Viral Video: ಈ ಸಾಹಸಕ್ಕೆ ಕಾರಣರಾದ ರೈಲ್ವೇ ಸಚಿವರಿಗೆ ಬಹುಮಾನ ಕೊಡಬೇಕಲ್ಲ, ಯಾರಲ್ಲಿ?

Toilet: ''ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನನ್ನ ಕಸಿನ್ ತನ್ನ ಸ್ನೇಹಿತನ​ ಈ ವಿಡಿಯೋ ಕಳಿಸಿದ್ದಾನೆ. ಧನ್ಯವಾದ, ರೈಲು ಪ್ರಯಾಣವನ್ನು ಸಾಹಸತಾಣವನ್ನಾಗಿಸಿದ್ದಕ್ಕೆ'' ಕೇಂದ್ರ ರೈಲ್ವೇ ಸಚಿವರಿಗೆ ಟ್ಯಾಗ್​ ಮಾಡಿದ್ದಾರೆ ಅಭಿಜೀತ್​ ದಿಪ್ಕೆ ಎನ್ನುವವರು.

Viral Video: ಈ ಸಾಹಸಕ್ಕೆ ಕಾರಣರಾದ ರೈಲ್ವೇ ಸಚಿವರಿಗೆ ಬಹುಮಾನ ಕೊಡಬೇಕಲ್ಲ, ಯಾರಲ್ಲಿ?
ಸೀಟುಗಳ ಮೇಲೆ ಹತ್ತುತ್ತ ಶೌಚಾಲಯ ತಲುಪಿದ ಪ್ರಯಾಣಿಕ!
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 20, 2023 | 11:49 AM

Train: ನಿಮಗೆಲ್ಲ ಬೆಟ್ಟಗುಡ್ಡಗಳನ್ನು ಹತ್ತುವುದು ಗೊತ್ತು. ಆದರೆ ರೈಲಿನೊಳಗೆ ಹೀಗೆ ಇವನ ಹಾಗೆ ಹತ್ತುವುದು ಗೊತ್ತೇ? ಗೊತ್ತಿದ್ದರೂ ಹೀಗೆಲ್ಲ ಯಾರಾದರೂ ಮಾಡಿಯಾರೇ? ಆದರೆ ಈ ವ್ಯಕ್ತಿ ಹೀಗೆ ಸೀಟು ಮತ್ತು ಕಂಬಿಗಳ ಸಹಾಯದಿಂದ ಕಿಕ್ಕಿರಿದ ಮಂದಿಯನ್ನೆಲ್ಲ ದಾಟಿಕೊಂಡು ಅಂತೂ ಆಪರೇಷನ್​ ಟಾಯ್ಲೆಟ್​ ಅನ್ನು ಸಂಪನ್ನಗೊಳಿಸಿದ್ದಾನೆ. ಛೆ ಯಾಕಿವನು ಹೀಗೆ ಮಾಡಿದ ಎನ್ನುತ್ತಿದ್ದೀರೇ? ಪಾಪ ಅವನಾದರೂ ಏನು ಮಾಡಿಯಾನು? ಶೌಚಾಲಯವನ್ನು ತಲುಪಲೇಬೇಕೆಂದರೆ ಇಂಥ ಉಪಾಯ ಮತ್ತು ಸಾಹಸ ಮಾಡದೇ ವಿಧಿಯಿಲ್ಲ ಎಂಬಂಥ ಪರಿಸ್ಥಿತಿ ಅಲ್ಲಿ ಉಂಟಾಗಿದೆ.

ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನನ್ನ ಕಸಿನ್​ ಈ ವಿಡಿಯೋ ಕಳಿಸಿದ್ದಾನೆ. ಅವನ ಸ್ನೇಹಿತ ಶೌಚಾಲಯಕ್ಕೆ ದಾರಿ ಮಾಡಿಕೊಂಡು ಸಾಗಲು ಪ್ರಯತ್ನಿಸುತ್ತಿದ್ದಾನೆ. ಧನ್ಯವಾದ ರೈಲು ಪ್ರಯಾಣವನ್ನು ಹೀಗೆ ಸಾಹಸತಾಣವನ್ನಾಗಿಸಿದ್ದಕ್ಕೆ ಎಂದು ಕೇಂದ್ರ ರೈಲ್ವೇ ಸಚಿವರಿಗೆ ಟ್ಯಾಗ್​ ಮಾಡಿದ್ದಾರೆ ಅಭಿಜೀತ್​ ದಿಪ್ಕೆ ಎನ್ನುವವರು. ಈ ವಿಡಿಯೋ ಅನ್ನೂ ಅನೇಕ ಟ್ವಿಟ್ಟರಿಗರು ಮರುಹಂಚಿಕೆ ಮಾಡಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral: 34 ವರ್ಷಗಳ ಹಿಂದಿನ ಸಂದೇಶವೊಂದು ಸಮುದ್ರ ದಂಡೆಯ ಮೇಲೆ ಸಿಕ್ಕಾಗ

ನಿನ್ನೆ ಹಂಚಿಕೊಂಡ ಈ ಪೋಸ್ಟ್​ ಅನ್ನು 1.6 ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಎಸಿ ಕೋಚ್​ನಲ್ಲಿಯೂ ಕೆಲವೊಮ್ಮೆ ಇಂಥ ಪರಿಸ್ಥಿತಿ ಉಂಟಾಗುತ್ತದೆ ಎಂದು ಒಬ್ಬರು ಹೇಳಿದ್ದಾರೆ. ದೂರದ ರೈಲು ಪ್ರಯಾಣದಲ್ಲಿ ಎಲ್ಲಾ ಕೋಚ್​ಗಳಲ್ಲೂ ಇಂಥ ಸನ್ನಿವೇಶಗಳು ಸಾಮಾನ್ಯ. ಆದರೆ ಎಸಿ ಕೋಚ್​ಗಳು ಇದರಿಂದ ಹೊರತಾಗಿವೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ವೃಂದಾವನದ ಹೋಳಿ ಸಂಭ್ರಮದಲ್ಲಿ ಮುಕೇಶ್ ಅಂಬಾನಿ, ಎಲಾನ್​, ಝುಕರ್​ಬರ್ಗ್​? 

ನಾನು ಭುವನೇಶ್ವರಕ್ಕೆ ಪ್ರಯಾಣಿಸುವಾಗ ಪುರುಷೋತ್ತಮ್ ಎಕ್ಸ್​​ಪ್ರೆಸ್​ನ್ಲಿ ಇಂಥದೇ ಅನುಭವಕ್ಕೆ ಒಳಗಾದೆ. ಅದೂ ಸ್ಲೀಪರ್​ ಕೋಚ್​ನಲ್ಲಿ ಬುಕ್ ಮಾಡಿದ ಮೇಲೂ… ಎಂದು ಇನ್ನೊಬ್ಬರು ಹೇಳಿದ್ದಾರೆ. ಅಯ್ಯೋ ಇದೆಲ್ಲ ನಮ್ಮೂರಿನ ರೈಲುಗಳಲ್ಲಿ ತೀರಾ ಸಾಮಾನ್ಯ ಬಿಡಿ. ಸದ್ಯ ಹೀಗಾದರೂ ತಲುಪಲು ಅವಕಾಶ ಇದೆಯಲ್ಲ ಇನ್ನೂ ನಮ್ಮ ರೈಲುಗಳಲ್ಲಿ! ಇಲ್ಲವಾದರೆ ಏನು ಗತಿ? ಎಂದು ಮತ್ತೊಬ್ಬರು ಹೇಳಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:47 am, Tue, 20 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