Viral Video : ಮೊದಲ ಸಲ ಕೆಫೆಯಲ್ಲಿ ಆರ್ಡರ್ ಮಾಡಿದ ಆಟಿಸಂ ಬಾಲಕ, ತಾಯಿಯ ಖುಷಿಗೆ ಪಾರವೇ ಇಲ್ಲ

Autism : ‘ನಿಮ್ಮ ಮಗ ಇನ್ನೆಂದೂ ಎಲ್ಲರಂತೆ ಸಾಮಾಜಿಕವಾಗಿ ಬೆರೆಯಲು ಸಾಧ್ಯವೇ ಇಲ್ಲ ಎಂದಿದ್ದರು ವೈದ್ಯರು. ಆದರೆ ಮುಂದೇನಾಯಿತು? ಈ ವಿಡಿಯೋ ನಿಮ್ಮ ಮನಸ್ಸನ್ನು ಆರ್ದ್ರಗೊಳಿಸದೇ ಇರದು.

Viral Video : ಮೊದಲ ಸಲ ಕೆಫೆಯಲ್ಲಿ ಆರ್ಡರ್ ಮಾಡಿದ ಆಟಿಸಂ ಬಾಲಕ, ತಾಯಿಯ ಖುಷಿಗೆ ಪಾರವೇ ಇಲ್ಲ
ಮೊದಲ ಸಲ ಕೆಫೆಯಲ್ಲಿ ಆರ್ಡರ್ ಮಾಡಿದಾಗ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 15, 2022 | 10:59 AM

Viral Video : ಯಾವ ತಾಯಿಗೆ ಖುಷಿಯಾಗುವುದಿಲ್ಲ ತಮ್ಮ ಮಕ್ಕಳ ‘ಮೊದಲು’ಗಳನ್ನು ಹಂಚಿಕೊಳ್ಳಲು? ಅದರಲ್ಲೂ ಆಟಿಸಂಗೆ ಒಳಗಾದ ಮಕ್ಕಳ ಪೋಷಕರಂತೂ, ತಮ್ಮ ಮಕ್ಕಳ ನಿತ್ಯಜೀವನಕ್ಕೆ ಬೇಕಾಗುವಂಥ ಕೌಶಲಗಳನ್ನು ಕಲಿಸಲು ಜೀವನಪೂರ್ತಿ ತಪಸ್ಸು ಗೈಯ್ಯುತ್ತಲೇ ಇರುತ್ತಾರೆ. ವಿದೇಶಗಳಲ್ಲಿ ಇಂಥ ವಿಶೇಷ ಮಕ್ಕಳಿಗಾಗಿ ಸಾಕಷ್ಟು ಸೌಲಭ್ಯಗಳಿವೆ ನಿಜ. ಆದರೆ ಭಾರತದಂಥ ದೇಶಗಳಲ್ಲಿ ಇಂಥ ಮಕ್ಕಳ ಪೋಷಕರ ಬದುಕು ನೋಡಲಾಗದು. ಎಲ್ಲರಂತೆ ತನ್ನ ಮಗುವೂ ಬೆಳೆಯಬೇಕು ಎಂಬ ಹಂಬಲ ಮತ್ತು ಆತಂಕದಲ್ಲಿ ಅವರು ತಮ್ಮ ಸ್ವಂತಸುಖಗಳನ್ನೇ ಮರೆತಿರುತ್ತಾರೆ. ಸತತ ಪ್ರಯತ್ನಗಳ ನಂತರ ಮಗು ಏನಾದರೂ ಹೊಸತನ್ನು ಕಲಿಯಿತೋ ಆ ಭಾವುಕ, ಸಾರ್ಥಕ ಕ್ಷಣಗಳನ್ನು ವರ್ಣಿಸಲು ಸಾಧ್ಯವೇ ಇಲ್ಲ. ಇಲ್ಲಿರುವ ವಿಡಿಯೋ ಇದೇ ವಿಷಯಕ್ಕೆ ಸಾಕ್ಷಿಯಾಗುವಂಥದ್ದು. ಆಟಿಸಂವುಳ್ಳ ಈ ಬಾಲಕ ಮೊದಲ ಸಲ ಕೆಫೆಯಲ್ಲಿ ಆರ್ಡರ್​ ಮಾಡಿದ ಕ್ಷಣಗಳನ್ನು ವಿಡಿಯೋ ಮಾಡಿದ್ದಾರೆ ಆತನ ತಾಯಿ.

