Viral: ಇಂಟರ್ನ್​ಶಿಪ್​ಗಾಗಿ ವಿಮಾನಪ್ರಯಾಣ; ಅಮೆರಿಕದ ಈ ಯುವತಿ ಇಂಥ ಉಪಾಯ ಹೂಡಿದ್ದೇಕೆ?

America: 21 ವರ್ಷದ ಯುವತಿ ನ್ಯೂಜೆರ್ಸಿಯಲ್ಲಿ ಇಂಟರ್ನ್​ಶಿಪ್​ ಮಾಡುತ್ತಿದ್ದಾಳೆ. ದಕ್ಷಿಣ ಕೆರೋಲಿನಾದಿಂದ ನ್ಯೂಜೆರ್ಸಿಗೆ ವಾರಕ್ಕೊಮ್ಮೆ ವಿಮಾನಿನಲ್ಲಿ ಪ್ರಯಾಣಿಸುತ್ತಾಳೆ. ಬಾಡಿಗೆ ಮನೆಗಿಂತ ವಿಮಾನ ಪ್ರಯಾಣ ಅಗ್ಗ ಎನ್ನುತ್ತಾಳೆ ಈಕೆ.

Viral: ಇಂಟರ್ನ್​ಶಿಪ್​ಗಾಗಿ ವಿಮಾನಪ್ರಯಾಣ; ಅಮೆರಿಕದ ಈ ಯುವತಿ ಇಂಥ ಉಪಾಯ ಹೂಡಿದ್ದೇಕೆ?
ಅಮೆರಿಕದ ಸೋಫಿಯಾ ಸೆಲೆಂಟಾನೋ
Follow us
| Updated By: ಶ್ರೀದೇವಿ ಕಳಸದ

Updated on:Jun 20, 2023 | 4:02 PM

Internship: ಇರುವೆ ಭಾರ ಇರುವೆಗೆ, ಆನೆ ಭಾರ ಆನೆಗೆ ಎಂಬಂತೆ ಅವರವರ ಭಾರ ಅವರವರಿಗೆ. ಆದರೂ ಆ ಭಾರಗಳನ್ನು ಕಡಿಮೆ ಮಾಡಿಕೊಳ್ಳಲು ಕೆಲ ಉಪಾಯಗಳಿರುತ್ತವೆ, ಯೋಚಿಸಬೇಕಷ್ಟೇ. ಇದೀಗ ವೈರಲ್ ಆಗುತ್ತಿರುವ ಈ ಲಿಂಕ್ಡ್​ಇನ್​ ಪೋಸ್ಟ್​ನ ಸಾರಾಂಶ ಗಮನಿಸಿ. ಅಮೆರಿಕದ ಯುವತಿ ಇಂಟರ್ನ್​ಶಿಪ್​ಗೆಂದು ಪ್ರತೀ ವಾರವೂ ನ್ಯೂಜೆರ್ಸಿಗೆ ವಿಮಾನದಲ್ಲಿ ಪ್ರಯಾಣಿಸುತ್ತಾಳೆ. ಅಚ್ಚರಿಯಾಗುತ್ತಿದೆಯಾ? ಹೌದು, ಆಕೆ ಬಾಡಿಗೆಯ ಹಣವನ್ನು ಉಳಿಸಲು ಈ ಉಪಾಯ ಕಂಡುಕೊಂಡಿದ್ದಾಳೆ.

American Woman travel to internship via airplane to save on rent money in new jersey

ಸೋಫಿಯಾ ಲಿಂಕ್ಡ್​ ಇನ್​ ಪೋಸ್ಟ್​

21 ವರ್ಷದ ಸೋಫಿಯಾ ಸೆಲೆಂಟಾನೋ ನ್ಯೂಜೆರ್ಸೆಯಲ್ಲಿರುವ ಒಗಿಲ್ವಿ ಹೆಲ್ತ್​ ಎಂಬ ಕಂಪೆನಿಯಲ್ಲಿ ಇಂಟರ್ನ್​ಶಿಪ್​ ಮಾಡುತ್ತಿದ್ದಾಳೆ. ದಕ್ಷಿಣ ಕೆರೋಲಿನಾದಿಂದ ನ್ಯೂಜೆರ್ಸಿಗೆ (New Jersy) ವಾರಕ್ಕೊಮ್ಮೆ ವಿಮಾನಿನಲ್ಲಿ ಪ್ರಯಾಣಿಸುತ್ತಾಳೆ. ಇದಕ್ಕೆ ಕಾರಣ ನ್ಯೂಜೆರ್ಸಿಯಲ್ಲಿ ಬಾಡಿಗೆ ಮನೆಗಳಿಗಿಂತ ವಿಮಾನ ಪ್ರಯಾಣದ ಟಿಕೆಟ್​ ಅಗ್ಗ ಎಂಬ ಕಾರಣಕ್ಕೆ.

