Super moms: ಪ್ರಸವ ವೇದನೆಯಲ್ಲೇ ಪರೀಕ್ಷೆ ಬರೆದು, ಹೆರಿಗೆಯೆಂಬ ಅಗ್ನಿಪರೀಕ್ಷೆ ಗೆದ್ದ ಮೂವರು ಗ್ರಾಮೀಣ ಮಹಿಳೆಯರು!

ಸೂಪರ್ ಅಮ್ಮಂದಿರು: ಮಹಿಳೆಯೇ ನಿಮಗಿದೋ ಮಹಾ ನಮಸ್ಕಾರ! ಪ್ರಸವ ವೇದನೆಯಲ್ಲೇ ಮೂವರು ಗರ್ಭಿಣಿಯೊಬ್ಬರು ಪರೀಕ್ಷೆ ಬರೆದಿದ್ದಾರೆ. ಡೆಲಿವರಿಗೆ ಮುಂಚೆ ಮತ್ತು ತದನಂತರವೂ B.Ed ಪರೀಕ್ಷೆಗಳನ್ನು ಬರೆದು ಯಶಸ್ವಿಯಾಗಿ ಅಗ್ನಿಪರೀಕ್ಷೆ ಎದುರಿಸಿದ್ದಾರೆ.

Super moms: ಪ್ರಸವ ವೇದನೆಯಲ್ಲೇ ಪರೀಕ್ಷೆ ಬರೆದು, ಹೆರಿಗೆಯೆಂಬ ಅಗ್ನಿಪರೀಕ್ಷೆ ಗೆದ್ದ ಮೂವರು ಗ್ರಾಮೀಣ ಮಹಿಳೆಯರು!
ಪ್ರಸವ ವೇದನೆಯಲ್ಲೇ ಪರೀಕ್ಷೆ ಬರೆದು, ಹೆರಿಗೆಯೆಂಬ ಅಗ್ನಿಪರೀಕ್ಷೆ ಗೆದ್ದ ಮೂವರು ಗ್ರಾಮೀಣ ಮಹಿಳೆಯರು!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 14, 2022 | 4:02 PM

ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡುವುದೆಂದರೆ ಮತ್ತೊಂದು ಜನ್ಮ ಪಡೆದಂತೆಯೆ ಸರಿ.. ಪ್ರತಿಯೊಬ್ಬ ಹೆಣ್ಣಿಗೂ ಪ್ರಸವ ಸಮಯ ಎಂಬುದು ನಿಜಕ್ಕೂ ಅಗ್ನಿಪರೀಕ್ಷೆಯೇ. ಅಂತಹ ದುರ್ಭರ ಸಮಯದಲ್ಲೂ ಮಹಿಳೆಯೊಬ್ಬರು ಬಿಇಡಿ ಪರೀಕ್ಷೆ (B.Ed) ಬರೆದಿದ್ದಾರೆ. ಅಂದಹಾಗೆ ಶಿಕ್ಷಕಿಯಾಗಬೇಕೆಂಬ ಮಹದಾಸೆಯೊಂದಿಗೆ ಆ ಮಹಿಳೆ ಪರೀಕ್ಷೆ ಬರೆದಿದ್ದಾರೆಂದರೆ ಭವಿಷ್ಯಕ್ಕೆ ಆ ಮಹಿಳೆ ಮತ್ತಷ್ಟು ಉತ್ತಮ ಪ್ರಜೆಗಳನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೆರಿಗೆ ಗಡಿಬಿಡಿಯಲ್ಲಿ ಬಿಇಡಿ ಪರೀಕ್ಷೆ:

ಪರಿಶ್ರಮ ಮತ್ತು ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಈ ಮಹಿಳೆ ಸಾಬೀತುಪಡಿಸಿದ್ದಾರೆ. ಆಂಬ್ಯುಲೆನ್ಸ್‌ನಲ್ಲಿ ಗರ್ಭಿಣಿಯ ಪರೀಕ್ಷೆಗಳು ನಡೆದ ನಂತರ, ಕೆಲವೇ ಗಂಟೆಗಳಲ್ಲಿ ಹೆರಿಗೆಯಾಗಲಿದೆ ಎಂದು ವೈದ್ಯರು ಹೇಳಿದ್ದಾರೆ. ರಾಜಸ್ಥಾನದ ಜಿರಿ ಗ್ರಾಮದ (jhiri village) ಲಕ್ಷ್ಮಿ ಕುಮಾರಿ ಎಂಬ ಮಹಿಳೆ ಬಿ.ಇಡಿ. ಓದುತ್ತಿದ್ದಾರೆ. ಅವರು ಗರ್ಭಿಣಿಯಾಗಿದ್ದು, ಹೆರಿಗೆಯ ಸಮಯ ಸಮೀಪಿಸಿದೆ. ಈ ಗಡಿಬಿಡಿಯಲ್ಲಿ ಬಿಇಡಿ ಪರೀಕ್ಷೆ ಬರೆಯಬೇಕಿತ್ತು. ಆದರೆ ಲಕ್ಷ್ಮಿ ಸ್ವಲ್ಪವೂ ಭಯಪಡಲಿಲ್ಲ.