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by MY BOY BLUE (@my_boy_blue_2017)

ತಾಯಿ ಮತ್ತು ಮಗನಿಗೆ ಅತ್ಯಂತ ಹೆಮ್ಮೆ ಮತ್ತು ಖುಷಿ ಕೊಟ್ಟ ಕ್ಷಣ ಇದು. ಏಕೆಂದರೆ, ನಿಮ್ಮ ಮಗ ಎಲ್ಲರಂತೆ ಸರಾಗವಾಗಿ ಮಾತನಾಡಲಾರ. ಇದು ಆನುವಂಶಿಕ ಸಮಸ್ಯೆ. ಬದುಕುಪೂರ್ತಿ ನಿಮ್ಮ ಮಗ ಈ ಅವಸ್ಥೆಯಲ್ಲಿಯೇ ಇರುತ್ತಾನೆ. ಹಾಗಾಗಿ ಸಾಮಾಜಿಕವಾಗಿ ಬೆರೆಯಲು ಇವನಿಗೆ ಸಾಧ್ಯವಾಗದು ಎಂದು ವೈದ್ಯರು ಹೇಳಿಬಿಟ್ಟಿದ್ದರು.

ಆದರೂ ತಾಯಿ ಮಗ ಪ್ರಯತ್ನಿಸುವುದನ್ನು ಬಿಟ್ಟಿರಲಿಲ್ಲ. ಅದರ ಫಲವೇ ಈ ಹೃದಯಸ್ಪರ್ಶಿ ವಿಡಿಯೋ. ಕೆಫೆಗೆ ಹೋಗಿ ತನಗೆ ಬೇಕಾದ ತಿನಿಸನ್ನು ಕೌಂಟರಿಗೆ ಹೋಗಿ ಆರ್ಡರ್ ಮಾಡಿ ಬರುತ್ತಿದ್ದಂತೆ ಬಾಲಕನ ಮುಖದಲ್ಲಿ ಮುಗುಳ್ನಗೆ ಅರಳುತ್ತದೆ. ಓಡಿ ಬಂದು ತನ್ನ ತಾಯಿಯ ಕೈಹಿಡಿದುಕೊಳ್ಳುತ್ತಾನೆ.

‘ಯಾರೋ ಒಬ್ಬರು ಇವನಿಂದ ಇಂಥದೆಲ್ಲ ಎಂದೂ ಸಾಧ್ಯವಿಲ್ಲ ಎಂದು ಹೇಳಿದ ಆ ಗಳಿಗೆಗಳು ನನಗಿನ್ನೂ ನೆನಪಿನಲ್ಲಿವೆ’ ಎಂಬ ನೋಟ್​ನೊಂದಿಗೆ ಅವನ ತಾಯಿ ತಮ್ಮ ಇನ್​ಸ್ಟಾಗ್ರಾಂ ಖಾತೆ ಮೈ ಬ್ಲ್ಯೂ ಬಾಯ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ನಂತರ ಗುಡ್​ನ್ಯೂಸ್​ ಮೂವ್​ಮೆಂಟ್​ ಪುಟವು ಇದನ್ನು ಹಂಚಿಕೊಂಡಿದೆ.

ನಾವೇನೆಂದು ನಮಗೆ ಅರಿವಾಗುವುದು ಪ್ರಯತ್ನ, ಫಲ ಮತ್ತು ಅದರಿಂದ ಹೊಮ್ಮುವ ಆತ್ಮವಿಶ್ವಾಸದಿಂದಲೇ ಅಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ  

Published On - 10:57 am, Thu, 15 September 22

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು