Viral: ಟ್ರಿಪ್ ಹೊರಟ ಗೆಳತಿಯ ಮುಂದೆ ವಿಚಿತ್ರ ಬೇಡಿಕೆಯಿಟ್ಟ ಗೆಳೆಯ, ಇದು ಸರಿನಾ ಎಂದು ಪ್ರಶ್ನಿಸಿದ ಯುವತಿ

ನೀವು ಪ್ರೀತಿಸುವ ಹುಡುಗಿ ಅಥವಾ ಹುಡುಗ ನಿಮ್ಮ ಬಳಿ ಕೆಲವೊಂದು ಬೇಡಿಕೆಯಿಟ್ಟಿರಬಹುದು. ನಿಮ್ಮವರ ಬೇಡಿಕೆಯನ್ನು ನೀವು ಖುಷಿಯಿಂದಲೇ ಈಡೇರಿಸಬಹುದು. ಆದರೆ ಈ ಯುವತಿಯ ಮುಂದೆ ಪ್ರಿಯಕರನು ವಿಚಿತ್ರ ಬೇಡಿಕೆಯಿಟ್ಟಿದ್ದಾನೆ. ಆಸ್ಟ್ರೇಲಿಯಾಗೆ ಟ್ರಿಪ್‌ಗೆ ಹೋಗಲು ಮುಂದಾದ ಯುವತಿಯ ಮುಂದೆ ತನ್ನ ಬಾಯ್ ಫ್ರೆಂಡ್‌ ವಿಚಿತ್ರ ಡಿಮ್ಯಾಂಡ್‌ ಮಾಡಿದ್ದನ್ನು ಕಂಡು ಶಾಕ್ ಆಗಿದ್ದಾಳೆ, ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಟ್ರಿಪ್ ಹೊರಟ ಗೆಳತಿಯ ಮುಂದೆ ವಿಚಿತ್ರ ಬೇಡಿಕೆಯಿಟ್ಟ ಗೆಳೆಯ, ಇದು ಸರಿನಾ ಎಂದು ಪ್ರಶ್ನಿಸಿದ ಯುವತಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Oct 04, 2025 | 6:43 PM

ಯಾವುದೇ ಸಂಬಂಧವಿರಲಿ (relationship) ನಂಬಿಕೆ ಬಹಳ ಮುಖ್ಯ. ನೀವು ಇಷ್ಟ ಪಡುವ ವ್ಯಕ್ತಿಯ ಮೇಲೆ ನಂಬಿಕೆಯೇ ಇಲ್ಲದೇ ಹೋದಾಗ ನಿಮ್ಮ ಹತೋಟಿಯಲ್ಲಿ ಇಡುವ ನಡವಳಿಕೆಗಳು ವ್ಯಕ್ತವಾಗುತ್ತದೆ. ಈ ಯುವತಿಗೂ ತನ್ನ ಪ್ರಿಯಕರನ ವರ್ತನೆಯೂ ತನ್ನನ್ನು ಹತೋಟಿಗೆ ತೆಗೆದುಕೊಳ್ಳುವಂತೆ ಇದೆ ಎಂದು ಅನಿಸಿದೆ. ಅಮೆರಿಕದ (America) ಯುವತಿಯೂ ಆಸ್ಟ್ರೇಲಿಯಾ ಟ್ರಿಪ್‌ಗೆ ಹೋಗಲು ಮುಂದಾದಾಗ ಬಾಯ್‌ಫ್ರೆಂಡ್ ನಕಲಿ ಎಂಗೇಜ್‌ಮೆಂಟ್ ರಿಂಗ್ ಧರಿಸು ಎನ್ನುವ ವಿಚಿತ್ರ ಬೇಡಿಕೆಯೂ ಆಕೆಯ ಮುಂದೆ ಇಟ್ಟಿದ್ದಾನೆ. ಈ ವಿಚಿತ್ರ ಬೇಡಿಕೆಯ ಬಗ್ಗೆ ಕೇಳಿ ಯುವತಿಗೆ ಶಾಕ್ ಆಗಿದ್ದು ಇದು ಸರಿನಾ ಎನ್ನುವ ಪ್ರಶ್ನೆ ಆಕೆಯ ಮನಸ್ಸಿನಲ್ಲಿ ಮೂಡಿದೆ. ತನ್ನ ಬಾಯ್ ಫ್ರೆಂಡ್ ಮಾಡಿದ್ದು ಸರಿನಾ ಎಂದು ಪ್ರಶ್ನಿಸಿದ್ದು ಬಳಕೆದಾರರ ಸಲಹೆ ಕೇಳಿದ್ದಾಳೆ.

