AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಳೆಯಲ್ಲಿ ಕೊಚ್ಚಿ ಹೋದ ಬೆಳೆ; ಸಂಕಷ್ಟದಲ್ಲೂ ರೈತನ ಮುಖದಲ್ಲಿ ಮಾಸದ ನಗು

ರೈತ ದೇಶದ ಬೆನ್ನೆಲುಬು. ಆತ ಬೆವರು ಸುರಿಸಿ ದುಡಿದರೆ ಮಾತ್ರ ನಾವು ನೆಮ್ಮದಿಯಿಂದ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯ. ಆದರೆ ರೈತನ ಜೀವನದ ಜತೆಗೆ ಮಳೆಯೂ ಆಟವಾಡುತ್ತದೆ. ಇದಕ್ಕೆ ಸಾಕ್ಷಿಯೆನ್ನುವಂತಿದೆ ಈ ದೃಶ್ಯ. ಮಳೆ ಬಂದು ತಾನು ಬೆಳೆದ ಬೆಳೆಯೆಲ್ಲಾ ಹಾಳಾಗಿದ್ರೂ ರೈತನ ಮುಖದಲ್ಲಿ ನಗು ಮಾತ್ರ ಮಾಸಿಲ್ಲ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Video: ಮಳೆಯಲ್ಲಿ ಕೊಚ್ಚಿ ಹೋದ ಬೆಳೆ; ಸಂಕಷ್ಟದಲ್ಲೂ ರೈತನ ಮುಖದಲ್ಲಿ ಮಾಸದ ನಗು
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Nov 11, 2025 | 11:39 AM

Share

ಭೂಮಿ ತಾಯಿಯನ್ನೇ ನಂಬಿ ಬದುಕುತ್ತಿರುವ ರೈತನ (farmer) ಕೃಷಿ ಕಾಯಕದ ಜತೆಗೆ ಈ ಮಳೆಯೂ ಆಟವಾಡುತ್ತದೆ. ಮಳೆ ಬಾರದೆ ಬರಗಾಲದಿಂದ ಬೆಳೆಯೆಲ್ಲಾ ನಾಶವಾದರೆ, ಇನ್ನು ಕೆಲವೊಮ್ಮೆ ಅತಿಯಾದ ಮಳೆಯಿಂದ ಬೆಳೆಯೆಲ್ಲಾ ಕೊಚ್ಚಿ ಹೋಗುತ್ತದೆ. ಇಂತಹ ದೃಶ್ಯಗಳನ್ನು ನೋಡಿದಾಗ ಎಂತಹವರಿಗಾದ್ರು ಕರುಳು ಚುರ್ ಎನ್ನುತ್ತೆ. ರೈತರ ಕಷ್ಟ ಎಷ್ಟು ಎನ್ನುವ ವಿಡಿಯೋ ವೈರಲ್ ಆಗಿದೆ. ಹೌದು, ಭತ್ತದ ಕಟಾವಿಗೆ ಮಳೆ ಅಡ್ಡಿ ತಂದಿದ್ದು, ಮಳೆಯ ನಡುವೆಯೂ ರೈತರು ತಾನು ಬೆಳೆದ ಬೆಳೆಯನ್ನು ಮನೆಯ ಅಂಗಳಕ್ಕೆ ತಂದು ಇಷ್ಟು ಸಿಕ್ಕಿದ್ದು ಪುಣ್ಯ ಎನ್ನುವಂತೆ ಪೈರಿನಿಂದ ಭತ್ತವನ್ನು ಬೇರ್ಪಡಿಸುವ ದೃಶ್ಯವು ಕರುಳು ಹಿಂಡುವಂತಿದೆ. ಈ ವಿಡಿಯೋ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ.

ಮಳೆ ತಂದ ಸಂಕಷ್ಟ: ರೈತನ ಪಾಡು ಹೇಗಿದೆ ನೋಡಿ

gowrishkothari ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ರೈತನ ಬದುಕಿನ ಸ್ಪಷ್ಟ ಚಿತ್ರಣ ಇಲ್ಲಿದೆ. ಮಳೆಯಿಂದ ಹಾಳಾದ ಬೆಳೆಯನ್ನು ಮನೆಯ ಅಂಗಳಕ್ಕೆ ತರುವುದನ್ನು ಕಾಣಬಹುದು. ಕಷ್ಟ ಪಟ್ಟು ಬೆವರು ಸುರಿಸಿ ಬೆಳೆದ ಬೆಳೆಯೂ ಹಾಳಾಗಿದ್ರೂ ಕೂಡ ಈ ರೈತರ ಮುಖದಲ್ಲಿ ಮಾತ್ರ ನಗು ಮಾಸದಿರುವುದನ್ನು ಕಾಣಬಹುದು. ಮನೆಯ ಅಂಗಳದಲ್ಲಿ ಭತ್ತವನ್ನು ಪೈರಿನಿಂದ ಬೇರ್ಪಡಿಸುತ್ತಿರುವ ಕೆಲಸದಲ್ಲಿ ರೈತರು ತೊಡಗಿಕೊಂಡಿದ್ದಾರೆ. ಆದರೆ, ಜೋರಾಗಿ ಸುರಿಯುತ್ತಿರುವ ಮಳೆಗೆ ಭತ್ತವೆಲ್ಲಾ ಒದ್ದೆಯಾಗಿ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ.  ಈ ಭತ್ತವನ್ನು ನೀರಿನಿಂದ ಬೇರ್ಪಡಿಸಿ ಬುಟ್ಟಿಯಲ್ಲಿ ತುಂಬಿಸಿರುತ್ತಿರುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

View this post on Instagram

A post shared by Gowri H H (@gowrishkothari)

ಇದನ್ನೂ ಓದಿ:ಕೃಷಿ ಕೆಲಸದಲ್ಲೇ ಈ ಜನರಿಗೆ ಖುಷಿ; ಇದು ಹಳ್ಳಿ ಬದುಕಿನ ಸುಂದರ ದೃಶ್ಯಕಾವ್ಯ

ಈ ವಿಡಿಯೋ ಇಪ್ಪತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಕೃಷಿಕರ ಕಷ್ಟ ಅವನಿಗಷ್ಟೇ ಗೊತ್ತು, ಕಷ್ಟ ಏನು ಎಂದು ಗದ್ದೆಯಲಿ ನಿಂತು ನೋಡಬೇಕು ಎಂದು ಹೇಳಿದ್ದಾರೆ. ಜರಡಿ ತರ ಇರೋ ಪ್ಲಾಸ್ಟಿಕ್ ಬುಟ್ಟಿಗೆ ಹಾಕಿ ನೀರು ಬೇಗ ಇಳಿಯುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಭಗವಂತ ರೈತರನ್ನು ಕಾಪಾಡು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