Viral Photo: ತನ್ನ ಪ್ರೇಯಸಿಗಾಗಿ ವಿಭಿನ್ನ ಡ್ರೆಸ್​ ಸ್ಟಿಚ್​ ಮಾಡಿದ ಯುವಕ! ಅಂದದ ಉಡುಗೊರೆ ತೊಟ್ಟು ಸ್ಟೈಲ್​ ಆಗಿ ನಿಂತ ಯುವತಿ

ಟ್ವಿಟರ್​ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್​ನಲ್ಲಿ ಗಮನಿಸುವಂತೆ, ಯುವಕ ಮೊದಲು ತನ್ನ ಹುಡುಗಿಯ ಔಟ್​ಫಿಟ್​ ಅಳತೆಯನ್ನು ಪೇಪರ್​ ಮೇಲೆ ಮಾರ್ಕ್​ ಮಾಡಿದ್ದಾನೆ. ನಂತರ ಆ ಅಳತೆಗೆ ತಕ್ಕಂತೆಯೇ ಬಟ್ಟೆಯನ್ನು ವಿನ್ಯಾಸದೊಂದಿಗೆ ಕತ್ತರಿಸಿ ಸ್ಟಿಚ್​ ಮಾಡಿದ್ದಾನೆ.

Viral Photo: ತನ್ನ ಪ್ರೇಯಸಿಗಾಗಿ ವಿಭಿನ್ನ ಡ್ರೆಸ್​ ಸ್ಟಿಚ್​ ಮಾಡಿದ ಯುವಕ! ಅಂದದ ಉಡುಗೊರೆ ತೊಟ್ಟು ಸ್ಟೈಲ್​ ಆಗಿ ನಿಂತ ಯುವತಿ
ತನ್ನ ಪ್ರೇಯಸಿಗಾಗಿ ವಿಭಿನ್ನ ಡ್ರೆಸ್​ ಸ್ಟಿಚ್​ ಮಾಡಿದ ಯುವಕ!
Edited By:

Updated on: Jun 18, 2021 | 1:09 PM

ತನ್ನ ಪ್ರಿಯತಮ ಸರ್​ಪ್ರೈಸ್​ ಗಿಫ್ಟ್​ ಕೊಡುತ್ತಾನೆ ಎಂಬ ಆಸೆ ಎಲ್ಲಾ ಪ್ರೇಯಸಿಗೂ ಇದ್ದೇ ಇರುತ್ತದೆ. ಅದರಲ್ಲಿಯೂ ಮನಸ್ಸಿಗೆ ಇಷ್ಟವಾದ ಉಡುಗೊರೆಯನ್ನು ಕೊಟ್ಟರಂತೂ ಕೇಳುವುದೇ ಬೇಡ? ಅವನ ಮೇಲಿನ ಪ್ರೀತಿಯ ವರ್ಣಿಸಲು.. ಹಾಗೆಯೇ ಪ್ರತಿಯೊಬ್ಬ ಪ್ರೇಮಿ ಕೂಡಾ ತನ್ನ ಪ್ರೇಯಸಿಗೆ ಇಷ್ಟವಾಗುವಂಥಹ ಉಡುಗೊರೆ ಕೊಡಬೇಕು.. ಆಕೆಯ ಮುಖದಲ್ಲಿ ಖುಷಿಯನ್ನು ನೋಡಬೇಕು ಎಂದು ವಿಭಿನ್ನ ಶೈಲಿಯಲ್ಲಿ ಪ್ಲಾನ್​ ಮಾಡುತ್ತಲೇ ಇರುತ್ತಾರೆ. ಈ ಯುವಕನೂ ಹಾಗೆ! ತನ್ನ ಪ್ರೇಯಸಿಗಾಗಿ ಕಷ್ಟವನ್ನೂ ಇಷ್ಟಪಟ್ಟು ತಾನೇ ಸ್ವತಃ ಡ್ರೆಸ್​ ಸ್ಟಿಚ್​ ಮಾಡಿದ್ದಾನೆ. ಉಡುಗೆ ತೊಟ್ಟು ನಿಂತ ಯುವತಿಯ ಮುಖದಲ್ಲಿ ಖುಷಿಯೋ ಖುಷಿ..

