ಇನ್ನೇನು ಕೆಲವೇ ಕ್ಷಣಗಳಲ್ಲಿ ಮದುವೆ ಸುಲಲಿತವಾಗಿ ನೆರವೇರಬೆಕಿತ್ತು.. ವರ ಮಹಾಶಯ ವಧುವಿನ ಕೊರಳಿಗೆ ತಾಳಿ ಕಟ್ಟುವ ಸಮಯ ಬಂದೇ ಬಿಟ್ಟಿತ್ತು. ಅಷ್ಟೇ! ಸೀನ್ ಕಟ್ ಮಾಡಿದರೆ… ವಧುವಿನ ಗೆಳೆಯ ಮದುವೆ ಮಂಟಪಕ್ಕೆ ನುಗ್ಗಿಬಂದವನೇ, ಎಲ್ಲರಿಗೂ ಶಾಕ್ ಕೊಡುತ್ತಾನೆ. ಒಟ್ಟಿನಲ್ಲಿ ಸಿನಿಮಾದ ಸ್ಟೈಲ್ ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಗಳು.. ಕೊನೆಗೆ ಏನಾಯ್ತು ತಮಿಳುನಾಡಿನ ತಂಡಯಾರ್ ನಲ್ಲಿ ನಡೆದಿದ್ದ ಈ ಘಟನೆಯಲ್ಲಿ ಅಂದರೆ…
ವಿವರಕ್ಕೆ ಹೋಗುವುದಾದರೆ.. ಚೆನ್ನೈನ ತಂಡಯಾರ್‌ನ 20 ವರ್ಷದ ಸುಮತಿ ಎಂಬಾಕೆಗೆ 4 ತಿಂಗಳ ಹಿಂದೆ ಅದೇ ಪ್ರದೇಶದಲ್ಲಿ ವಾಸಿಸುವ ರಾಜ್ ಎಂಬ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥವಾಗಿತ್ತು. ಇತ್ತೀಚೆಗಷ್ಟೇ ಉಭಯ ಕುಟುಂಬಸ್ಥರು ಇಬ್ಬರಿಗೂ ಮದುವೆ ಏರ್ಪಡಿಸಿದ್ದರು. ಇನ್ನು ಕೆಲವೇ ಕ್ಷಣಗಳಲ್ಲಿ ಮದುವೆ.. ವಧುವಿನ ಕೊರಳಿಗೆ ತಾಳಿ ಕಟ್ಟಲು ವರ ಸಿದ್ಧನಿದ್ದ.. ಅಷ್ಟೇ! ಅಷ್ಟರಲ್ಲಿ ಕಥೆಯಲ್ಲಿ ಶಾಕಿಂಗ್ ಟ್ವಿಸ್ಟ್ ಸಿಕ್ತು. ಮದುವೆಗೆ ಬಂದಿದ್ದ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಬಂದು ವರನಿಂದ ತಾಳಿ ಕಿತ್ತುಕೊಂಡರು. ಅದನ್ನು ವಧುವಿನ ಕೊರಳಿಗೆ ಕಟ್ಟಲು ಯತ್ನಿಸಿದ್ದಾನೆ!
ಆ ವ್ಯಕ್ತಿ ಬೇರೆ ಯಾರೋ ಅಲ್ಲ. ವಧುವಿನ ಗೆಳೆಯನೇ ಅರ್ಥಾತ್ ಬಾಯ್ಫ್ರೆಂಡ್! ವಧುವಿನ ಸಹೋದರ ಮತ್ತು ಸಂಬಂಧಿಕರು ಈತನ ಕೃತ್ಯದಿಂದ ಆಘಾತಕ್ಕೊಳಗಾಗಿದ್ದಾರೆ. ಬಳಿಕ ಬೆಂಡೆತ್ತಿ ಬ್ರೇಕ್ ಹಾಕಿ, ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಪೊಲೀಸ್ ತನಿಖೆಯಿಂದ ಆ ವ್ಯಕ್ತಿ ತಾಂಡಾಯಾರ್ ನ ಸುಂದರೇಶ್ ಎಂದು ತಿಳಿದು ಬಂದಿದೆ. ಯುವತಿ ಮತ್ತು ಈ ವ್ಯಕ್ತಿ ಒಂದೇ ಜಾಗದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು.. ಆ ಪರಿಚಯ ಪ್ರೇಮಕ್ಕೆ ತಿರುಗಿತ್ತು.. ಪೋಷಕರ ಮನವೊಲಿಸಲು ಸಾಧ್ಯವಾಗದ ಕಾರಣ ಅವೆರ ಮದುವೆ ಏರ್ಪಟ್ಟಿಲ್ಲ. ಬದಲಿಗೆ ತನ್ ಮನದನ್ನೆಯ ಮದುವೆ ಬೇರೊಬ್ಬನ ಜತೆ ತನ್ನ ಕಣ್ಣೆದುರೇ ನಡೆಯುತ್ತಿರುವುದನ್ನು ಸಹಿಸಲಾಗದೆ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆದರೆ, ಆ ವೇಳೆಗಾಗಲೇ ವಧುವಿನ ಗೆಳೆಯ ದಿಢೀರ್ ಎಂಟ್ರಿ ಕೊಟ್ಟಿದ್ದರಿಂದ, ನಡೆಯಬೇಕಿದ್ದ ಮದುವೆ ನಿಂತು ಹೋಗಿತ್ತು!