ಹಾವು ಅಂದ್ರೆ ಯಾರಿಗೆ ತಾನೇ ಭಯವಿಲ್ಲ ಹೇಳಿ? ನಿದ್ದೆಗಣ್ಣಲ್ಲಿ ಹಾವು ಅಂದರೂ ಎದ್ದು-ಬಿದ್ದು ಓಡಿ ಹೋಗುತ್ತೇವೆ. ಆದರೆ ಇಲ್ಲೊರ್ವರು ಮಾತ್ರ ಭಯವಿಲ್ಲದೇ ಹಾವಿಗೆ ನೀರು ಕುಡಿಸುತ್ತಿದ್ದಾರೆ. ದೈತ್ಯ ನಾಗರ ಹಾವಿಗೆ ಗ್ಲಾಸಿನಲ್ಲಿ ನೀರು (Water) ಕುಡಿಸುತ್ತಿರುವ ದೃಶ್ಯವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾಗಿದೆ. ಸಾಮಾನ್ಯವಾಗಿ ಹಾವುಗಳ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಸದ್ದು ಮಾಡುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಭಯಾನಕವಾಗಿದ್ದರೆ ಇನ್ನು ಕೆಲವು ಎಚ್ಚರಿಕೆಯ ಸಂದೇಶವನ್ನು ಸಾರುತ್ತವೆ. ಇದೀಗ ವೈರಲ್ ಆದ ವಿಡಿಯೊ (Viral video) ಕೂಡಾ ಅಂಥದ್ದೇ! ನಾಗರಹಾವೊಂದು (Cobra) ಗ್ಲಾಸಿನಲ್ಲಿದ್ದ ನೀರನ್ನು ಗಟಗಟನೇ ಕುಡಿಯುತ್ತಿದೆ. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ನೆಟ್ಟಿಗರು ತಮ್ಮ ಅನಿಸಿಕೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮೈ ಜುಂ ಎನಿಸುವ ದೃಶ್ಯ ಸಕತ್ ವೈರಲ್ ಆಗಿದೆ. ವಿಡಿಯೊ ಇದೆ ನೀವೇ ನೋಡಿ.
ಈ ಕಪ್ಪು ಬಣ್ಣದ ನಾಗರಹಾವು ಆಫ್ರಿಕಾದಲ್ಲಿ ಹೆಚ್ಚು ಕಂಡು ಬರುತ್ತದೆ. ವಿಷಕಾರಿ ಹಾವುಗಳಿವು. ಸುಮಾರು 1.2 ರಿಂದ 2.2 ಮೀ (3.9 ರಿಂದ 7.2 ಅಡಿ) ಉದ್ದಕ್ಕೆ ಬೆಳೆಯಬಹುದು. ಈ ಹಾವುಗಳು ಉಗುಳುವ ನಾಗರ ಹಾವುಗಳಂತೆಯೇ, ಬೆದರಿಕೆಗೆ ಒಳಗಾದಾಗ ತಮ್ಮ ಕೋರೆಹಲ್ಲುಗಳ ಮೂಲಕ ವಿಷವನ್ನು ಹೊರಹಾಕುತ್ತವೆ.
ಈ ಹಾವಿನ ವಿಷವು ಚರ್ಮದ ಗುಳ್ಳೆಗಳು, ಉರಿಯೂತವನ್ನು ಉಂಟುಮಾಡಬಹುದು. ವಿಷ ಕಣ್ಣಿಗೆ ಸಂಪರ್ಕಿಸಿದರೆ ಶಾಶ್ವತ ಕುರುಡುತನಕ್ಕೂ ಕಾರಣವಾಗುವ ಸಾಧ್ಯತೆಗಳಿರುತ್ತವೆ. ಕಪ್ಪು ಬಣ್ಣದ ನಾಗರ ಹಾವು ಗ್ಲಾಸಿನಲ್ಲಿ ನೀರು ಕುಡಿಯುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ವ್ಯಕ್ತಿ ಕೈಗಳಿಗೆ ಗ್ಲೌಸ್ಗಳನ್ನು ತೊಟ್ಟು ಗ್ಲಾಸಿನಲ್ಲಿ ನೀರು ಕುಡಿಸುತ್ತಿದ್ದಾನೆ. 30 ಸೆಕೆಂಡುಗಳಿರು ವಿಡಿಯೊ ಕ್ಲಿಪ್ ಫುಲ್ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದೆ. ಸುಮಾರು 1.24 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ನಾನಿನ್ನೂ ಈ ರೀತಿಯ ದೃಶ್ಯ ನೋಡಿರಲಿಲ್ಲ ಎಂದು ಓರ್ವರು ಹೇಳಿದ್ದರೆ, ಭಯಾನಕ ದೃಶ್ಯವಿದು ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಹಾವಿಗೆ ನೀರುಣಿಸುವುದೇ? ಎಂದು ಕೆಲವರು ಹುಬ್ಬೇರಿಸಿದ್ದಾರೆ. ಮೈ ಜುಂ ಅನಿಸುವ ಈ ದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.
ಇದನ್ನೂ ಓದಿ:
Viral Video: ಕಡಲ ತೀರದಲ್ಲಿ ಅಲೆಗಳ ಜೊತೆ ಆಟವಾಡುತ್ತಿದ್ದ ನಾಗರ ಹಾವು!
Published On - 8:46 am, Wed, 24 November 21