆಗಿ ಇಟ್ಟರು ಎಂದು ಹೇಳಿರುವುದನ್ನು ನೋಡಬಹುದು.
ಇದನ್ನೂ ಓದಿ: ಜೀವನವನ್ನು ಆನಂದಿಸಲು ಬೆಂಗಳೂರನ್ನು ಹೀಗೆ ಬಳಸಿಕೊಳ್ಳಿ ಎಂದ ಮಹಿಳೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಮ ತಂದೆಯ ಆಲೋಚನೆ ನಿಜಕ್ಕೂ ಚೆನ್ನಾಗಿತ್ತು ಎಂದಿದ್ದಾರೆ. ಮತ್ತೊಬ್ಬರು, ಬೆಂಗಳೂರಿನ ಹುಡುಗಿ ಎಂದು ಕರೆದರೆ, ಮತ್ತೊಬ್ಬರು, ನಿಮ್ಮ ತಂದೆ ಆಗಿನ ಕಾಲದಲ್ಲಿ ಬಹಳ ಮುಂದಿದ್ದರು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Tue, 27 January 26