ಇದನ್ನೂ ಓದಿ : Viral: ಯಾರಲ್ಲಿ ಸ್ವಲ್ಪ ಇದನ್ನು ತೆರೆಯಿರಿ; ಶವಪೆಟ್ಟಿಗೆಯೊಳಗಿದ್ದ ಮಹಿಳೆ ತಟ್ಟಿದಾಗ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆಲೆಂಟಾನೋ ತನ್ನ ಪೋಷಕರೊಂದಿಗೆ ನ್ಯೂಜೆರ್ಸಿಯ ಬಾಡಿಗೆ ಮನೆ ಅಥವಾ ನ್ಯೂಯಾರ್ಕ್​ನಲ್ಲಿ ಅಪಾರ್ಟ್​ಮೆಂಟ್​ನಲ್ಲಿ ವಾಸಿಸತೊಡಗಿದರೆ ಖರ್ಚು ಎಷ್ಟಾಗಬಹುದೆಂದು ಉಲ್ಲೇಖಿಸಿದ್ದಾಳೆ. Apartments.com ಮತ್ತು Renthop ನ ಮಾಹಿತಿಯ ಪ್ರಕಾರ, ಪಾರ್ಸಿಪ್ಪನಿಯ (Parsippany) ಸ್ಟುಡಿಯೋ ಅಪಾರ್ಟ್​ಮೆಂಟ್​ನ ಬಾಡಿಗೆ ತಿಂಗಳಿಗೆ ಸುಮಾರು 1,730 ಡಾಲರ್​ ಆಗಿದ್ದರೆ, ನ್ಯೂಯಾರ್ಕ್‌ನಲ್ಲಿ ಇದು 3,500 ಡಾಲರ್. ಆಹಾರ, ಪೆಟ್ರೋಲ್ ಮತ್ತು ಇನ್ನಿತರೇ ಖರ್ಚುಗಳು ಇದರಲ್ಲಿ ಸೇರ್ಪಡೆಯಾಗಿಲ್ಲ.

ಇದನ್ನೂ ಓದಿ : Viral: ವೃಂದಾವನದ ಹೋಳಿ ಸಂಭ್ರಮದಲ್ಲಿ ಮುಕೇಶ್ ಅಂಬಾನಿ, ಎಲಾನ್​, ಝುಕರ್​ಬರ್ಗ್​?

“ನನ್ನ ಇಂಟರ್ನ್‌ಶಿಪ್‌ನ ಮೊದಲ ದಿನ ಹೇಗಿತ್ತೆಂದು ಟಿಕ್‌ಟಾಕ್​ನಲ್ಲಿ ಹಂಚಿಕೊಂಡಿದ್ದೇನೆ. ನನ್ನ ಪ್ರಯಾಣದ ಅನುಭವ ಮತ್ತು ಖರ್ಚಿನ ವಿವರವನ್ನು ಆ ವಿಡಿಯೋದಲ್ಲಿ ವಿವರಿಸಿದ್ದೇನೆ. ಈ ವಿಧಾನ ನನಗಂತೂ ಆರ್ಥಿಕ ಪ್ರಯೋಜನವನ್ನೇ ಒದಗಿಸಿದೆ. ತಿಂಗಳ ಬಾಡಿಗೆ 3,400 ಡಾಲರ್ ಪಾವತಿಸುವ ಬದಲು ನ್ಯೂಜೆರ್ಸಿಗೆ 100 ಡಾಲರ್ ಕೊಟ್ಟು ರೌಂಟ್​ ಟ್ರಿಪ್​ ಬುಕ್ ಮಾಡುತ್ತೇನೆ.” ಎಂದಿದ್ದಾಳೆ.

ಇದನ್ನೂ ಓದಿ : Viral: 34 ವರ್ಷಗಳ ಹಿಂದಿನ ಸಂದೇಶವೊಂದು ಸಮುದ್ರ ದಂಡೆಯ ಮೇಲೆ ಸಿಕ್ಕಾಗ

ಈ ಪೋಸ್ಟ್​ ಅನ್ನು ಈತನಕ ಸುಮಾರು 2,500 ಜನರು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದು ಸರಿಯಾಗಿದೆ. ನಮಗೆ ಬೇಕಾದಂತೆ ಬದುಕುವ ಮತ್ತು ಅದಕ್ಕೆ ತಕ್ಕಂತೆ ಯೋಜಿಸುವ ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ನೀವೊಬ್ಬ ರಾಕ್​​ಸ್ಟಾರ್​ ಸೆಲೆಂಟಾನೋ ಎಂದಿದ್ಧಾರೆ ಒಬ್ಬರು. ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ನೀವು ಸ್ವತಂತ್ರರು ಹಾಗಾಗಿ ನಿಮ್ಮ ನಿರ್ಧಾರಗಳು ನಿಮ್ಮವೇ ಎಂದು ಮತ್ತೊಬ್ಬರು ಹೇಳಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:54 pm, Tue, 20 June 23