Viral Video: ಭಾರತ ರತ್ನ ನಮ್ಮ ಮೋದಿ ಸಾಹೇಬ್ರು, ಹಾಡಿ ಹೊಗಳಿದ ಮೈಸೂರಿನ ತಾತಪ್ಪ

ವಯಸ್ಸಾದ ವ್ಯಕ್ತಿಯೊಬ್ಬರು ಪ್ರಧಾನಿ ಮೋದಿಯವರ ಸರಳ ಸಜ್ಜನಿಕೆಯ ವ್ಯಕ್ತಿತ್ವ, ಅವರು ದೇಶಕ್ಕಾಗಿ ಮಾಡಿದಂತಹ ಅದ್ಭುತ ಕಾರ್ಯಗಳ ಬಗ್ಗೆ ಮಾತನಾಡುತ್ತಾ ಭಾರತ ರತ್ನ ನಮ್ಮ ಮೋದಿ ಸಾಹೆಬ್ರು ಎಂದು ಪ್ರಧಾನಿ ಮೋದಿಯವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡುವಂತಹ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.   

Viral Video: ಭಾರತ ರತ್ನ ನಮ್ಮ ಮೋದಿ ಸಾಹೇಬ್ರು, ಹಾಡಿ ಹೊಗಳಿದ ಮೈಸೂರಿನ ತಾತಪ್ಪ
ವೈರಲ್​​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 15, 2023 | 4:37 PM

ಪ್ರಧಾನಿ ಮೋದಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ, ಯುವಜನತೆ ಮಾತ್ರವಲ್ಲದೆ ಅದೆಷ್ಟೋ ಪುಟ್ಟ ಮಕ್ಕಳು ಕೂಡಾ ನಮ್ಮ ದೇಶದ ಪ್ರಧಾನಿಯ ಅಭಿಮಾನಿಗಳು.  ಹೀಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಇಷ್ಟಪಡುವವರ ದೊಡ್ಡ ಬಳಗವೇ ಇದೆ. ಇದಕ್ಕೆ ಉದಾಹರಣೆಯಂತಿರುವ  ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹದ್ದೇ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವಯಸ್ಸಾದ ವ್ಯಕ್ತಿಯೊಬ್ಬರು   ಮೈಕ್ ಹಿಡಿದುಕೊಂಡು ಪ್ರಧಾನಿ ಮೋದಿಯವರ ಸರಳ ಸಜ್ಜನಿಕೆಯ ವ್ಯಕ್ತಿತ್ವ, ಅವರು ದೇಶಕ್ಕಾಗಿ ಮಾಡಿದಂತಹ ಅದ್ಭುತ ಕಾರ್ಯಗಳ ಬಗ್ಗೆ ಮನಸಾರೆ ಮಾತನಾಡುತ್ತಾ, ಭಾರತ ರತ್ನ ನಮ್ಮ ಮೋದಿ ಸಾಹೆಬ್ರು…ಎಂದು ಪ್ರಧಾನಿ ಮೋದಿಯವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.   ಈ ವಿಡಿಯೋ ಇದೀಗ ವೈರಲ್ ಆಗಿದೆ.

ನಮೋಬ್ರಿಗೇಡ್ ಆಯೋಜಿಸಿದ್ದ ರಥಯಾತ್ರೆ ಕಾರ್ಯಕ್ರಮದಲ್ಲಿ ಮೈಸೂರಿನ ಮದ್ದೂರು ಸಮೀಪದ ಹಳ್ಳಿಯ ಒಬ್ರು ತಾತಪ್ಪ, ಮೋದಿಯವರ ಜನಪರ ಕಾರ್ಯಗಳು ಮತ್ತು  ಅವರ ಸರಳತೆಯ ಬಗ್ಗೆ ಮಾತನಾಡಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ವಿಡಿಯೋವನ್ನು ಚಕ್ರವರ್ತಿ ಸೂಲಿಬೆಲೆ ಅವರು  ತಮ್ಮ ಅಧೀಕೃತ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವೃದ್ಧರೊಬ್ಬರು ಮೈಕ್ ಹಿಡಿದುಕೊಂಡು ಬಹಳ ಉತ್ಸಾಹದಿಂದ ಮೋದಿಯವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡುವುದನ್ನು ಕಾಣಬಹುದು.