ಬಾಯ್‌ ಫ್ರೆಂಡ್‌ನ ವಿಚಿತ್ರ ಬೇಡಿಕೆ ಕೇಳಿ ಯುವತಿ ಶಾಕ್‌

ಆರ್‌/ ಐಟಿಎಎಚ್ (r/AITAH) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡಿದ್ದು, ಎಲ್ಲರಿಗೂ ನಮಸ್ಕಾರ, 24 ವರ್ಷದ ನಾನು ಆಸ್ಟ್ರೇಲಿಯಾಗೆ ಶಿಫ್ಟ್ ಆಗುವ ಪ್ಲ್ಯಾನ್‌ನಲ್ಲಿದ್ದೇನೆ. ನನಗೆ ಸರೀಸೃಪಗಳು ಅಂದ್ರೆ ಇಷ್ಟ. ನಾನು 12 ವರ್ಷದವಳಿದ್ದಾಗ ಆಸ್ಟ್ರೇಲಿಯಾದಲ್ಲಿ 72 ಅತ್ಯಂತ ಅಪಾಯಕಾರಿ ಪ್ರಾಣಿಗಳನ್ನು ನೋಡಿದ್ದೆ. ಆವಾಗಿನಿಂದ ನಾನು ಅಲ್ಲಿಗೆ ಹೋಗಬೇಕೆಂದು ಬಯಸಿದ್ದೆ. ನನ್ನ ಕುಟುಂಬವೂ ಒಂದು ತಿಂಗಳ ರಜೆಯ ಮೇಲೆ ಕರೆದುಕೊಂಡು ಹೋಗಲು ಒಪ್ಪಿಕೊಂಡಿದೆ. ಆದರೆ ಈ ಪ್ರಯಾಣಕ್ಕೂ ಮುನ್ನ ನನ್ನ ಬಾಯ್‌ಫ್ರೆಂಡ್ ಡಾನ್ ನಕಲಿ ಎಂಗೇಜ್‌ಮೆಂಟ್ ರಿಂಗ್ ಧರಿಸಬೇಕು, ಆಗ ಸ್ಥಳೀಯರು ತಮ್ಮ ಬಳಿ ಚಾನ್ಸ್ ಇದೆ ಎಂದು ಯೋಚಿಸುವುದಿಲ್ಲ ಎಂದು ಹೇಳಿದ್ದಾನೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

WIBTAH if i dont wear a fake engagement ring on a family vacation?
byu/Antique_Quantity6463 inAITAH

ಇದನ್ನೂ ಓದಿ
ವರದಕ್ಷಿಣೆ ಬೇಡವೆಂದಿದ್ದಕ್ಕೆ ವರನೇ ಬೇಡವೆಂದ ವಧು
ನಡುರಸ್ತೆಯಲ್ಲೇ ಗಂಡನಿಗೆ ಥಳಿಸಿದ ಹೆಂಡ್ತಿ
ಲವರ್​ ಜತೆ ಹೊರಟ ತಾಯಿಯನ್ನು ಪರಿ ಪರಿಯಾಗಿ ಬೇಡಿದ ಮಕ್ಕಳು
15 ದಿನ ಗಂಡನ ಜೊತೆ, 15 ದಿನ ಪ್ರೇಮಿ ಜೊತೆ; ಈ ಮಹಿಳೆಯ ಶೋಕಿಗೆ ಊರವರು ಶಾಕ್!

