Viral Video : ಹಬ್ಬದ ಸೀಸನ್ ಬರುತ್ತಿದ್ದಂತೆ ಆನ್ಲೈನ್ ಶಾಪಿಂಗ್ ವೆಬ್, ಆ್ಯಪ್ಗಳು ಪೈಪೋಟಿಯ ಮೇಲೆ ರಿಯಾಯ್ತಿ, ಕೊಡುಗೆಗಳನ್ನು ಕೊಡಲು ಮುಗಿಬೀಳುತ್ತವೆ. ಆರ್ಡರ್ ಮಾಡಿದ ಸಾಮಾನುಗಳಿಗಾಗಿ ಕುತೂಹಲದಿಂದ ಕಾಯುತ್ತ ಕುಳಿತುಕೊಳ್ಳುವ ಈ ಆ್ಯಪ್ಗಳು ಕೆಲವೊಮ್ಮೆ ಅರಗಿಸಿಕೊಳ್ಳಲಾರದಂಥ ಸರ್ಪ್ರೈಝ್ ನೀಡಿಬಿಡುತ್ತವೆ. ದೆಹಲಿಯ ವ್ಯಕ್ತಿಯೊಬ್ಬರು ಲ್ಯಾಪ್ಟಾಪ್ ಬದಲಿಗೆ ಘಡಿ ಸಾಬೂನುಗಳನ್ನು ಪಡೆದದ್ದನ್ನು ಓದಿದ್ದೀರಿ. ಅಂಥದೇ ಇನ್ನೊಂದು ಘಟನೆ ಬಿಹಾರದಲ್ಲಿ ನಡೆದಿದೆ. ಮೀಶೋ ಅಪ್ಲಿಕೇಶನ್ ಮೂಲಕ ಡ್ರೋನ್ ಕ್ಯಾಮೆರಾ ಆರ್ಡರ್ ಮಾಡಿದ್ದ ಬಿಹಾರದ ಚಿಲ್ಲರೆ ಅಂಗಡಿ ವ್ಯಾಪಾರಿ ಚೇತನ್ಕುಮಾರ್, ಕ್ಯಾಮೆರಾ ಬದಲಾಗಿ ಒಂದು ಕೇಜಿ ಆಲೂಗಡ್ಡೆಯನ್ನು ಪಡೆದ ವಿಡಿಯೋ ಇದೀಗ ವೈರಲ್ ಆಗಿದೆ.
ऑनलाइन शॉपिंग करना पड़ा महँगा, युवक ने मंगाया ड्रोन, निकला आलू | Unseen India
ಇದನ್ನೂ ಓದಿपूरा वीडियो- https://t.co/KxZ0RsZwUl pic.twitter.com/s81XVfE5Vb
— UnSeen India (@USIndia_) September 26, 2022
ಈ ವಿಡಿಯೋದಲ್ಲಿ ಗ್ರಾಹಕರು ಪಾರ್ಸೆಲ್ ತೆರೆಯಲು ಮಿಶೋ ಡೆಲಿವರಿ ಏಜೆಂಟ್ಗೆ ಹೇಳುತ್ತಾರೆ. ಡೆಲಿವರಿ ಏಜೆಂಟ್ ತೆರೆದು ನೋಡಿದಾಗ ಆದಲ್ಲಿ ಡ್ರೋನ್ ಕ್ಯಾಮೆರಾ ಬದಲಾಗಿ ಒಂದು ಕೇಜಿ ತೂಗುವ 10 ಆಲೂಗಡ್ಡೆಗಳು ಕಾಣಿಸುತ್ತವೆ. ಈ ವಿಷಯವಾಗಿ ನನಗೇನು ಗೊತ್ತಿಲ್ಲ ಎಂದು ಡೆಲಿವರಿ ಏಜೆಂಟ್ ಹೇಳುತ್ತಾನೆ.
ಚೇತನಕುಮಾರ್ ಆರ್ಡರ್ ಮಾಡಿದ ಡ್ರೋನ್ ಕ್ಯಾಮೆರಾದ ಬೆಲೆ ಮಾರುಕಟ್ಟೆಯಲ್ಲಿ ರೂ. 84,999. ಆದರೆ ಮೀಶೋನಲ್ಲಿ ಕೇವಲ ರೂ. 10,212. ಆಗ ಅನುಮಾನಗೊಂಡ ಚೇತನ್ಕುಮಾರ್ ಆರ್ಡರ್ ಮಾಡುವ ಮೊದಲು ಕಂಪೆನಿಯವನ್ನು ಸಂಪರ್ಕಿಸಿ ರಿಯಾಯ್ತಿ ದರವನ್ನು ಖಚಿತಪಡಿಸಿಕೊಂಡಿದ್ದಾರೆ. ಹೌದು ಇದು ಆಫರ್ ಎಂದು ಮೀಶೋ ತಿಳಿಸಿದೆ. ಆನಂತರವೇ ಆನ್ಲೈನ್ಮೂಲಕ ಪೂರ್ತಿ ಹಣಪಾವತಿ ಮಾಡಿದ್ಧಾರೆ. ಆದರೆ ನಂತರ ಈ ಫಜೀತಿ!
ಹುಷಾರು ಈ ಆಫರ್ಗಳಿಗೆ ಮೊರೆ ಹೋಗಿ ಹಣ ಕಳೆದುಕೊಂಡೀರಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:21 pm, Tue, 27 September 22