ಡ್ರೆಸ್​ ಹೊಲಿಯುವುದು ಸುಲಭವಲ್ಲ. ಅದರಲ್ಲಿಯೂ ಹೊಸ ವಿಧದ ವಿನ್ಯಾಸದೊಂದಿಗೆ ಬಟ್ಟೆಯನ್ನು ಸ್ಟಿಚ್​ ಮಾಡುವುದು ಸಾಹಸವೇ ಸರಿ. ಹೀಗಿರುವಾಗ ತನ್ನ ಪ್ರೇಯಸಿಗಾಗಿ ಈತ ವಿವಿಧ ಬಣ್ಣದ ವಸ್ತ್ರವನ್ನು ಆರಿಸಿ ತಂದು ಹೊಸ ಶೈಲಿಯಲ್ಲಿ ಡ್ರೆಸ್​ ಸ್ಟಿಚ್​ ಮಾಡಿದ್ದಾನೆ. ಈತನ ತಾಳ್ಮೆ ಮತ್ತು ಪರಿಶ್ರಮಕ್ಕೆ ನೆಟ್ಟಿಗರು ಶ್ಲಾಘಿಸಿದ್ದಾರೆ.

ಟ್ವಿಟರ್​ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್​ನಲ್ಲಿ ಗಮನಿಸುವಂತೆ, ಯುವಕ ಮೊದಲು ತನ್ನ ಹುಡುಗಿಯ ಔಟ್​ಫಿಟ್​ ಅಳತೆಯನ್ನು ಪೇಪರ್​ ಮೇಲೆ ಮಾರ್ಕ್​ ಮಾಡಿದ್ದಾನೆ. ನಂತರ ಆ ಅಳತೆಗೆ ತಕ್ಕಂತೆಯೇ ಬಟ್ಟೆಯನ್ನು ವಿನ್ಯಾಸದೊಂದಿಗೆ ಕತ್ತರಿಸಿ ಸ್ಟಿಚ್​ ಮಾಡಿದ್ದಾನೆ. ಯುವತಿಗೆ ಡ್ರೆಸ್​ ಸರಿಯಾಗಿ ಹೊಂದುತ್ತಿದೆ. ಜತೆಗೆ ಡಿಫರೆಂಟ್​ ಸ್ಟೈಲ್​ನಲ್ಲಿ ಸ್ಟಿಚ್​ ಮಾಡಿದ ಯುವಕನ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ 3.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 25,000 ಕ್ಕೂ ಹೆಚ್ಚು ರೀಟ್ವೀಟ್​ ಮಾಡಲಾಗಿದೆ. ಯುವಕನ ತಾಳ್ಮೆ ಮತ್ತು ಪರಿಶ್ರಮಕ್ಕೆ ನೆಟ್ಟಿಗರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:

Viral video: ತಲೆ ಮೇಲೆ ಭಾರದ ಪಾತ್ರೆ ಬುಟ್ಟಿ ಹೊತ್ತು ನೀರಿನಲ್ಲಿ ಬೈಕ್​ ಓಡಿಸಿದ ಮಹಿಳೆ! ಅದ್ಭುತ ಪ್ರತಿಭೆಗೆ ಪ್ರಶಂಸೆ

Viral Video: ಅಲುಗಾಡುತ್ತಿರುವ ಸೇತುವೆಯ ಮೇಲೆ ಕೋತಿಯ ಫ್ಯಾಶನ್​ ಶೋ! ಗಮ್ಮತ್ತಾಗಿದೆ ವಿಡಿಯೋ ನೀವೂ ನೋಡಿ