ಆದರೆ ನಾನು ಸ್ಥಳೀಯರು ಹಾಗೆಲ್ಲಾ ಯೋಚಿಸುವುದಿಲ್ಲ ಎಂದು ಅವನಿಗೆ ತಿಳಿಸಿ ಹೇಳಲು ಪ್ರಯತ್ನಿಸಿದೆ. ಆದರೆ ಅವನು ಹಠ ಹಿಡಿದು, ಇದ್ದಕ್ಕಿದ್ದಂತೆ ನನಗಾಗಿ ಒಂದು ದೊಡ್ಡ ಉಂಗುರವನ್ನು ತಂದುಕೊಟ್ಟ, ನಮ್ಮಿಬ್ಬರದ್ದು ಎಂಗೇಜ್‌ಮೆಂಟ್ ಆಗಿಲ್ಲದ ಕಾರಣ ನಾನು ಇದನ್ನು ಧರಿಸಲು ಸಾಧ್ಯವಿಲ್ಲ ಎಂದು ನೇರವಾಗಿಯೇ ಹೇಳಿದೆ. ಇದು ನಮ್ಮಿಬ್ಬರ ನಡುವೆ ಜಗಳಕ್ಕೆ ಕಾರಣವಾಯಿತು. ಜಗಳದ ಬಳಿಕ ಅವನು ಸೋಫಾದ ಮೇಲೆ ಮಲಗಲು ಹೋದ. ಅಷ್ಟರೊಳಗೆ ನನ್ನ ಬಾಯ್ ಫ್ರೆಂಡ್ ತಾಯಿ ನನಗೆ ಮೆಸೇಜ್ ಮಾಡಿ, ‘ಇದು ಡಾನ್‌ಗೆ ಕಂಫರ್ಟಬಲ್ ಎನಿಸಿದರೆ, ಇದರಲ್ಲಿ ದೊಡ್ಡ ವಿಷಯವೇನಿಲ್ಲ. ನೀನು ಅದನ್ನು ಧರಿಸಬೇಕು’ ಎಂದು ಬಿಟ್ಟರು ಎಂದು ಇಲ್ಲಿ ತನ್ನ ಇಕ್ಕಟ್ಟಿನ ಪರಿಸ್ಥಿತಿಯನ್ನು ವಿವರಿಸಿದ್ದಾಳೆ.

