Viral Video: ಬೀದಿಬದಿ ಪೆನ್ನು ಮಾರುತ್ತಿದ್ದ ಹುಡುಗ ಮೊದಲ ಬಾರಿ ಮಾಲ್ ಒಳಗೆ ಹೋದಾಗ ಸಂತಸ ಹೇಗಿತ್ತು ನೋಡಿ
ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವೊಂದು ವಿಡಿಯೋಗಳು ನಿಮ್ಮ ಕಣ್ಣಲ್ಲಿ ಕಣ್ಣೀರು ಬರಿಸುವುದಂತೂ ಖಂಡಿತಾ. ನಿಮ್ಮನ್ನು ಭಾವುಕವಾಗಿಸುವ ಪುಟ್ಟ ಬಾಲಕನ ವಿಡಿಯೋವೊಂದು ಇಲ್ಲಿದೆ ನೋಡಿ. ಈ ವಿಡಿಯೊ ಇದೀಗಾಗಲೇ ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ.
ರಸ್ತೆ ಬದಿ ಟ್ರಾಫಿಕ್ನಲ್ಲಿ ಸಿಲುಕಿಕೊಂಡಾಗ ಸಾಕಷ್ಟು ಮಕ್ಕಳು ಪೆನ್ನು, ಬಲೂನ್ ಮಾರಿಕೊಂಡು ಬರುವುದನ್ನು ನೀವು ಸಾಕಷ್ಟು ಭಾರೀ ಗಮನಿಸಿರಬಹುದು. ಅವರ ಮುಗ್ಧ ನಗುವಿನಿಂದಲೇ ಕೆಲವೊಮ್ಮೆ ವಸ್ತುಗಳು ಅನಿವಾರ್ಯತೆ ಇಲ್ಲದಿದ್ದರೂ ಖರೀದಿಸುವುದುಂಟು. ಆದರೆ ಇಲ್ಲೊಬ್ಬರು ವ್ಯಕ್ತಿ ಬೀದಿಬದಿ ಪೆನ್ನು ಮಾರುತ್ತಿದ್ದ ಹುಡುಗನನ್ನು ಮಾಲ್ಗೆ ಕರೆದುಕೊಂಡು ಹೋಗಿ, ಹೊಸ ಬಟ್ಟೆ ಬರೆ ಶೂಗಳನ್ನು ತೆಗೆದುಕೊಟ್ಟಿದ್ದಾರೆ. ಮೊದಲ ಬಾರಿ ಮಾಲ್ ಒಳಗೆ ಹೋದಾಗ ಮುಗ್ದ ಮಗುವಿನ ಮುಖದಲ್ಲಿ ಮೂಡಿದ ಖುಷಿಯ ನಗು ವಿಡಿಯೊದಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದ್ದು, ಇದೀಗಾಗಲೇ ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ.
ವೈರಲ್ ವಿಡಿಯೊ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಯೂಟ್ಯೂಬ್ ಸಹಾಯದಿಂದ 7 ಭಾಷೆಗಳಲ್ಲಿ ಸುಲಲಿತವಾಗಿ ಮಾತನಾಡಲು ಕಲಿತ 16 ವರ್ಷದ ಬಾಲಕಿ
ಹುಡುಗನನ್ನು ಶಾಪಿಂಗ್‌ಗೆ ಕರೆದುಕೊಂಡು ಹೋದ ವ್ಯಕ್ತಿ:
ವಿಡಿಯೋವನ್ನು @wanderer_tn96 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಪೆನ್ನು ಮಾರುತ್ತಿದ್ದ ಹುಡುಗ ತನ್ನ ತಂದೆ ಸಾವನ್ನಪ್ಪಿರುವುದರಿಂದ ಜೀವನೋಪಾಯಕ್ಕಾಗಿ ಪ್ರತಿದಿನ ಮಾಲ್‌ನ ಹೊರಗೆ ಪೆನ್ನುಗಳನ್ನು ಮಾರಾಟ ಮಾಡಿ ದಿನಕ್ಕೆ 100-150 ರೂಪಾಯಿ ಸಂಪಾದಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆಗ ವ್ಯಕ್ತಿ ನಿನಗೆ ಏನು ಬೇಕು ಎಂದು ಪುಟ್ಟ ಬಾಲಕನಲ್ಲಿ ಕೇಳಿದ್ದಾರೆ. ಪ್ರತಿಕ್ರಿಯೆಯಾಗಿ ಹುಡುಗ ತನಗೆ ಹೊಸ ಬಟ್ಟೆ ಮತ್ತು ತಿನ್ನಲು ಏನಾದರೂ ಬೇಕು ಎಂದು ಹೇಳಿದ್ದಾನೆ. ನಂತರ ವ್ಯಕ್ತಿ ಹುಡುಗನನ್ನು ಮಾಲ್ ಒಳಗೆ ಕರೆದುಕೊಂಡು ಹೋಗಿ, ಬಟ್ಟೆ ಹಾಗೂ ಶೂ ಖರೀದಿಸಿಕೊಟ್ಟಿದ್ದಾರೆ. ಜೊತೆಗೆ ಕೊನೆಯಲ್ಲಿ 500ರೂಪಾಯಿ ನಗದು ಕೂಡ ಕೊಟ್ಟಿರುವುದನ್ನು ಕೂಡ ವಿಡಿಯೊದಲ್ಲಿ ಕಾಣಬಹುದು.’ಪುಟ್ಟ ಬಾಲಕ ಮೊದಲ ಬಾರಿಗೆ ಮಾಲ್ ಒಳಗೆ ಹೋಗಿದ್ದು, ಸಂತೋಷಕ್ಕೆ ಪಾರವೇ ಇಲ್ಲ’ ಎಂದು ವಿಡಿಯೊಗೆ ಕ್ಯಾಪ್ಷನ್ ನೀಡಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: