ಪ್ರಧಾನಿ ಮೋದಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ, ಯುವಜನತೆ ಮಾತ್ರವಲ್ಲದೆ ಅದೆಷ್ಟೋ ಪುಟ್ಟ ಮಕ್ಕಳು ಕೂಡಾ ನಮ್ಮ ದೇಶದ ಪ್ರಧಾನಿಯ ಅಭಿಮಾನಿಗಳು. ಹೀಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಇಷ್ಟಪಡುವವರ ದೊಡ್ಡ ಬಳಗವೇ ಇದೆ. ಇದಕ್ಕೆ ಉದಾಹರಣೆಯಂತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹದ್ದೇ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವಯಸ್ಸಾದ ವ್ಯಕ್ತಿಯೊಬ್ಬರು ಮೈಕ್ ಹಿಡಿದುಕೊಂಡು ಪ್ರಧಾನಿ ಮೋದಿಯವರ ಸರಳ ಸಜ್ಜನಿಕೆಯ ವ್ಯಕ್ತಿತ್ವ, ಅವರು ದೇಶಕ್ಕಾಗಿ ಮಾಡಿದಂತಹ ಅದ್ಭುತ ಕಾರ್ಯಗಳ ಬಗ್ಗೆ ಮನಸಾರೆ ಮಾತನಾಡುತ್ತಾ, ಭಾರತ ರತ್ನ ನಮ್ಮ ಮೋದಿ ಸಾಹೆಬ್ರು…ಎಂದು ಪ್ರಧಾನಿ ಮೋದಿಯವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ನಮೋಬ್ರಿಗೇಡ್ ಆಯೋಜಿಸಿದ್ದ ರಥಯಾತ್ರೆ ಕಾರ್ಯಕ್ರಮದಲ್ಲಿ ಮೈಸೂರಿನ ಮದ್ದೂರು ಸಮೀಪದ ಹಳ್ಳಿಯ ಒಬ್ರು ತಾತಪ್ಪ, ಮೋದಿಯವರ ಜನಪರ ಕಾರ್ಯಗಳು ಮತ್ತು ಅವರ ಸರಳತೆಯ ಬಗ್ಗೆ ಮಾತನಾಡಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ವಿಡಿಯೋವನ್ನು ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ಅಧೀಕೃತ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವೃದ್ಧರೊಬ್ಬರು ಮೈಕ್ ಹಿಡಿದುಕೊಂಡು ಬಹಳ ಉತ್ಸಾಹದಿಂದ ಮೋದಿಯವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡುವುದನ್ನು ಕಾಣಬಹುದು.
This person literally snatched Mike from our volunteers and spoke about @narendramodi during Rathayatra organised by @Namobrigade2
He is from a village near Madduru, Mysuru. He said we are the children of the PM and he looks after us in the same manner. We too blame him… pic.twitter.com/HLhHaulTpq
— Chakravarty Sulibele (@astitvam) December 15, 2023
ವಿಡಿಯೋದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ಕೈಯಲ್ಲಿ ಮೈಕ್ ಹಿಡಿದುಕೊಂಡು ಬಹಳ ಉತ್ಸಾಹದಿಂದ ಮೋದಿಯವರ ಜನಪರ ಕಾರ್ಯಗಳ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ, ಮೋದಿಯವರು ಒಂದೊಂದು ಕೆಲಸನೂ 24 ಗಂಟೆ ಯೋಚನೆ ಮಾಡಿ ಮಾಡ್ತಾರೆ, ನಾವೆಲ್ಲರೂ ಸ್ವಾರ್ಥದಿಂದ ನಮ್ಮ ಲಾಭಕ್ಕಾಗಿ ಯೋಚನೆ ಮಾಡ್ತಿದ್ರೇ, ಆ ಮಹಾನುಭಾವ ಮಾತ್ರ ಪ್ರಜೆಗಳ ಹಿತಾಸಕ್ತಿಗಾಗಿ ದಿನನಿತ್ಯ ಕೆಲಸ ಮಾಡ್ತಿದ್ದಾರೆ. ಮೋದಿ ಸಾಹೆಬ್ರು ಸಾಮಾನ್ಯದವ್ರಲ್ಲ, ಅವರು ಭಾರತ ರತ್ನ ಕನ್ರಪ್ಪ ಎನ್ನುತ್ತಾ ಮೋದಿಯವರ ಸರಳ ಸಜ್ಜನಿಕೆಯ ವ್ಯಕ್ತಿತ್ವ, ಜನಪರ ಕಾರ್ಯಗಳು, ಮತ್ತು ದೇಶದ ಏಳಿಗೆಗಾಗಿ ಅವರು ಮಾಡಿದಂತಹ ಕಾರ್ಯಗಳ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡುತ್ತಾರೆ. ಆ ಸಂದರ್ಭದಲ್ಲಿ ತಾತಪ್ಪನ ಈ ಮಾತಿಗೆ ಅಲ್ಲಿ ನೆರೆದಿರುವ ಜನರೆಲ್ಲರೂ ಶಿಳ್ಳೆ ಚಪ್ಪಾಳೆ ಹೊಡೆಯುವ ದೃಶ್ಯವನ್ನು ಕಾಣಹುದು.
ಇದನ್ನೂ ಓದಿ: ಮೆಟ್ರೋದಲ್ಲಿ ಯುವಕನ ವಿಚಿತ್ರ ಡಾನ್ಸ್ ನೋಡಿ ಪ್ರಯಾಣಿಕರು ಸುಸ್ತೋ ಸುಸ್ತು
ಡಿಸೆಂಬರ್ 15ರಂದು ಹಂಚಿಕೊಳ್ಳಲಾದ ಈ ವಿಡಿಯೋ 31 ಸಾವಿರ ವೀಕ್ಷಣೆಗಳನ್ನು ಪಡದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳು ಹರಿದುಬಂದಿವೆ. ಒಬ್ಬ ಬಳಕೆದಾರರು ಇದು ಪ್ರತಿಯೊಬ್ಬ ದೇಶ ಭಕ್ತರ ಅಭಿಪ್ರಾಯ, ನಿಜವಾಗಿಯೂ ಮೋದಿಜಿ ಒಬ್ಬ ಯುಗ ಪುರುಷ” ಎಂದು ಹೇಳಿದ್ದಾರೆ. ಇನ್ನೂ ಅನೇಕರು ತಾತಪ್ಪನ ಅದ್ಭುತವಾದ ಮಾತುಗಾರಿಕೆಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: