ಮಹಾರಾಷ್ಟ್ರದಲ್ಲಿ ವಾಕ್ಶ್ರವಣದೋಷವುಳ್ಳ ದಂಪತಿ ನಡೆಸುವ ಈ ಪಾನೀಪುರಿ ಅಂಗಡಿಯ ವಿಡಿಯೋ ವೈರಲ್
Maharashtra : ವಾಕ್ಶ್ರವಣದೋಷವುಳ್ಳ ಈ ದಂಪತಿಯು ನಾಸಿಕ್ನ ರಸ್ತೆಬದಿ ಪಾನಿಪುರಿ ಮಾರುತ್ತಾರೆ. ಇವರು ಗ್ರಾಹಕರೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎನ್ನುವ ವಿಡಿಯೋ ಅನ್ನು 3.4 ಮಿಲಿಯನ್ ನೆಟ್ಟಿಗರು ವೀಕ್ಷಿಸಿದ್ಧಾರೆ.
Viral Video : ಯಾರೂ ಪರಿಪೂರ್ಣರಲ್ಲ. ಪ್ರತಿಯೊಬ್ಬರಿಗೂ ಒಂದಿಲ್ಲಾ ಒಂದು ಕೊರತೆ ಇದ್ದೇ ಇರುತ್ತದೆ. ಆದರೆ ಆ ಕೊರತೆಯನ್ನು ನೀಗಿಸುವಂಥ ವಿಶೇಷ ಶಕ್ತಿ, ಪ್ರತಿಭೆ, ಕೌಶಲ ಕೂಡ ಅವರೊಳಗೆ ಅಡಗಿರುತ್ತದೆ. ಪರಸ್ಪರ ಸಹಕಾರ, ಪ್ರೋತ್ಸಾಹವಿದ್ದಲ್ಲಿ ಆ ವ್ಯಕ್ತಿ ಕ್ರಿಯಾಶೀಲನಾಗಿ ರೂಪುಗೊಳ್ಳುತ್ತಾ ಹೋಗುತ್ತಾನೆ. ಕ್ರಮೇಣ ಆತ್ಮವಿಶ್ವಾಸ ಕಂಡುಕೊಳ್ಳುತ್ತಾನೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಮಹಾರಾಷ್ಟ್ರದ ನಾಸಿಕ್ನ ಬೀದಿಯೊಂದರಲ್ಲಿ ಪಾನೀಪುರಿ ಅಂಗಡಿಯನ್ನಿಟ್ಟುಕೊಂಡಿದ್ದಾರೆ ಈ ದಂಪತಿ. ಇಬ್ಬರಿಗೂ ವಾಕ್ ಶ್ರವಣದೋಷವಿದೆ. ಆದರೂ ಚುರುಕಾಗಿ ಗ್ರಾಹಕರೊಂದಿಗೆ ವ್ಯವಹರಿಸುವ ರೀತಿ ಮಾತ್ರ ಅದ್ಭುತ.
ಇದನ್ನೂ ಓದಿView this post on Instagram
ಚಾಟ್ಸ್ಗೆ ಬೇಕಾದಂತಹ ಸಾಮಗ್ರಿಗಳನ್ನು ಮನೆಯಲ್ಲಿಯೇ ತಯಾರಿ ಮಾಡಿಕೊಂಡು ಸಂಜೆ ಹೊತ್ತಿಗೆ ಅಂಗಡಿ ಜೋಡಿಸಿಕೊಳ್ಳುತ್ತಾರೆ ಈ ದಂಪತಿ. ಒಮ್ಮೆ ರುಚಿ ಹತ್ತಿದರೆ ಮುಗಿಯಿತು ಜನರು ಆ ಅಂಗಡಿ ಹುಡುಕಿಕೊಂಡು ಬಂದೇಬರುತ್ತಾರೆ. ಈ ಒಡನಾಟವು ಕ್ರಮೇಣ ಮಾರಾಟಗಾರರು ಮತ್ತು ಗ್ರಾಹಕರ ಮಧ್ಯೆ ಒಂದು ರೀತಿಯ ಆಪ್ತ ಬಂಧವನ್ನು ಕಟ್ಟಿಕೊಡಲಾರಂಭಿಸುತ್ತದೆ. ಈ ವಿಡಿಯೋದಲ್ಲಿ ಈಕೆ ಗ್ರಾಹಕರೊಂದಿಗೆ ಸನ್ನೆಯ ಮೂಲಕ ವ್ಯವಹರಿಸುವ ಕೌಶಲ ಗಮನ ಸೆಳೆಯುತ್ತದೆ. ಈಗಾಗಲೇ 3.7 ಮಿಲಿಯನ್ ವೀಕ್ಷಕರನ್ನು ಈ ವಿಡಿಯೋ ತಲುಪಿದೆ.
ನೆಟ್ಟಿಗರು ಈ ವಿಡಿಯೋದಿಂದ ಸ್ಫೂರ್ತಿಗೊಂಡಿದ್ದಾರೆ. ಎಂಥಾ ಅದ್ಭುತ ಜೋಡಿ ನಿಮ್ಮದು ಎಂದಿದ್ದಾರೆ ಒಬ್ಬ ನೆಟ್ಟಿಗರು. ನಿಮಗೆ ಒಳ್ಳೆಯದಾಗಲಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಒಮ್ಮೆ ಬಿಮ್ಮ ಪಾನಿಪುರಿಯ ರುಚಿ ನೋಡಬೇಕು ಎಂದು ಮಗದೊಬ್ಬರು ಹೇಳಿದ್ಧಾರೆ.
ಯಾವ ಊನವೂ ನಮ್ಮೊಳಗಿನ ಶಕ್ತಿ ಸಾಮರ್ಥ್ಯವನ್ನು ಕುಂಠಿತಗೊಳಿಸಲಾರದು ಎನ್ನುವುದುಕ್ಕೆ ಈ ದಂಪತಿಯೇ ಮಾದರಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:53 am, Tue, 18 October 22