AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್​​​ ಭಯೋತ್ಪಾದನೆಯಿಂದ ಬೇಸತ್ತು ಭಾರತಕ್ಕೆ ಬಂದ ಮಹಿಳೆಗೆ ಸಿಕ್ತು ಭಾರತೀಯ ಪೌರತ್ವ

ಭಯೋತ್ಪಾದನೆಯಿಂದ ಬೇಸತ್ತು ಪಾಕಿಸ್ತಾನ ತೊರೆದು ಭಾರತಕ್ಕೆ ಬಂದ ಪೂನಂ, ಎರಡು ದಶಕಗಳ ಸುದೀರ್ಘ ಹೋರಾಟದ ನಂತರ ಭಾರತೀಯ ಪೌರತ್ವ ಪಡೆದಿದ್ದಾರೆ. ಭಾರತದಲ್ಲಿ ನೆಲೆಸಿ, ಭಾರತೀಯರನ್ನೇ ಮದುವೆಯಾಗಿ ಮಗುವಿನೊಂದಿಗೆ ಹೊಸ ಜೀವನ ನಡೆಸಲು ಆಶಿಸಿದ್ದ ಅವರಿಗೆ, ಸರ್ಕಾರದ ಕಠಿಣ ನಿಯಮಗಳ ನಡುವೆಯೂ ಕೊನೆಗೂ ನ್ಯಾಯ ಸಿಕ್ಕಿದೆ. ಇದು ಪೂನಂ ಕುಟುಂಬಕ್ಕೆ ಸಂತಸ ತಂದಿದೆ.

ಪಾಕ್​​​ ಭಯೋತ್ಪಾದನೆಯಿಂದ ಬೇಸತ್ತು ಭಾರತಕ್ಕೆ ಬಂದ ಮಹಿಳೆಗೆ ಸಿಕ್ತು ಭಾರತೀಯ ಪೌರತ್ವ
ಪೂನಂಗೆ ಭಾರತದ ಪೌರತ್ವ
ಅಕ್ಷಯ್​ ಪಲ್ಲಮಜಲು​​
| Edited By: |

Updated on:Nov 11, 2025 | 12:53 PM

Share

ಭಾರತದ ಪೌರತ್ವ (Indian Citizenship) ಪಡೆಯುವುದು ಅಷ್ಟೊಂದು ಸುಲಭದ ಮಾತಲ್ಲ. ಅದರಲ್ಲೂ 11 ವರ್ಷದಲ್ಲಿ ಪೌರತ್ವ ನೀಡುವ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭಾರತದೊಳಗೆ  ಬೇಕಾಬಿಟ್ಟಿ ವಾಸಿಸುವ ಪಾಕಿಸ್ತಾನ, ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವವರಿಗೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಪೌರತ್ವ ನೀಡುವುದರಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಪೌರತ್ವ ಯಾವ ಕಾರಣಕ್ಕೆ ಹಾಗೂ ಯಾವ ಆಧಾರದಲ್ಲಿ ನೀಡಬೇಕು ಎಂಬುದನ್ನು ಪರಿಶೀಲನೆ ನಡೆಸಿ, ನಂತರ ಪೌರತ್ವ ನೀಡುತ್ತದೆ. ಅದಕ್ಕಾಗಿ ವರ್ಷಾನುಗಟ್ಟಲೆ ಕಾಯುಬೇಕು. ಇದೀಗ ಪಾಕಿಸ್ತಾನ ಮಹಿಳೆಯೊಬ್ಬರಿಗೆ ಅದೇ ರೀತಿಯ ಪರಿಸ್ಥಿತಿ ಎದರಾಗಿತ್ತು. ಪೂನಂ ಎಂಬ ಪಾಕಿಸ್ತಾನದ ಮಹಿಳೆಯೊಬ್ಬರು ಭಾರತದ ಪೌರತ್ವಕ್ಕಾಗಿ 2 ದಶಕಗಳ ಕಾಲ ಹೋರಾಟ ನಡೆಸಿದ್ದಾರೆ. ಭಯೋತ್ಪಾನೆಯಿಂದ ಬೇಸತ್ತು ಭಾರತಕ್ಕೆ ಬಂದ ಪೂನಂ ಅವರಿಗೆ ಎರಡು ದಶಕಗಳ ನಂತರ ಪೌರತ್ವ ಸಿಕ್ಕಿದೆ.

ಪೂನಂ ಉಗ್ರರ ಸ್ವರ್ಗವಾದ ಪಾಕಿಸ್ತಾನದಿಂದ ಹೊರ ಬಂದು ಭಾರತದ ಸಂಸ್ಕೃತಿಗೆ ಮನಸೋತು ಇಲ್ಲಿ ಜೀವನಕಟ್ಟಿಕೊಳ್ಳಬೇಕು ಎಂದು ಬಂದಿದ್ದಾರೆ. ಭಾರತದಲ್ಲಿ ಪಾಕಿಸ್ತಾನದ ಪ್ರಜೆಗೆ ಪೌರತ್ವ ಸಿಗುವುದು ಬಹಳ ಕಷ್ಟ, ಅದಕ್ಕಾಗಿ 20 ವರ್ಷಗಳ ಕಾಲ ಪೌರತ್ವಕ್ಕಾಗಿ ಹೋರಾಟ ನಡೆಸಿದ್ದಾರೆ. ಇದೀಗ ಕೊನೆಗೂ ಅವರಿಗೆ ಭಾರತ ಪೌರತ್ವ ಸಿಕ್ಕಿದೆ. ಪೂನಂ ಭಯೋತ್ಪಾದನೆಯಿಂದ ಬೇಸತ್ತು ಪಾಕ್​​​​ ತೊರೆದು ದೆಹಲಿ ಬಂದಿದ್ದರು. ಇಲ್ಲಿಯೇ ಒಳ್ಳೆಯ ಜೀವನ ನಡೆಸಬೇಕು ಎಂದುಕೊಂಡಿದ್ದ ಪೂನಂ ಭಾರತದ ಮೂಲ ಉದ್ಯಮಿ ಪುನೀತ್ ಕುಮಾರ್ ಎಂಬುವವರನ್ನು ಮದುವೆಯಾಗುತ್ತಾರೆ. ಇದೀಗ ಅವರಿಗೊಂದು ಮಗು ಕೂಡ ಇದೆ.

2004ರಲ್ಲಿ ಪೂನಂ ಅವರು ತಮ್ಮ ಸಹೋದರನ ಜತೆಗೆ ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಾರೆ. 2016ರಲ್ಲಿ ಅವರ ಸಹೋದರನಿಗೆ ಭಾರತದ ಪೌರತ್ವ ನೀಡಲಾಗುತ್ತದೆ. ಆದರೆ ಪೂನಂ ಅವರ ಅರ್ಜಿ ಪದೇ ಪದೇ ತಿರಸ್ಕೃರ ಗೊಳ್ಳುತ್ತಿತ್ತು. ಆದರೆ ಇದೀಗ ಅಂತಿಮವಾಗಿ ಅವರಿಗೆ ಪೌರತ್ವ ನೀಡಲಾಗಿದೆ. ಪೌರತ್ವ ಸಿಗುವ ಮೊದಲು ಅಂದರೆ 2015ರವರೆಗೆ ಅವರು ಪಾಕಿಸ್ತಾನದಲ್ಲಿರುವ ತಮ್ಮ ಕುಟುಂಬದವರನ್ನು ಭೇಟಿ ಮಾಡುತ್ತಿದ್ದರು. ಆದರೆ ಅವರಲ್ಲಿ ಅಧಿಕೃತ ಪಾಕಿಸ್ತಾನದ ಐಡಿ ಇಲ್ಲದಿರುವ ಕಾರಣ ಪಾಕಿಸ್ತಾನ ಪಾಸ್‌ಪೋರ್ಟ್ ನವೀಕರಣವನ್ನು ತಡೆಹಿಡಿಯಲಾಯಿತು.

