
ಬ್ರೈನ್ ಟೀಸರ್ (Brain Teaser) ಇದೊಂದು ಟ್ರಿಕ್ಕಿ ಒಗಟಿನ ಆಟ. ಇಲ್ಲಿರುವ ಕೆಲವು ಒಗಟನ್ನು ಬಿಡಿಸಲು ಕೆಲವರಿಗೆ ಸಾಧ್ಯವಾಗಲ್ಲ. ಉತ್ತರ ಕಂಡು ಕೊಳ್ಳುವಷ್ಟರಲ್ಲಿ ಸಾಕಾಗಿ ಹೋಗಿರುತ್ತದೆ. ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದ್ದವರಿಗೆ ತಲೆಗೆ ಹುಳ ಬಿಡುವ ಈ ಪ್ರಶ್ನೆಗಳು ಹೊಸದೇನಲ್ಲ. ಆದರೆ ಸುಲಭವಾಗಿ ಕಾಣುವ ಕೆಲವು ಪ್ರಶ್ನೆಗಳನ್ನು ಬಿಡಿಸುತ್ತಾ ಹೋದಂತೆ ಅಷ್ಟೇ ಕಠಿಣವಾಗಿರುತ್ತದೆ. ಇದೀಗ ನಿಮ್ಮ ಬುದ್ಧಿವಂತಿಕೆಗೆ ಸವಾಲು ಹಾಕಿರುವ ಒಗಟೊಂದು ವೈರಲ್ ಆಗಿದೆ. ಇದು ಟ್ರಿಕ್ಕಿ ಪ್ರಶ್ನೆಯಾಗಿದ್ದು, ಸಂಬಂಧದ ಕುರಿತಾಗಿದೆ. ಎ ಹಾಗೂ ಡಿ ಗೂ ಇರುವ ಸಂಬಂಧವೇನು ಎನ್ನುವುದನ್ನು ನೀವು ಹೇಳಬೇಕು. ಅದಕ್ಕೂ ಮುನ್ನ ಈ ಪ್ರಶ್ನೆಯನ್ನು ತಾಳ್ಮೆಯಿಂದ ಓದಿಕೊಳ್ಳಿ.
r/Nigeria ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್‌ನಲ್ಲಿ ಬ್ರೈನ್ ಟೀಸರ್‌ಗೆ ಸಂಬಂಧಪಟ್ಟ ಪ್ರಶ್ನೆಯೊಂದಿದೆ. ಇಲ್ಲಿ ಎ ಯು ಬಿ ಯ ಸಹೋದರಿ, ಸಿ ಯು ಬಿ ನ ತಾಯಿ, ಡಿ ಯು ಸಿಯ ಅಪ್ಪ. ಹಾಗಾದ್ರೆ ಎ ಗೂ ಡಿ ಗೂ ಇರುವ ಸಂಬಂಧವೇನು ಎಂದು ಹೇಳಬಲ್ಲಿರಾ ಎನ್ನುವುದು ಪ್ರಶ್ನೆಯಾಗಿದೆ. ಇದು ಸಂಬಂಧಗಳ ನಡುವಿನ ರಹಸ್ಯವನ್ನು ಬಿಟ್ಟಿಡಲಿದ್ದು ನೀವು ಈ ಒಗಟು ಬಿಡಿಸಲು ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ ನೋಡಿ.
A is B’s sister. C is B’s mother. D is C’s father. How is A related to D?
byu/kumiNkansah inNigeria
ಇದನ್ನೂ ಓದಿ:ನೀವು ಜಾಣರೇ, ಈ ಟ್ರಿಕ್ಕಿ ಗಣಿತದ ಲೆಕ್ಕ ಬಿಡಿಸಿ ಸರಿಯಾದ ಉತ್ತರ ಹೇಳಿ
ಇಂತಹ ಟ್ರಿಕ್ಕಿ ಬ್ರೈನ್ ಟೀಸರ್ ಒಗಟನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಪ್ರಶ್ನೆ ನಿಮ್ಮ ಮೆದುಳಿಗೆ ಹುಳಬಿಟ್ಟಿದೆ ಎಂದು ನಮಗೆ ತಿಳಿದಿದೆ. ಆದರೆ ಈ ಪ್ರಶ್ನೆಗೆ ನಿಮ್ಮ ಅತೀ ಬುದ್ಧಿವಂತಿಕೆಯಿಂದ ಉತ್ತರ ಕಂಡುಕೊಳ್ಳಲು ಸಾಧ್ಯವಾಯಿತು ಎಂದು ನಾವು ಭಾವಿಸುತ್ತೇವೆ. ಈ ಪ್ರಶ್ನೆಗೆ ಕೆಲವು ಬಳಕೆದಾರ ಮೊಮ್ಮಗ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗಾದ್ರೆ ಒಣದು ಒಗಟನ್ನು ಬಿಡಿಸಲು ಸಾಧ್ಯವಾಗಿಲ್ಲವೆಂದಾದರೆ ನೀವು ಯೋಚಿಸಿ ಈ ಟ್ರಿಕ್ಕಿ ಪ್ರಶ್ನೆಗೆ ಉತ್ತರ ಹೇಳಿ ಜಾಣರು ಎನಿಸಿಕೊಳ್ಳಿ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:20 am, Tue, 11 November 25