Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿ ಫಸ್ಟ್​ನೈಟ್​ ದಿನ ಬೆಡ್​ರೂಮ್​ನಲ್ಲಿ ನವ ದಂಪತಿಯೊಂದಿಗೆ ವಧುವಿನ ತಾಯಿಯೂ ಇರಬೇಕು, ವಿಚಿತ್ರವಾದರೂ ಸತ್ಯ

ಮದುವೆಯ ನಂತರದ ಮೊದಲ ರಾತ್ರಿಯಲ್ಲಿ ವಧುವಿನ ತಾಯಿ ನವ ದಂಪತಿಯೊಂದಿಗೆ ಇರುವ ಸಂಪ್ರದಾಯವೊಂದು ಇದೆ. ಇಂತಹ ವಿಚಿತ್ರ ವಿವಾಹ ಸಂಪ್ರದಾಯ ಇರುವುದು ಆಫ್ರಿಕಾದಲ್ಲಿ.

ಇಲ್ಲಿ ಫಸ್ಟ್​ನೈಟ್​ ದಿನ ಬೆಡ್​ರೂಮ್​ನಲ್ಲಿ ನವ ದಂಪತಿಯೊಂದಿಗೆ ವಧುವಿನ ತಾಯಿಯೂ ಇರಬೇಕು, ವಿಚಿತ್ರವಾದರೂ ಸತ್ಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on: Sep 14, 2022 | 7:07 PM

ಪ್ರಪಂಚದ ಅನೇಕ ದೇಶಗಳಲ್ಲಿ ಅನೇಕ ರೀತಿಯ ಮದುವೆ ಸಂಪ್ರದಾಯಗಳು ಚಾಲ್ತಿಯಲ್ಲಿದೆ. ಕೆಲವೊಂದು ಸಂಪ್ರದಾಯಗಳು ವಿಭಿನ್ನವಾಗಿದ್ದರೆ ಕೆಲವೊಂದು ಅಸಂಬದ್ಧತೆಯಿಂದ ಕೂಡಿರುತ್ತದೆ. ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ಇಂತಹ ಅಸಂಬದ್ಧತೆಯ ವಿವಾಹ ಆಚರಣೆಯನ್ನು ಅನುಸರಿಸಲಾಗುತ್ತದೆ. ಈ ಆಚರಣೆಯ ಪ್ರಕಾರ, ಮದುವೆಯ ನಂತರದ ಮೊದಲ ರಾತ್ರಿಯಲ್ಲಿ ವಧುವಿನ ತಾಯಿ ನವ ದಂಪತಿಯೊಂದಿಗೆ ಇರುತ್ತಾರೆ. ವಧುವಿನ ತಾಯಿ ಇಲ್ಲದಿದ್ದರೆ ಅವರ ಕುಟುಂಬದ ವಯಸ್ಸಾದ ಮಹಿಳೆ ಅವರೊಂದಿಗೆ ಇರಲೇಬೇಕು. ಇದು ಅಚ್ಚರಿಯಾದರೂ ಸತ್ಯ.

ನವ ದಂಪತಿಯೊಂದಿಗೆ ಮದುವೆಯ ಆಚರಣೆಯು ಯಾವ ವಿಶೇಷ ಉದ್ದೇಶವನ್ನು ಪೂರೈಸುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ವರದಿಯ ಪ್ರಕಾರ, ವಧುವಿನ ತಾಯಿ ಅಥವಾ ವಯಸ್ಸಾದ ಮಹಿಳೆ ಹೊಸದಾಗಿ ಮದುವೆಯಾದ ದಂಪತಿಗಳಿಗೆ ಅವರು ತಮ್ಮ ಜೀವನವನ್ನು ಹೇಗೆ ಸಂತೋಷದಿಂದ ಕಳೆಯಲಿದ್ದಾರೆ ಎಂಬುದನ್ನು ವಿವರಿಸುತ್ತಾರೆ. ಅಲ್ಲದೆ ಮೊದಲ ರಾತ್ರಿಯನ್ನು ಕಳೆಯುವ ವಿಧಾನವನ್ನು ಕೂಡ ವಧುವಿಗೆ ವಿವರಿಸಲಾಗುತ್ತದೆ. ಮೊದಲ ರಾತ್ರಿ ಕಳೆದ ನಂತರ ವಧುವಿನ ತಾಯಿ ಅಥವಾ ಹಿರಿಯ ಮಹಿಳೆ ದಂಪತಿ ಸಂತೋಷದ ವೈವಾಹಿಕ ಜೀವನವನ್ನು ಪ್ರಾರಂಭಿಸಿದ್ದಾರೆ ಎಂದು ಖಚಿತಪಡಿಸುತ್ತಾರೆ.

ಇನ್ನು, ಇಂಡೋನೇಷ್ಯಾದಲ್ಲೊಂದು ವಿಚಿತ್ರ ಸಂಪ್ರದಾಯವಿದೆ. ನವ ದಂಪತಿಗಳು ವಾಶ್‌ರೂಮ್‌ಗೆ ಹೋಗದೆ ಮೂರು ದಿನಗಳವರೆಗೆ ಇರಬೇಕು ಎನ್ನುವುದು ಈ ಸಂಪ್ರದಾಯ ಹೇಳುತ್ತದೆ. ವರದಿಯ ಪ್ರಕಾರ, ವಿವಾಹಿತ ದಂಪತಿಗಳು ಸಂತೋಷ ಮತ್ತು ದೀರ್ಘಾವಧಿಯ ದಾಂಪತ್ಯವನ್ನು ಆನಂದಿಸಲು ಈ ಆಚರಣೆಯನ್ನು ನಡೆಸಲಾಗುತ್ತದೆ. ದಂಪತಿಗಳು ಪರೀಕ್ಷೆಯಲ್ಲಿ ವಿಫಲರಾದರೆ ದಂಪತಿಗಳು ಬೇರೆಬೇರೆಯಾಗುತ್ತಾರೆ.

ಜನರ ಗುಂಪು ದಂಪತಿಯನ್ನು ಮೇಲ್ವಿಚಾರಣೆ ಮಾಡುತ್ತದೆ, ದಂಪತಿಗೆ ವಾಶ್ ರೂಂ ಬಳಸುವ ಬಯಕೆ ಬರದಂತೆ ಅವರು ಸ್ವಲ್ಪ ಪ್ರಮಾಣದ ಆಹಾರ ಮತ್ತು ನೀರನ್ನು ನೀಡುತ್ತಾರೆ. ಅಷ್ಟಕ್ಕೂ ಈ ಆಚರಣೆಯನ್ನು ನಡೆಸಿಕೊಂಡು ಬರುತ್ತಿರುವವರು ಟಿಡಾಂಗ್ ಬುಡಕಟ್ಟು ಜನಾಂಗದವರು. ಈ ಜನಾಂಗವು ಇಂಡೋನೇಷ್ಯಾ ಮತ್ತು ಮಲೇಷ್ಯಾ ನಡುವಿನ ಗಡಿಯ ಸಮೀಪವಿರುವ ಬೋರ್ನಿಯೊದ ಈಶಾನ್ಯ ಪ್ರದೇಶಕ್ಕೆ ಸೇರಿದೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್