ಪಿಟಿಐ ಜೊತೆ ಮಾತನಾಡಿದ ಅವರ ಪತಿ ಪುನೀತ್ ಕುಮಾರ್, ದೀಪಾವಳಿಗೂ ಮುನ್ನ ಅವರ ಪೌರತ್ವ ಅರ್ಜಿ ಪುರಸ್ಕಾರಗೊಂಡಿತ್ತು. ಇದೀಗ ನಮಗೆ ಯಾವ ಭಯವು ಇಲ್ಲ. ಇದರಿಂದ ನಮ್ಮ ಕುಟುಂಬ ಸಮತೋಷವಾಗಿದೆ ಎಂದು ಹೇಳಿದರು. ಉಳಿದ ದಾಖಲೆಗಳನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇದರ ಬಗ್ಗೆ ಪೂನಂ ಕೂಡ ಮಾತನಾಡಿದ್ದಾರೆ. “ಸಾಧ್ಯವಾದಷ್ಟು ಬೇಗ ನಾನು ನನ್ನ ಆಧಾರ್, ಪ್ಯಾನ್ ಮತ್ತು ಇತರ ಭಾರತೀಯ ಗುರುತಿನ ದಾಖಲೆ ಪಡೆಯುತ್ತೇನೆ. ನಾನು ನಿಜವಾಗಿಯೂ ಭಾರತೀಯ ಪ್ರಜೆ ಎಂದು ಭಾಸವಾಗುತ್ತಿದೆ.”ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಳೆಯಲ್ಲಿ ಕೊಚ್ಚಿ ಹೋದ ಬೆಳೆ; ಸಂಕಷ್ಟದಲ್ಲೂ ರೈತನ ಮುಖದಲ್ಲಿ ಮಾಸದ ನಗು

ಪಾಕ್ನಲ್ಲಿ​​​​ ಭಯೋತ್ಪಾದನೆ ನೋಡಿ ಸಾಕಾಯಿತು:

ಸಗಟು ಆಹಾರ ವ್ಯಾಪಾರಿಯಾಗಿದ್ದ ಪೂನಂ ಅವರ ತಂದೆ ಪಾಕಿಸ್ತಾನದ ಹಿಂಸಾಚಾರ ನೋಡಿ ಮಕ್ಕಳು ಇಲ್ಲಿ ಇರುವುದು ಸರಿಯಲ್ಲ ಎಂದು ಪೂನಂ ಮತ್ತು ಅವರ ಸಹೋದರನ್ನು ಭಾರತಕ್ಕೆ ಕಳುಹಿಸಿದ್ದಾರೆ.  ಪೂನಂ ಅವರ ಸಹೋದರನ ಜತೆ ಸ್ವಾತ್‌ನಿಂದ ರಾಂಪುರದಲ್ಲಿ ಬಂದು ನೆಲೆಸಿದರು. ನಂತರ ಭಾರತದ ಪೌರತ್ವ ಪಡೆಯಲು ಹಲವು ರೀತಿಯ ಪ್ರಯತ್ನಗಳನ್ನು ಮಾಡಿ. ಇದೀಗ ಅವರು ಭಾರತದ ಪೌರತ್ವ ಪಡೆದಿದ್ದಾರೆ. ಬಗ್ಗೆ ಪಾಕಿಸ್ತಾನದಲ್ಲಿರುವ ತಮ್ಮ ಕುಟುಂಬಕ್ಕೂ ತಿಳಿಸಿದ್ದಾರೆ. ಪೂನಂ ಅವರ ಪೌರತ್ವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ರಾಂಪುರ ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾಸಾಗರ್ ಮಿಶ್ರಾ ಪಿಟಿಐಗೆ ದೃಢಪಡಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Tue, 11 November 25

ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್