ದೇಶದ ಪ್ರಧಾನಿ ಯಾರೆಂದು ಹೇಳಲು ವಿಫಲನಾದ ವರ: ಮದುವೆ ಕ್ಯಾನ್ಸಲ್ ಮಾಡಿಕೊಂಡ ವಧು, ಅಲ್ಲೇ ಆತನ ತಮ್ಮನನ್ನು ಮದುವೆಯಾದಳು
ವರನಿಗೆ ದೇಶದ ಪ್ರಧಾನ ಮಂತ್ರಿ ಯಾರೆಂಬುದು ಗೊತ್ತಾಗಿಲ್ಲ, ಉತ್ತರಿಸಲು ತಿಣುಕಾಡಿದ್ದಾನೆ. ಉತ್ತರ ಹೇಳಲಾಗದ ಕಾರಣ ವಧು ತನ್ನ ಮದುವೆಯನ್ನು ರದ್ದುಪಡಿಸಿದ ಘಟನೆ ಕಳೆದ ಶನಿವಾರ ನಡೆದಿದೆ.
ಗಾಜಿಪುರ: ಇಂದು ವಿಶ್ವ ಯೋಗ ದಿನಾಚರಣೆ. ಆದರೆ ಇದು ಯಾರ ಯೋಗವೋ!? ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆಯಲ್ಲಿ, ದೇಶದ ಪ್ರಧಾನಿ ಯಾರು ಎಂದು ಉತ್ತರಿಸುವಂತೆ ವರನಿಗೆ (Bridegroom) ವಧು ಕೇಳಿದಳು. ಆದರೆ ವರನಿಗೆ ದೇಶದ ಪ್ರಧಾನ ಮಂತ್ರಿ (Prime Minister) ಯಾರೆಂಬುದು ಗೊತ್ತಾಗಿಲ್ಲ, ಉತ್ತರಿಸಲು ತಿಣುಕಾಡಿದ್ದಾನೆ. ಅದರೆ ಉತ್ತರ ಹೇಳಲಾಗದ ಕಾರಣ ವಧು ತನ್ನ ಮದುವೆಯನ್ನು ರದ್ದುಪಡಿಸಿದ ಘಟನೆ ಕಳೆದ ಶನಿವಾರ ನಡೆದಿದೆ. ಇನ್ನು ವಿವರಗಳಿಗೆ ಹೋದರೆ… ಆಕೆ ತಕ್ಷಣವೇ ಅಲ್ಲೇ ಇದ್ದ ವರನ ಕಿರಿಯ ಸಹೋದರನನ್ನು ಮದುವೆಯಾದಳು (Wedding). ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ.
ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಸೀರಪುರ ಗ್ರಾಮದ ರಾಮ ಅವತಾರ ಎಂಬುವವರ ಪುತ್ರ ಶಿವಶಂಕರ್ (27) ಹಾಗೂ ಕರಂದ ಪೊಲೀಸ್ ಠಾಣೆ ವ್ಯಾಪ್ತಿಯ ಬಸಂತ್ ಪಟ್ಟಿ ಗ್ರಾಮದ ಲಖೇಡು ರಾಮ್ ಅವರ ಪುತ್ರಿ ರಂಜನಾ ಅವರೊಂದಿಗೆ ಜೂನ್ 11ರಂದು ವಿವಾಹ ನೆರವೇರಿತು. ಹಿರಿಯರು ಇವರಿಬ್ಬರಿಗೂ 6 ತಿಂಗಳ ಹಿಂದೆ ಮದುವೆ ಮಾಡಿಸಿದ್ದರು.
ಅಂದಿನಿಂದ ಮೊಬೈಲ್ ಮೂಲಕವೇ ಇವರ ಮಾತುಕತೆ ಸಂಪರ್ಕ ಏರ್ಪಟ್ಟಿತ್ತು. ಆ ಮದುವೆಯ ನಂತರ ವಧುವಿನ ಮನೆಯಲ್ಲಿ ಜೂನ್ 12 ರಂದು ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಸಮಾರಂಭದಲ್ಲಿ ಶಿವಶಂಕರ್ ಅವರಿಗೆ ಪತ್ನಿ ರಂಜನಾ ಮತ್ತು ಆಕೆಯ ಸೋದರ ಮಾವ ಸ್ಪೆಷಲ್ ಕ್ಲಾಸ್ ತೆಗೆದುಕೊಂಡು, ಕೆಲವು ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿದ್ದಾರೆ.
ಅದರ ಭಾಗವಾಗಿ ಪತ್ನಿ ರಂಜನಾ ದೇಶದ ಪ್ರಧಾನಿಯ ಹೆಸರು ಹೇಳುವಂತೆ ಶಿವಶಂಕರ್ ಗೆ ಕೇಳಿದ್ದಾರೆ . ಆದರೆ ಶಿವಶಂಕರ್ ಅವರು ದೇಶದ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಹೇಳಲು ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿ, ವಧುವಿನ ಸಂಬಂಧಿಕರು ಅವನನ್ನು ಅಪಹಾಸ್ಯ ಮಾಡಿದ್ದಾರೆ. ಮತ್ತು ಅವನನ್ನು ದಡ್ಡ ಎಂದು ಪರಿಗಣಿಸಿದ್ದಾರೆ.
ಇದು ಅವಮಾನಕರ ಸಂಗತಿ ಎಂದು ಬಗೆದ ವಧು ರಂಜನಾ… ಶಿವಶಂಕರ್ ಜೊತೆಗಿನ ಮದುವೆಯನ್ನು ರದ್ದುಗೊಳಿಸಿ, ಆತನ ಕಿರಿಯ ಸಹೋದರ ಅನಂತ್ ಅವರನ್ನು ಆ ಸ್ಥಳದಲ್ಲೇ ವಿವಾಹವಾಗಿದ್ದಾಳೆ. ಇನ್ನು ಶಿವಶಂಕರ್ ಜೊತೆ ಬಂದಿದ್ದ ಚಿಕ್ಕಪ್ಪ ರಾಮ್ ಅವತಾರ್ ಅವರು ತಮ್ಮಸೊಸೆ ಕಿರಿಯನಾದ ಅನಂತನನ್ನು ಮದುವೆಯಾಗುವುದನ್ನು ವಿರೋಧಿಸಿದರು. ವಧು ಮತ್ತು ಕಿರಿಯ ಮಗ ಸಂಸಾರ ಹೂಡಲು ಮದುವೆಯಾಗುವುದಕ್ಕೆ ನಿರಾಕರಿಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