ವೈರಲ್​​ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:

ವಿಡಿಯೋದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ಕೈಯಲ್ಲಿ ಮೈಕ್ ಹಿಡಿದುಕೊಂಡು ಬಹಳ ಉತ್ಸಾಹದಿಂದ ಮೋದಿಯವರ ಜನಪರ ಕಾರ್ಯಗಳ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ, ಮೋದಿಯವರು  ಒಂದೊಂದು ಕೆಲಸನೂ 24 ಗಂಟೆ ಯೋಚನೆ ಮಾಡಿ ಮಾಡ್ತಾರೆ,  ನಾವೆಲ್ಲರೂ ಸ್ವಾರ್ಥದಿಂದ ನಮ್ಮ ಲಾಭಕ್ಕಾಗಿ ಯೋಚನೆ ಮಾಡ್ತಿದ್ರೇ, ಆ ಮಹಾನುಭಾವ ಮಾತ್ರ ಪ್ರಜೆಗಳ ಹಿತಾಸಕ್ತಿಗಾಗಿ ದಿನನಿತ್ಯ ಕೆಲಸ ಮಾಡ್ತಿದ್ದಾರೆ. ಮೋದಿ ಸಾಹೆಬ್ರು ಸಾಮಾನ್ಯದವ್ರಲ್ಲ, ಅವರು ಭಾರತ ರತ್ನ ಕನ್ರಪ್ಪ ಎನ್ನುತ್ತಾ ಮೋದಿಯವರ ಸರಳ ಸಜ್ಜನಿಕೆಯ ವ್ಯಕ್ತಿತ್ವ, ಜನಪರ ಕಾರ್ಯಗಳು, ಮತ್ತು ದೇಶದ ಏಳಿಗೆಗಾಗಿ ಅವರು ಮಾಡಿದಂತಹ ಕಾರ್ಯಗಳ  ಬಗ್ಗೆ ಹೊಗಳಿಕೆಯ ಮಾತುಗಳನ್ನಾಡುತ್ತಾರೆ. ಆ ಸಂದರ್ಭದಲ್ಲಿ ತಾತಪ್ಪನ ಈ ಮಾತಿಗೆ ಅಲ್ಲಿ ನೆರೆದಿರುವ ಜನರೆಲ್ಲರೂ ಶಿಳ್ಳೆ ಚಪ್ಪಾಳೆ ಹೊಡೆಯುವ  ದೃಶ್ಯವನ್ನು ಕಾಣಹುದು.

ಇದನ್ನೂ ಓದಿ: ಮೆಟ್ರೋದಲ್ಲಿ ಯುವಕನ ವಿಚಿತ್ರ ಡಾನ್ಸ್  ನೋಡಿ ಪ್ರಯಾಣಿಕರು ಸುಸ್ತೋ ಸುಸ್ತು

ಡಿಸೆಂಬರ್ 15ರಂದು ಹಂಚಿಕೊಳ್ಳಲಾದ  ಈ ವಿಡಿಯೋ 31 ಸಾವಿರ ವೀಕ್ಷಣೆಗಳನ್ನು ಪಡದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳು ಹರಿದುಬಂದಿವೆ. ಒಬ್ಬ ಬಳಕೆದಾರರು ಇದು ಪ್ರತಿಯೊಬ್ಬ ದೇಶ ಭಕ್ತರ ಅಭಿಪ್ರಾಯ, ನಿಜವಾಗಿಯೂ  ಮೋದಿಜಿ ಒಬ್ಬ ಯುಗ ಪುರುಷ” ಎಂದು ಹೇಳಿದ್ದಾರೆ. ಇನ್ನೂ ಅನೇಕರು ತಾತಪ್ಪನ ಅದ್ಭುತವಾದ ಮಾತುಗಾರಿಕೆಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?