ತರಕಾರಿ ಮಾರಾಟಗಾರನೊಬ್ಬನು ಚರಂಡಿ ನೀರಿನಲ್ಲಿ ಕೊತ್ತಂಬರಿ ಸೊಪ್ಪನ್ನು ತೊಳೆಯುತ್ತಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಭೋಪಾಲ್ನ ಸಿಂಧಿ ಮಾರ್ಕೆಟ್ನಲ್ಲಿ ಈ ಘಟನೆ ನಡೆದಿದ್ದು, ಚರಂಡಿ ನೀರಿನಲ್ಲಿ ತರಕಾರಿ ತೊಳೆಯುವುದು ಹಾನಿಕಾರಕ ಎಂದು ವಿಡಿಯೊ ಮಾಡಿದ ವ್ಯಕ್ತಿ ಹೇಳುತ್ತಿರುವುದು ಕೇಳಿ ಬರುತ್ತದೆ. ಕೊಳಕು ನೀರಿನಲ್ಲಿ ತಿನ್ನುವ ತರಕಾರಿಗಳನ್ನು ತೊಳೆಯಬೇಡಿ ಎಂದು ವ್ಯಕ್ತಿ ಪದೇ ಪದೇ ಹೇಳುತ್ತಿದ್ದರೂ, ಮಾರಟಗಾರನು ಗಮನ ಕೊಡಲಿಲ್ಲ. ಈ ದೃಶ್ಯ ನೋಡಿದರೆ ನಿನ್ನ ಬಳಿ ಯಾರೂ ತರಕಾರಿ ಖರೀದಿಸುವುದಿಲ್ಲ ಎಂದು ವ್ಯಕ್ತಿ ಹೇಳುತ್ತಿದ್ದರೂ ಸಹ ಮಾರಾಟಗಾರ ನಿರ್ಲಕ್ಷ್ಯ ತೋರಿಸುತ್ತಿದ್ದಾನೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಟ್ವಿಟರ್ನಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದೆ. ಗಮನವಿರಲಿ, ನಿಮ್ಮ ಆರೋಗ್ಯದ ಜೊತೆ ಆಟವಾಡಬೇಡಿ. ನೀವು ಇಂತಹ ತರಕಾರಿಗಳನ್ನು ಖರೀದಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಭೋಪಾಲ್ನ ಸಿಂಧಿ ಕಾಲೊನಿಯಲ್ಲಿ ತರಕಾರಿಗಳನ್ನು ಚರಂಡಿ ನೀರಿನಲ್ಲಿ ತೊಳೆಯಲಾಗುತ್ತಿದೆ ದಯವಿಟ್ಟು ಈ ವಿಷಯದ ಬಗ್ಗೆ ಗಮನವಿರಲಿ ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೊ ಹಂಚಿಕೊಳ್ಳಲಾಗಿದೆ.
सावाधान देखिए आपकी सेहत से कैसे हो रहा खिलवाड़, कंही पर ऐसी सब्जी तो नही खरीद रहे ,भोपाल के सिंधी कॉलोनी में नाली के पानी से धुक रही सब्जी @bhupendrasingho जी @CollectorBhopal @digpolicebhopal मामले पर संज्ञान लेकर उचित कार्यवाही का आग्रह है , @KamalPatelBJP @DrPRChoudhary pic.twitter.com/10Em39YxPz
— sudhirdandotiya (@sudhirdandotiya) October 26, 2021
ವಿಡಿಯೊ ವೈರಲ್ ಆದ ನಂತರ, ಮಾರಾಟಗಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ. ಭೋಪಾಲ್ನ ಆಹಾರ ಮತ್ತು ನಾಗರಿಕ ಸರಬರಾಜು, ಸ್ಥಳೀಯ ಆರೋಗ್ಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಮಾರಾಟಗಾರನ ಬಗ್ಗೆ ತಿಳಿದು ಕಠಿಣ ಕ್ರಮ ಕೈಗೊಳ್ಳಬೇಕು, ನಾಗರಿಕರ ಆರೋಗ್ಯದೊಂದಿಗೆ ಯಾರೂ ಆಟವಾಡುವಂತಿಲ್ಲ ಎಂದು ಓರ್ವರು ಹೇಳಿದ್ದಾರೆ.
सावाधान देखिए आपकी सेहत से कैसे हो रहा खिलवाड़, कंही पर ऐसी सब्जी तो नही खरीद रहे ,भोपाल के सिंधी कॉलोनी में नाली के पानी से धुक रही सब्जी @bhupendrasingho जी @CollectorBhopal @digpolicebhopal मामले पर संज्ञान लेकर उचित कार्यवाही का आग्रह है , @KamalPatelBJP @DrPRChoudhary pic.twitter.com/10Em39YxPz
— sudhirdandotiya (@sudhirdandotiya) October 26, 2021
सावाधान देखिए आपकी सेहत से कैसे हो रहा खिलवाड़, कंही पर ऐसी सब्जी तो नही खरीद रहे ,भोपाल के सिंधी कॉलोनी में नाली के पानी से धुक रही सब्जी @bhupendrasingho जी @CollectorBhopal @digpolicebhopal मामले पर संज्ञान लेकर उचित कार्यवाही का आग्रह है , @KamalPatelBJP @DrPRChoudhary pic.twitter.com/10Em39YxPz
— sudhirdandotiya (@sudhirdandotiya) October 26, 2021
ಇದನ್ನೂ ಓದಿ:
Shocking Video: ಡಾಬಾದಲ್ಲಿ ಎಣ್ಣೆ, ನೀರಿನ ಬದಲಿಗೆ ಉಗುಳುತ್ತ ತಂದೂರಿ ರೋಟಿ ತಯಾರಿಸುತ್ತಿದ್ದ ಕೆಲಸಗಾರ ಅರೆಸ್ಟ್!
Published On - 9:54 am, Fri, 29 October 21