AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಭೀಕರ ರಸ್ತೆ ಅಪಘಾತ, ಸೀಟ್​​ ಬೆಲ್ಟ್​ ಹಾಕದೇ ಇದ್ದಿದ್ದಕ್ಕೆ ಚಾಲಕನ ಸ್ಥಿತಿ ಏನಾಯ್ತು ನೋಡಿ

ದಿನದಿಂದ ದಿನಕ್ಕೆ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ, ಪ್ರತಿನಿತ್ಯ ಒಂದಲ್ಲಾ ಒಂದು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಇಂತಹ ಅಪಘಾತಗಳು ಸಾವಿರಾರು ಮಂದಿಯನ್ನು ಬಲಿಪಡೆಯುತ್ತಿದೆ.

Viral Video: ಭೀಕರ ರಸ್ತೆ ಅಪಘಾತ, ಸೀಟ್​​ ಬೆಲ್ಟ್​ ಹಾಕದೇ ಇದ್ದಿದ್ದಕ್ಕೆ ಚಾಲಕನ ಸ್ಥಿತಿ ಏನಾಯ್ತು ನೋಡಿ
ಅಪಘಾತImage Credit source: ABP Live
Follow us
ನಯನಾ ರಾಜೀವ್
|

Updated on:Jun 20, 2023 | 2:34 PM

ದಿನದಿಂದ ದಿನಕ್ಕೆ ರಸ್ತೆ ಅಪಘಾತ( Road Accident) ಪ್ರಕರಣಗಳು ಹೆಚ್ಚುತ್ತಿವೆ, ಪ್ರತಿನಿತ್ಯ ಒಂದಲ್ಲಾ ಒಂದು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಇಂತಹ ಅಪಘಾತಗಳು ಸಾವಿರಾರು ಮಂದಿಯನ್ನು ಬಲಿಪಡೆಯುತ್ತಿದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಭೀಕರ ಅಪಘಾತ ನೋಡಿದರೆ ನಮ್ಮ ಉಸಿರೇ ನಿಂತಂಗಾಗುತ್ತದೆ. ರಸ್ತೆಗಳಲ್ಲಿನ ಅಪಘಾತಗಳು ಎಷ್ಟು ಅಪಾಯಕಾರಿ ಎಂಬುದನ್ನು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಬಹುದು. ಆದರೆ ಇನ್ನೂ ಕೆಲವರು ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಇಲ್ಲದೆ ರಸ್ತೆಗಳಲ್ಲಿ ವಾಹನ ಚಲಾಯಿಸುತ್ತಿರುವುದು ಕಂಡು ಬರುತ್ತಿದೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹೆದ್ದಾರಿಯಲ್ಲಿ ವಾಹನಗಳ ನಿರಂತರ ಸಂಚಾರವನ್ನು ನೀವು ನೋಡಬಹುದು. ಎಲ್ಲಾ ವಾಹನಗಳು ತಮ್ಮ ಲೇನ್​ನಲ್ಲಿ ಚಲಿಸುತ್ತಿದ್ದು, ಎದುರಿನಿಂದ ಅತಿವೇಗದಲ್ಲಿ ಬಂದ ಕಾರು ಅಚಾನಕ್ಕಾಗಿ ಇನ್ನೊಂದು ಕಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ದೃಶ್ಯ ತುಂಬಾ ಭಯಾನಕವಾಗಿದೆ.

ಎರಡು ಕಾರುಗಳು ಪರಸ್ಪರ ಡಿಕ್ಕಿಯಾದ ತಕ್ಷಣ, ಒಬ್ಬ ವ್ಯಕ್ತಿಯು ಗಾಳಿಯಲ್ಲಿ ಹಾರಿ ರಸ್ತೆಯ ಇನ್ನೊಂದು ಬದಿಯಲ್ಲಿ ಬೀಳುತ್ತಾನೆ. ಘರ್ಷಣೆಯ ನಂತರ ವ್ಯಕ್ತಿ ಸುಮಾರು 15 ಅಡಿ ಎತ್ತರಕ್ಕೆ ಜಿಗಿದಿದ್ದಾನೆ. ವೀಡಿಯೋ ಎಷ್ಟು ಅಪಾಯಕಾರಿಯಾಗಿದೆ ಎಂದರೆ ಅದನ್ನು ನೋಡಿದ ಮಾತ್ರಕ್ಕೆ ಗಾಳಿಯಲ್ಲಿ ಜಿಗಿದ ವ್ಯಕ್ತಿಯ ಮೂಳೆಗಳು ಅಥವಾ ಪಕ್ಕೆಲುಬುಗಳು ಮುರಿದುಹೋಗಿರಬಹುದು ಅಥವಾ ಸತ್ತಿರಬಹುದು ಎಂದು ಊಹಿಸಬಹುದು.

ಮತ್ತಷ್ಟು ಓದಿ: Video Viral: ಸ್ನೇಹಿತೆಯನ್ನು ಹುಲಿಯಿಂದ ಕಾಪಾಡಿದ ಹಸುಗಳ ಹಿಂಡು, ಘಟನೆ ಸಿಸಿಟಿವಿಯಲ್ಲಿ ಸೆರೆ

ವೀಡಿಯೋದಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ವ್ಯಕ್ತಿ ತಲೆಕೆಳಗಾಗಿ ಬಿದ್ದಿದ್ದಾನೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಡ್ರೈವಿಂಗ್ ಮಾಡುವಾಗ ಸೀಟ್ ಬೆಲ್ಟ್ ಧರಿಸಬೇಕು ಎಂದು ಬಳಕೆದಾರರೊಬ್ಬರು ಎಚ್ಚರಿಸಿದ್ದಾರೆ. ಈತ ಸೀಟ್ ಬೆಲ್ಟ್ ಹಾಕಿಕೊಂಡಿದ್ದರೆ ಈ ರೀತಿ ಕಾರಿನಿಂದ ಹೊರಗೆ ಬೀಳುತ್ತಿರಲಿಲ್ಲ ಎಂದಿದ್ದಾರೆ.

ಈ ವೀಡಿಯೊವನ್ನು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ, ಅವರು ‘ದಯವಿಟ್ಟು ಸೀಟ್ ಬೆಲ್ಟ್ ಧರಿಸಿ’ ಎಂದು ತಮ್ಮ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ನಿಯಮಗಳು ನಿಮಗೆ ಕಿರಿ ಕಿರಿಯಾದರೂ ಕೂಡ ಅವುಗಳನ್ನು ನಿಮ್ಮ ಸುರಕ್ಷತೆಗಾಗಿಯೇ ಮಾಡಲಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:29 pm, Tue, 20 June 23