Bill Gates : ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಇತ್ತೀಚೆಗೆ ತಮ್ಮ ಪಾಡ್‌ಕಾಸ್ಟ್ ‘ಅನ್ಕನ್ಫ್ಯೂಸ್ ಮೀ (Unconfuse Me)’ಗೆ ಖಾನ್ ಅಕಾಡೆಮಿಯ ಸಂಸ್ಥಾಪಕ ಸಲ್ ಖಾನ್ (Sal Khan) ಅವರನ್ನು ಸಂದರ್ಶಿಸಿದ್ದರು. ನಾಲ್ಕು ದಿನಗಳ ಹಿಂದೆ ಯೂಟ್ಯೂಬ್ನಲ್ಲಿ ಹಂಚಿಕೊಂಡ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ಎಪಿಡೋಡ್ನಲ್ಲಿ ಬಿಲ್ಗೇಟ್ಸ್ ಸಾಕಷ್ಟು ವಿಷಯಗಳನ್ನು ಚರ್ಚಿಸುತ್ತಾ ‘ಸಲ್ ಖಾನ್ ಮತ್ತು ಸಲ್ಮಾನ್ ಖಾನ್ ನಡುವೆ ಏನಾದರೂ ಗೊಂದಲ ಉಂಟಾಗಿದ್ದಿದೆಯಾ? ಎಂದು ಸಲ್ ಖಾನ್ ಅವರಿಗೆ ಕೇಳಿದಾಗ, ‘2015ರಲ್ಲಿ ಸಲ್ಮಾನ್ ಖಾನ್ ಅಭಿಮಾನಿಗಳಿಂದ ಸಾಕಷ್ಟು ಇಮೇಲ್ಗಳು ನನ್ನ ಇನ್ಬಾಕ್ಸ್ಗೆ ಬಂದಿರುವುದು ನಿಜ’ ಎಂದು ಅವರು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ : Viral Video: ಈ ಬಾರ್ಬಿ ಭಾರತದ ಬಡಕುಟುಂಬದಲ್ಲಿ ಜನಿಸಿದಾಕೆ, ಏನೀಗ? ಭಾವುಕರಾದ ನೆಟ್ಟಿಗರು
ಖಾನ್ ಅಕಾಡೆಮಿಯು ಅಮೆರಿಕದ ಲಾಭರಹಿತ ಶಿಕ್ಷಣ ಸಂಸ್ಥೆಯಾಗಿದ್ದು ಜಗತ್ತಿನಾದ್ಯಂತ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಶೈಕ್ಷಣಿಕ ಸಹಾಯ ಮಾಡುತ್ತಿದೆ. ಇದರ ಸಂಸ್ಥಾಪಕರಾದ ಸಲ್ ಖಾನ್ ಅವರನ್ನು ತಮ್ಮ ಪಾಡ್ಕಾಸ್ಟ್ಗೆ ಸಂದರ್ಶಿಸುವ ಸಮಯದಲ್ಲಿ ಬಿಲ್ ಗೇಟ್ಸ್ ಸಲ್ಮಾನ್ ಖಾನ್ನ ಚಿತ್ರವೊಂದನ್ನು ತೋರಿಸಿ, ‘ಸಲ್ ಖಾನ್ ಎಂದು ವೆಬ್ ಸರ್ಚ್ ಕೊಟ್ಟರೆ ಸಲ್ಮಾನ್ ಖಾನ್ ಬಗ್ಗೆ ವಿವರ ಬರುವುದಲ್ಲವೆ?’ ಎಂದು ಕೇಳಿದರು. ಆಗ ಸಲ್ ಖಾನ್, ‘ಹೌದು, ಖಾನ್ ಅಕಾಡೆಮಿ ಶುರುಮಾಡಿದ ಹೊತ್ತಿನಲ್ಲಿ ಸಲ್ಮಾನ್ ಖಾನ್ ಅಭಿಮಾನಿಗಳಿಂದ ನನಗೆ ಸಾಕಷ್ಟು ಇಮೇಲ್ಗಳು ಬಂದಿದ್ದವು. ‘ನಿಮ್ಮನ್ನು ನಾನು ಮೊದಲಿನಿಂದಲೂ ಪ್ರೀತಿಸುತ್ತಿದ್ದೇನೆ. ಆದರೆ ನೀವು ಗಣಿತ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಬಗ್ಗೆ ತಿಳಿದಿರಲಿಲ್ಲ’ ಎಂದು ಅನೇಕರು ಪತ್ರ ಬರೆದಿದ್ದರು’ ಎಂದಿದ್ದಾರೆ.
‘2015ರಲ್ಲಿ ನಾನು ಭಾರತಕ್ಕೆ ಹೋದಾಗ ಒಂದು ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ರೊಂದಿಗೆ ವೇದಿಕೆ ಹಂಚಿಕೊಂಡಿದ್ದೆ. ನಮ್ಮಿಬ್ಬರ ಹೆಸರಿನಲ್ಲಿ ಸಾಮ್ಯತೆ ಇರುವ ಕಾರಣಕ್ಕಾಗಿಯೇ ಚಾನೆಲ್ವೊಂದು ನಮ್ಮಿಬ್ಬರ ನೇರ ಸಂದರ್ಶನ ಮಾಡಿತ್ತು’ ಎನ್ನುವುದನ್ನು ಈ ಸಂದರ್ಭದಲ್ಲಿ ಅವರು ನೆನಪಿಸಿಕೊಂಡಿದ್ದಾರೆ. ಮುಂದುವರಿದ ಬಿಲ್ ಗೇಟ್, ‘ಕೃತಕ ಬುದ್ಧಿಮತ್ತೆಯು ಶೈಕ್ಷಣಿಕವಾಗಿ ಯಾವ ರೀತಿ ಮಾರ್ಪಾಡುಗಳನ್ನು ತರಬಹುದು? AI ಯುಗದಲ್ಲಿ ತರಗತಿ ಬೋಧನೆ ಯಾವ ಸ್ವರೂಪಕ್ಕೆ ತಿರುಗಬಹುದು?’ ಎಂದಾಗ, ಸಲ್ ಖಾನ್ ತಮ್ಮ ನೆಚ್ಚಿನ ಶಿಕ್ಷಕರ ಬಗ್ಗೆ ಮತ್ತು ಅವರು ಬೋಧಿಸಿದ ವಿಷಯಗಳ ಬಗ್ಗೆ ನೆನಪುಗಳನ್ನು ಕೆದಕಿದ್ದಾರೆ.
ಬಿಲ್ ಗೇಟ್ ತಮ್ಮ ಎರಡನೇ ಪಾಡ್ಕಾಸ್ಟ್ನಲ್ಲಿ ಸಲ್ ಖಾನ್ ಅವರ ಸಂದರ್ಶನ ಮಾಡಿದ್ದಾರೆ. ಆಗಸ್ಟ್ 11ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ ಸುಮಾರು 27,000 ಜನರು ನೋಡಿದ್ದಾರೆ. ಸುಮಾರು 700 ಜನರು ಲೈಕ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:22 pm, Wed, 16 August 23