ಪ್ರಪಂಚದ ಅನೇಕ ದೇಶಗಳಲ್ಲಿ ಅನೇಕ ರೀತಿಯ ಮದುವೆ ಸಂಪ್ರದಾಯಗಳು ಚಾಲ್ತಿಯಲ್ಲಿದೆ. ಕೆಲವೊಂದು ಸಂಪ್ರದಾಯಗಳು ವಿಭಿನ್ನವಾಗಿದ್ದರೆ ಕೆಲವೊಂದು ಅಸಂಬದ್ಧತೆಯಿಂದ ಕೂಡಿರುತ್ತದೆ. ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ಇಂತಹ ಅಸಂಬದ್ಧತೆಯ ವಿವಾಹ ಆಚರಣೆಯನ್ನು ಅನುಸರಿಸಲಾಗುತ್ತದೆ. ಈ ಆಚರಣೆಯ ಪ್ರಕಾರ, ಮದುವೆಯ ನಂತರದ ಮೊದಲ ರಾತ್ರಿಯಲ್ಲಿ ವಧುವಿನ ತಾಯಿ ನವ ದಂಪತಿಯೊಂದಿಗೆ ಇರುತ್ತಾರೆ. ವಧುವಿನ ತಾಯಿ ಇಲ್ಲದಿದ್ದರೆ ಅವರ ಕುಟುಂಬದ ವಯಸ್ಸಾದ ಮಹಿಳೆ ಅವರೊಂದಿಗೆ ಇರಲೇಬೇಕು. ಇದು ಅಚ್ಚರಿಯಾದರೂ ಸತ್ಯ.
ನವ ದಂಪತಿಯೊಂದಿಗೆ ಮದುವೆಯ ಆಚರಣೆಯು ಯಾವ ವಿಶೇಷ ಉದ್ದೇಶವನ್ನು ಪೂರೈಸುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ವರದಿಯ ಪ್ರಕಾರ, ವಧುವಿನ ತಾಯಿ ಅಥವಾ ವಯಸ್ಸಾದ ಮಹಿಳೆ ಹೊಸದಾಗಿ ಮದುವೆಯಾದ ದಂಪತಿಗಳಿಗೆ ಅವರು ತಮ್ಮ ಜೀವನವನ್ನು ಹೇಗೆ ಸಂತೋಷದಿಂದ ಕಳೆಯಲಿದ್ದಾರೆ ಎಂಬುದನ್ನು ವಿವರಿಸುತ್ತಾರೆ. ಅಲ್ಲದೆ ಮೊದಲ ರಾತ್ರಿಯನ್ನು ಕಳೆಯುವ ವಿಧಾನವನ್ನು ಕೂಡ ವಧುವಿಗೆ ವಿವರಿಸಲಾಗುತ್ತದೆ. ಮೊದಲ ರಾತ್ರಿ ಕಳೆದ ನಂತರ ವಧುವಿನ ತಾಯಿ ಅಥವಾ ಹಿರಿಯ ಮಹಿಳೆ ದಂಪತಿ ಸಂತೋಷದ ವೈವಾಹಿಕ ಜೀವನವನ್ನು ಪ್ರಾರಂಭಿಸಿದ್ದಾರೆ ಎಂದು ಖಚಿತಪಡಿಸುತ್ತಾರೆ.
ಇನ್ನು, ಇಂಡೋನೇಷ್ಯಾದಲ್ಲೊಂದು ವಿಚಿತ್ರ ಸಂಪ್ರದಾಯವಿದೆ. ನವ ದಂಪತಿಗಳು ವಾಶ್‌ರೂಮ್‌ಗೆ ಹೋಗದೆ ಮೂರು ದಿನಗಳವರೆಗೆ ಇರಬೇಕು ಎನ್ನುವುದು ಈ ಸಂಪ್ರದಾಯ ಹೇಳುತ್ತದೆ. ವರದಿಯ ಪ್ರಕಾರ, ವಿವಾಹಿತ ದಂಪತಿಗಳು ಸಂತೋಷ ಮತ್ತು ದೀರ್ಘಾವಧಿಯ ದಾಂಪತ್ಯವನ್ನು ಆನಂದಿಸಲು ಈ ಆಚರಣೆಯನ್ನು ನಡೆಸಲಾಗುತ್ತದೆ. ದಂಪತಿಗಳು ಪರೀಕ್ಷೆಯಲ್ಲಿ ವಿಫಲರಾದರೆ ದಂಪತಿಗಳು ಬೇರೆಬೇರೆಯಾಗುತ್ತಾರೆ.
ಜನರ ಗುಂಪು ದಂಪತಿಯನ್ನು ಮೇಲ್ವಿಚಾರಣೆ ಮಾಡುತ್ತದೆ, ದಂಪತಿಗೆ ವಾಶ್ ರೂಂ ಬಳಸುವ ಬಯಕೆ ಬರದಂತೆ ಅವರು ಸ್ವಲ್ಪ ಪ್ರಮಾಣದ ಆಹಾರ ಮತ್ತು ನೀರನ್ನು ನೀಡುತ್ತಾರೆ. ಅಷ್ಟಕ್ಕೂ ಈ ಆಚರಣೆಯನ್ನು ನಡೆಸಿಕೊಂಡು ಬರುತ್ತಿರುವವರು ಟಿಡಾಂಗ್ ಬುಡಕಟ್ಟು ಜನಾಂಗದವರು. ಈ ಜನಾಂಗವು ಇಂಡೋನೇಷ್ಯಾ ಮತ್ತು ಮಲೇಷ್ಯಾ ನಡುವಿನ ಗಡಿಯ ಸಮೀಪವಿರುವ ಬೋರ್ನಿಯೊದ ಈಶಾನ್ಯ ಪ್ರದೇಶಕ್ಕೆ ಸೇರಿದೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