Bizarre: ಒಂದು ನಿಮಿಷದಲ್ಲಿ 42 ತೆಂಗಿನಕಾಯಿಗಳು ಪೀಸ್​ಪೀಸ್; ಇತ್ತ ಗಿನ್ನೆಸ್ ದಾಖಲೆಯೂ ಪುಡಿಪುಡಿ

ಮಾರ್ಷಲ್ ಆರ್ಟಿಸ್ಟ್ ಕೆವಿ ಸೈದಲವಿ ಅವರು ಒಂದು ನಿಮಿಷಗಳಲ್ಲಿ 42 ತೆಂಗಿನಕಾಯಿಗಳನ್ನು ಒಡೆದು ವಿಶ್ವ ಗಿನ್ನಿಸ್ ದಾಖಲೆಯೊಂದನ್ನು ಮುರಿದಿದ್ದಾರೆ. ತನ್ನ ಸಮರ ಕಲೆಯಲ್ಲಿ ಐದು ವಿಶ್ವ ದಾಖಲೆಯನ್ನು ಇವರು ಹೊಂದಿದ್ದಾರೆ.

Bizarre: ಒಂದು ನಿಮಿಷದಲ್ಲಿ 42 ತೆಂಗಿನಕಾಯಿಗಳು ಪೀಸ್​ಪೀಸ್; ಇತ್ತ ಗಿನ್ನೆಸ್ ದಾಖಲೆಯೂ ಪುಡಿಪುಡಿ
1 ನಿಮಿಷದಲ್ಲಿ 42 ತೆಂಗಿನಕಾಯಿಗಳನ್ನು ಹೊಡೆದು ಗಿನ್ನಿಸ್ ದಾಖಲೆ ಬರೆದ ಭಾರತದ ಮಾರ್ಷಲ್ ಆರ್ಟಿಸ್ಟ್​
Follow us
TV9 Web
| Updated By: Rakesh Nayak Manchi

Updated on:Oct 17, 2022 | 6:59 PM

ವಿಶ್ವದಾಖಲೆಗಳ ಪಟ್ಟಿಯನ್ನು ತೆರೆದರೆ ಅದರಲ್ಲಿ ಚಿತ್ರವಿಚಿತ್ರವಾದ ದಾಖಲೆಗಳ ಪಟ್ಟಿ ಲಭ್ಯವಾಗಲಿದೆ. ಇದರಲ್ಲಿ ಕೆಲವು ದಾಖಲೆಗಳು ಅಸಾಧಾರಣ ದಾಖಲೆಗಳಾಗಿರುತ್ತವೆ. ನೀವು ಈ ಹಿಂದೆ ಕೈಗಳ ಮೂಲಕ ತೆಂಗಿನ ಕಾಯಿ ಹೊಡೆಯುವುದು ಅಥವಾ ಮೇಲಕ್ಕೆ ಎಸೆದು ತಲೆಯಿಂದ ತೆಂಗಿನಕಾಯಿ ಹೊಡೆದಿರುವುದನ್ನು ನೋಡಿರಬಹುದು. ಆದರೆ ಈಗ ತೋರಿಸುವ ದೃಶ್ಯಾವಳಿ ತೀರಾ ಅಪರೂಪವಾಗಿದೆ. ಭಾರತದ ಸಮರ ಕಲಾವಿದರೊಬ್ಬರು ನುಂಚಾಕು ಬಳಸಿ ಒಂದು ನಿಮಿಷದಲ್ಲಿ 42 ತೆಂಗಿನಕಾಯಿಗಳನ್ನು ಒಡೆಯುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಮಾರ್ಷಲ್ ಆರ್ಟಿಸ್ಟ್ ಕೆವಿ ಸೈದಲವಿ ಅವರು ವೃತ್ತಾಕಾರದಲ್ಲಿ ಕುಳಿತ ಆರು ಸ್ವಯಂಸೇವಕರು ತಲೆ ಮೇಲೆ ಇಡುವ ತೆಂಗಿನಕಾಯಿಗಳನ್ನು ಒಂದೊಂದಾಯಿಗೇ ಹೊಡೆಯುತ್ತಾರೆ. ತನ್ನ ಸಮರ ಕಲೆಯಲ್ಲಿ ಐದು ವಿಶ್ವ ದಾಖಲೆಯನ್ನು ಹೊಂದಿರುವ ಸೈದಲವಿ ಅವರು ಈ ಟಾಸ್ಕ್​ನಲ್ಲಿ ಕೇವಲ 1 ನಿಮಿಷದಲ್ಲಿ 42 ತೆಂಗಿನಕಾಯಿಗಳನ್ನು ಹೊಡೆದಿದ್ದಾರೆ.

ಈ ಹಿಂದೆ ಸಮರ ಕಲಿ ವಿಸ್ಪಿ ಖರಾಡಿ ಅವರು ಒಂದು ನಿಮಿಷದಲ್ಲಿ ಗರಿಷ್ಠ ಸಂಖ್ಯೆಯ (84 ಟಿನ್​ಗಳನ್ನು) ಪಾನೀಯ ಕ್ಯಾನ್​ಗಳನ್ನು ಕೈಗಳಿಂದ ಪುಡಿ ಮಾಡಿದ್ದರು. ಇದರೊಂದಿಗೆ ಒಂದು ನಿಮಿಷದಲ್ಲಿ ಹೆಚ್ಚಿನ ಕಾಂಕ್ರೀಟ್ ಬ್ಲಾಕ್​ಗಳನ್ನು (51 ಬ್ಲಾಕ್) ಒಡೆದು ದಾಖಲೆ ನಿರ್ಮಿಸಿದ್ದರು. ಇವರ ಹೆಸರಿನಲ್ಲಿ ಒಟ್ಟು 10 ಗಿನ್ನಿಸ್ ವಿಶ್ವ ದಾಖಲೆಗಳಿವೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Mon, 17 October 22