Viral : ಮಧ್ಯಪ್ರದೇಶದ ಸಮೋಸಾ ಅಂಗಡಿಯೊಂದರಲ್ಲಿ, ಸಮೋಸಕ್ಕೆ ಬಟ್ಟಲು ನೀಡುತ್ತಿಲ್ಲ ಎಂಬ ತಕರಾರು ಎತ್ತಿ ವ್ಯಕ್ತಿಯೊಬ್ಬರು ಮಧ್ಯಪ್ರದೇಶದ ಸಿಎಂ ಸಹಾಯವಾಣಿಗೆ ದೂರು ಸಲ್ಲಿಸಿದ ಅಪರೂಪದ ಘಟನೆ ನಡೆದಿದೆ. ಆಗಸ್ಟ್ 30 ರಂದು ವಂಶ್ ಬಹದ್ದೂರ್ ಎಂಬ ವ್ಯಕ್ತಿಯು ‘ರಾಕೇಶ್ ಸಮೋಸಾ’ ಅಂಗಡಿಗೆ ಹೋದಾಗ ಈ ಘಟನೆ ನಡೆದಿದೆ. ಅಂಗಡಿಯವ ಬಟ್ಟಲು ನೀಡುವುದನ್ನು ನಿರಾಕರಿಸಿದ್ದರಿಂದ ಹತಾಶೆಗೊಂಡ ಬಹದ್ದೂರ್ ಅಂಗಡಿಯವರ ವಿರುದ್ಧ ದೂರು ಸಲ್ಲಿಸಿದ್ದಾರೆ. ಇಂಡಿಯಾ ಟುಡೆ ವರದಿಯ ಪ್ರಕಾರ, ‘ಛತ್ತರ್ಪುರ ಬಸ್ ನಿಲ್ದಾಣದಲ್ಲಿ ರಾಕೇಶ್ ಸಮೋಸಾ ಎಂಬ ಅಂಗಡಿಯಿದೆ. ಇಲ್ಲಿ ಸಮೋಸಾ ಕೊಡುವಾಗ ಅಂಗಡಿಯವರು ಬಟ್ಟಲು ಕೊಟ್ಟಿಲ್ಲ. ದಯವಿಟ್ಟು ಈ ಸಮಸ್ಯೆಯನ್ನು ಬೇಗ ಪರಿಹರಿಸಿ’ ಎನ್ನುವುದು ದೂರಿನ ಸಾರಾಂಶ.
ಸಹಾಯವಾಣಿಯು ಈ ದೂರನ್ನು ಸ್ವೀಕರಿಸಿ, ಸೆಪ್ಟೆಂಬರ್ 5ರಂದು, ‘ನೀವು ಮುಖ್ಯಮಂತ್ರಿ ಸಹಾಯವಾಣಿ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಸಲ್ಲಿಸಿದ ಈ ದೂರನ್ನು ವಿಲೇವಾರಿ ಮಾಡಲಾಗಿದೆ’ ಎಂದು ತಿಳಿಸಿದೆ.
ಈ ದೂರು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಗೆ ರಂಜನೀಯವಾಗಿ ಕಾಣುವುದರಲ್ಲಿ ಅಚ್ಚರಿಯೇ ಇಲ್ಲ. ಅನೇಕರು ಈ ಸುತ್ತ ಹಾಸ್ಯರೂಪದ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಯಾರ್ಯಾರಿಗೆ ಎಂತೆಂಥ ಸಮಸ್ಯೆಗಳು ಉದ್ಭವಿಸುತ್ತವೆಯೋ!
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:42 am, Wed, 7 September 22