Bizarre: ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ಸ್ಯಾಕ್ಸೋಫೋನ್ ನುಡಿಸಿದ ರೋಗಿ

| Updated By: Rakesh Nayak Manchi

Updated on: Oct 17, 2022 | 5:32 PM

ಇತ್ತೀಚಿಗೆ ಇಟಿಲಿಯ ವೈದ್ಯರು ಮೆದುಳಿನ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದಾಗ ರೋಗಿಯೊಬ್ಬರು ಸ್ಯಾಕ್ಸೋಫೋನ್ ನುಡಿಸಿದ ಘಟನೆಯೊಂದು ನಡೆದಿದೆ.

Bizarre: ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ಸ್ಯಾಕ್ಸೋಫೋನ್ ನುಡಿಸಿದ ರೋಗಿ
ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ಸ್ಯಾಕ್ಸೋಫೋನ್ ನುಡಿಸಿದ ರೋಗಿ
Follow us on

ಶಸ್ತ್ರ ಚಿಕಿತ್ಸೆ ವೇಳೆ ಯಶಸ್ವಿ ಶಸ್ತ್ರಚಿಕಿತ್ಸೆಗಾಗಿ ಮಂತ್ರ ಪಠಣೆ ಮಾಡುವುದು ಇತ್ಯಾದಿಗಳನ್ನು ನಡೆಸಲಾಗುತ್ತದೆ. ಇದರ ಹೊರತಾಗಿ ಇಟಲಿಯ ವೈದ್ಯರು ಮೆದುಳಿನ ಶಸ್ತ್ರಚಿಕಿತ್ಸೆ ನಡೆಸುವಾಗ ರೋಗಿಯೊಬ್ಬರು ನಿರರ್ಗಳವಾಗಿ ಸ್ಯಾಕ್ಸೋಫೋನ್ ನುಡಿಸಿ ಅಚ್ಚರಿಗೊಳಿಸಿದ ಪ್ರಸಂಗ ನಡೆದಿದೆ. ರೋಮ್‌ನಲ್ಲಿರುವ ಪೈಡಿಯಾ ಇಂಟರ್‌ನ್ಯಾಶನಲ್ ಹಾಸ್ಪಿಟಲ್​ನಲ್ಲಿ ಈ ಅಚ್ಚರಿಯ ಸಂಗತಿ ನಡೆದಿದ್ದು, 35 ವರ್ಷದ ವ್ಯಕ್ತಿಯ ಮೆದುಳಿನಲ್ಲಿ ಬೆಳೆದ ಗೆಡ್ಡೆಯನ್ನು ತೆಗೆದುಹಾಕಲು ವೈದ್ಯರು 9 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ. ಈ ವೇಳೆ ಎಚ್ಚರವಾಗಿಯೇ ಇದ್ದ ರೋಗಿ ಸ್ಯಾಕ್ಸೋಫೋನ್ ನುಡಿಸಿ ವೈದ್ಯರನ್ನೇ ಅಚ್ಚರಿಗೊಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ಇಟಲಿಯ ವೈದ್ಯರು, ಶಸ್ತ್ರಚಿಕಿತ್ಸಕರಿಗೆ ಅವರು ಕಾರ್ಯನಿರ್ವಹಿಸುತ್ತಿರುವಾಗ ಅವರ ಮೆದುಳಿನ ವಿವಿಧ ಕಾರ್ಯಗಳನ್ನು ನಕ್ಷೆ ಮಾಡಲು ಅವಕಾಶ ಮಾಡಿಕೊಟ್ಟಿತು ಎಂದು ಹೇಳಿದ್ದಾರೆ.

ರೋಗಿಯು ಎಚ್ಚರವಾಗಿದ್ದಾಗ ನಡೆಸುವ ಚಿಕಿತ್ಸೆಯಿಂದ ನರಕೋಶದ ಜಾಲಗಳು ವಿವಿಧ ಮೆದುಳಿನ ಕಾರ್ಯಗಳಾದ ಆಡುವುದು, ಮಾತನಾಡುವುದು, ಚಲಿಸುವುದು, ನೆನಪಿಸಿಕೊಳ್ಳುವುದು, ಎಣಿಸುವುದು ಇತ್ಯಾದಿಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಸದ್ಯ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ಶಸ್ತ್ರಚಿಕಿತ್ಸೆಯ ತಂಡದ ನೇತೃತ್ವದ ಡಾ. ಕ್ರಿಶ್ಚಿಯನ್ ಬ್ರೋಗ್ನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ರೋಗಿಯೊಬ್ಬರು ಶಸ್ತ್ರ ಚಿಕಿತ್ಸೆ ವೇಳೆ ಗಿಟಾರ್ ಬಾರಿಸಿದ್ದರು. ಹೃದಯದ ಶಸ್ತ್ರಚಿಕಿತ್ಸೆಗೆ ರೋಗಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಅದರಂತೆ ಸರ್ಜರಿ ನಡೆಯುತ್ತಿದ್ದಾಗ ಆ ರೋಗಿ ಎಚ್ಚರವಾಗಿಯೇ ಇದ್ದುಕೊಂಡು ಗಿಟಾರ್ ನುಡಿಸಿದ್ದರು. ಈ ಸುದ್ದಿ ಭಾರೀ ಸದ್ದು ಮಾಡಿತ್ತು.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:28 pm, Mon, 17 October 22