ಹೆರಿಗೆಗೆ ಆರು ಗಂಟೆಗಳ ಮೊದಲು, ಅಂದರೆ ಸೆಪ್ಟೆಂಬರ್ 6 ರಂದು ಬೆಳಿಗ್ಗೆ 7 ರಿಂದ 9 ರವರೆಗೆ ಆಂಬುಲೆನ್ಸ್‌ನಲ್ಲಿ ಕುಳಿತಿದ್ದಳು. ನಂತರ.. ಮಧ್ಯಾಹ್ನ 3 ಗಂಟೆ ಸುಮಾರಿಗೆ ಸೂರತ್ ಸಿಎಚ್ ಸಿಯಲ್ಲಿ ಲಕ್ಷ್ಮಿ ಪಾಂಡಂಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ! ಅಷ್ಟೇ ಅಲ್ಲ. ಮರುದಿನ ಬರೆಯಬೇಕಿದ್ದ ಪರೀಕ್ಷೆಗೂ ಹಾಜರಾಗಿದ್ದಳು. ಆಸ್ಪತ್ರೆಯಲ್ಲಿ ಅಡ್ಮಿಟ್​ ಆಗಿದ್ದ ವೇಳೆ ರಾತ್ರಿಯಲ್ಲೂ ಅಧ್ಯಯನ ನಡೆಸಿದ್ದಾರೆ. ನಂತರ ಅವರು ಹೆರಿಗೆಯಾದ ಮೇಲೆ, 15 ಗಂಟೆಗಳ ನಂತರ ಮತ್ತೂ ಒಂದು ಪೇಪರ್​ ಪರೀಕ್ಷೆಯನ್ನು ಬರೆದಿದ್ದಾರೆ. ಪತಿ ಶ್ಯಾಮಲಾಲ್ ಮೀನಾ ಪರೀಕ್ಷಾ ಕೇಂದ್ರದ ಅಧೀಕ್ಷಕ ಡಾ. ರವಿ ಶರ್ಮಾ ಅವರೊಂದಿಗೆ ಮಾತನಾಡಿ, ವಿಶೇಷ ಅನುಮತಿ ಪಡೆದಿದ್ದರು.

ಏತನ್ಮಧ್ಯೆ, ಈ ಕೇಂದ್ರದಲ್ಲಿ ಲಕ್ಷ್ಮಿ ಅವರೊಂದಿಗೆ ಇನ್ನೂ ಇಬ್ಬರು ಸೂಪರ್ ಮಾಮ್‌ಗಳು ಸೋನು ಶರ್ಮಾ ಮತ್ತು ಸರಿತಾ ಕೂಡ ಪರೀಕ್ಷೆಗಳನ್ನು ಬರೆದಿದ್ದಾರೆ. ನಾಲ್ಕು ದಿನಗಳ ಹಿಂದೆ ಸೋನು ಮಗುವಿಗೆ ಜನ್ಮ ನೀಡಿದ್ದಾಳೆ.

ಪರೀಕ್ಷೆ ತೆಗೆದುಕೊಂಡ ನಂತರ ಪರೀಕ್ಷಾ ಕೇಂದ್ರದಲ್ಲಿ ಅವರಿಗೆ ಹಾಸಿಗೆಯ ವ್ಯವಸ್ಥೆ ಮಾಡಲಾಗಿತ್ತು. ಮೂರು ದಿನಗಳ ಹಿಂದೆ ಸರಿತಾ ಕೂಡ ಮಗುವಿಗೆ ಜನ್ಮ ನೀಡಿದ್ದರು. ಅವರು ಕಾರಿನಲ್ಲಿ ಕೂತು ಪರೀಕ್ಷೆಯನ್ನೂ ಬರೆದಿದ್ದರು. ಆದರೆ, ಹೆರಿಗೆ ನೋವನ್ನು ಸಹಿಸಿಕೊಂಡು ಜೀವನದ ಮಹತ್ವದ ಸಮಯದಲ್ಲೂ ಪರೀಕ್ಷೆಗೆ ಹಾಜರಾದ ಈ ಮಹಿಳೆಯರನ್ನು ಪರೀಕ್ಷಾ ಕೇಂದ್ರದ ಅಧೀಕ್ಷಕ ಡಾ. ರವಿ ಶರ್ಮಾ ಅಭಿನಂದಿಸಿದ್ದಾರೆ. ಮಹಿಳೆಯರ ಸಮರ್ಪಣಾ ಮನೋಭಾವಕ್ಕೆ ನಮನ ಸಲ್ಲಿಸುತ್ತೇವೆ ಎಂದು ಶಿರಬಾಗಿದ್ದಾರೆ.