ನಾನು ಡಾನ್‌ನನ್ನು ತುಂಬಾ ಪ್ರೀತಿಸುತ್ತೇನೆ ಹಾಗೂ ಭವಿಷ್ಯದಲ್ಲಿ ಮದುವೆಯಾಗಲೂ ಬಯಸುತ್ತೇನೆ, ಆದರೆ ನಕಲಿ ಉಂಗುರ ಧರಿಸುವುದು ನನಗೆ ತಪ್ಪು ಎಂದು ಅನಿಸುತ್ತಿದೆ. ನನಗೆ ಈ ಬಗ್ಗೆ ಜಗಳವಾಡಲು ಇಷ್ಟವಿಲ್ಲ. ಆದರೆ ಕಷ್ಟ ಪಟ್ಟು ಉಂಗುರ ಧರಿಸಿ ನನ್ನ ಕುಟುಂಬಕ್ಕೆ ವಿವರಿಸಲು ಪ್ರಯತ್ನಿಸಬೇಕೇ ಅಥವಾ ನಕಲಿ ಉಂಗುರವನ್ನು ಧರಿಸಲು ನಿರಾಕರಿಸಬೇಕೇ ತಿಳಿಯುತ್ತಿಲ್ಲ. ನನ್ನ ಕುಟುಂಬದವರಿಗೆ ಹಾಗೂ ಸ್ನೇಹಿತರಿಗೆ ಈ ಬಗ್ಗೆ ನಾನು ಹೇಳಿಲ್ಲ. ಅವರೆಲ್ಲರೂ ಡಾನ್ ಅನ್ನು ಪ್ರೀತಿಸುತ್ತಾರೆ. ನನ್ನ ತಂದೆ ತಾಯಿ ಆತನನ್ನು ಮಗ ಎಂದು ಕರೆಯುತ್ತಾರೆ. ಹೀಗಾಗಿ ಈ ವಿಚಾರವೂ ನನ್ನ ಸಂಬಂಧ ಅಥವಾ ನನ್ನ ಕುಟುಂಬದ ಸಂಬಂಧವನ್ನು ಹಾಳು ಮಾಡಬಾರದು. ಆದರೆ ಇದನ್ನು ಹೇಗೆ ನಿಭಾಯಿಸಬೇಕೆಂದು ನನಗೆ ತಿಳಿಯುತ್ತಿಲ್ಲ. ನಾನು ಅವನನ್ನು ನಿಶ್ಚಿತಾರ್ಥ ಮಾಡಿಕೊಳ್ಳು ಎಂದು ಆತುರಪಡಿಸಲು ಬಯಸುವುದಿಲ್ಲ. ಅವನು ಇನ್ನಷ್ಟು ಸಮಯ ತೆಗೆದುಕೊಳ್ಳಲಿ. ಆದರೆ ಈ ಪರಿಸ್ಥಿತಿ ವಿಚಿತ್ರವಾಗಿ ತೋರುತ್ತದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ರೇಂಜ್ ರೋವರ್ ಕಾರು ಕೊಡ್ತೀನಿ, ಫ್ಲಾಟ್ ಕೊಡ್ತೀನಿ ಎಂದ ಮಾವ, ಬೇಡವೆಂದಿದ್ದಕ್ಕೆ ವರನೇ ಬೇಡವೆಂದ ವಧು

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರ ಸಲಹೆ ನೀಡಿದ್ದು ಒಬ್ಬ ಬಳಕೆದಾರ ನಕಲಿ ಉಂಗುರ ಧರಿಸುವ ಬಗ್ಗೆ ನಿಮ್ಮ ಕುಟುಂಬದೊಂದಿಗೆ ಚರ್ಚಿಸಿ. ನಿಮ್ಮ ಮನೆಯವರಿಗೆ ಆತನ ಬಗ್ಗೆ ಅಭಿಪ್ರಾಯ ಇರಬಹುದು. ಆದರೆ ಆತನ ವಿಚಿತ್ರ ಬೇಡಿಕೆಯೇ ಆ ವ್ಯಕ್ತಿಯ ವ್ಯಕ್ತಿತ್ವ ತೋರಿಸುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಈ ಸಂಬಂಧದ ಬಗ್ಗೆ ಹೆಚ್ಚು ನಂಬಿಕೆ ಇಡುವುದು ಒಳ್ಳೆಯದಲ್ಲ, ಸ್ವಲ್ಪ ಯೋಚಿಸಿ ಮುಂದುವರೆಯಿರಿ ಎಂದು ಸಲಹೆ ನೀಡಿದ್ದಾರೆ. ನಿಶ್ಚಿತಾರ್ಥದ ಉಂಗುರವು ನೀವು ನಿಶ್ಚಿತಾರ್ಥ ಮಾಡಿಕೊಂಡಿದ್ದೀರಿ ಎಂಬುದನ್ನು ಸಂಕೇತಿಸುತ್ತದೆ. ನಕಲಿ ನಿಶ್ಚಿತಾರ್ಥದ ಉಂಗುರವು ಅವನು ನಿಮ್ಮನ್ನು ನಂಬುವುದಿಲ್ಲ ಎಂಬುದನ್ನು ಸಂಕೇತಿಸುತ್ತದೆ ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