ದಿನಕ್ಕೆ 14 ಗಂಟೆ ದುಡಿದ್ರೂ ಮಧ್ಯರಾತ್ರಿ ಫೋನ್ ಮಾಡಿ ಕಿರುಕುಳ ನೀಡಿದ ಮ್ಯಾನೇಜರ್
ಕೆಲಸದ ಸ್ಥಳದಲ್ಲಿ ಮ್ಯಾನೇಜರ್‌ನಿಂದ ಮಹಿಳೆಗೆ ಆದ ಕಿರುಕುಳದ ಬಗ್ಗೆ ಪೋಸ್ಟ್ವೊಂದು ವೈರಲ್ ಆಗಿದೆ. 14 ಗಂಟೆಗಳ ಕಾಲ ಕೆಲಸ ಮಾಡಿದ ನಂತರವೂ ರಾತ್ರಿ 2.45ಕ್ಕೆ ಮೆಸೇಜ್ ಮಾಡಿ ತೊಂದರೆ ನೀಡಿದ್ದು, ಉತ್ತರಿಸದಿದ್ದಕ್ಕೆ ಬಾಯಿಗೆ ಬಂದಂತೆ ಬೈದಿದ್ದಾರೆ. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಇಂತಹ ಘಟನೆಗಳು ಕೆಲಸದ ವಾತಾವರಣವನ್ನು ಕೆಡಿಸುತ್ತವೆ ಎಂದು ಮಹಿಳೆ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೆಲಸದ ಅವಧಿಯ ಬಗ್ಗೆ ಪ್ರತಿದಿನ ಚರ್ಚೆಗಳು ನಡೆಯುತ್ತ ಇರುತ್ತದೆ. ಇದೀಗ ಇಲ್ಲೊಂದು ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ. 24 ವರ್ಷದ ಮಹಿಳೆಯೊಬ್ಬರು ತಮ್ಮ ಕೆಲಸ ಸ್ಥಳದಲ್ಲಿ ನಡೆದ ಕೆಟ್ಟ ಅನುಭವದ (workplace harassment) ಬಗ್ಗೆ ಹಂಚಿಕೊಂಡಿದ್ದಾರೆ. ಟೀಮ್ ಮ್ಯಾನೇಜರ್ 14 ಗಂಟೆ ಕೆಲಸ ಮಾಡಿದ ನಂತರವೂ ಬೆಳಗಿನ ಜಾವ 2.45ಕ್ಕೆ ಮತ್ತೆ ಮೆಸೇಜ್ ಮಾಡಿ ಕಾಟ ನೀಡಿದ್ದಾರೆ ಎಂದು ಈ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಕಂಪನಿಗಳಲ್ಲಿ ಆಗುವ ಇಂಥಹ ಘಟನೆಗಳಿಗೆ ನೆಟ್ಟಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ನ್ನು ಮಹಿಳೆ ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ.
ಈ ರೀತಿಯ ಧೋರಣೆಗಳು ಕೆಲಸದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ ಹಾಗೂ ಮಾನಸಿಕ ಹಾನಿಯನ್ನು ಉಂಟು ಮಾಡುತ್ತದೆ ಎಂದು ಮಹಿಳೆ ಹೇಳಿದ್ದಾರೆ. ಮಹಿಳೆ ಪೋಸ್ಟ್ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ. “ಕಳೆದ ಎರಡು ವಾರಗಳಿಂದ ನಾನು 14 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇನೆ. ಶನಿವಾರ–ಭಾನುವಾರ ಕೂಡ ಕೆಲಸ ಮಾಡಿದ್ದಾನೆ. ಅದ್ರೂ ನನ್ನ ಮ್ಯಾನೇಜರ್ಗೆ ತೃಪ್ತಿ ಇಲ್ಲ. ಬೆಳಿಗ್ಗೆ 2:45 ಕ್ಕೆ ಮೆಸೇಜ್ ಮಾಡಿ, ಕೆಲಸದ ಬಗ್ಗೆ ಅಪ್ಡೇಟ್ ಕೇಳಿದ್ದಾರೆ. ಇದಕ್ಕೆ ನೀವು ಈಗಲೇ ಉತ್ತರಿಸಿ ಎಂದು ಹೇಳಿದ್ದಾರೆ. ಆದರೆ ನಾನು ಆಗ ನಿದ್ರೆ ಮಾಡುತ್ತಿದ್ದ ಕಾರಣ, ಅವರ ಮೆಸೇಜ್ಗೆ ಉತ್ತರಿಸಿಲ್ಲ. ಈ ಕೋಪಕ್ಕೆ ಅವರು ನನ್ನನ್ನು ಬಾಯಿಗೆ ಬಂದಂತೆ ಬೈದಿದ್ದಾರೆ. ಜತೆಗೆ ನಾನೇ ಕ್ಷಮೆ ಕೇಳಬೇಕು ಎಂದು ಅಹಂಕಾರದಲ್ಲಿ ಮಾತನಾಡಿದ್ದಾರೆ.” ಎಂದು ಹೇಳಿದ್ದಾರೆ.
ಮಹಿಳೆ ಮ್ಯಾನೇಜರ್ ಬಗ್ಗೆ ಕಂಪನಿಯ ಉತನ್ನ ಅಧಿಕಾರಿಗಳಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಯಾಕೆಂದರೆ ಮ್ಯಾನೇಜರ್ ಪ್ರಭಾವಿ ಸ್ಥಾನದಲ್ಲಿ ಇರುವ ಕಾರಣ ಅಲ್ಲಿ ಯಾವ ದೂರಿಗೂ ಬೆಲೆ ಇರಲಿಲ್ಲ. ಈ ರೀತಿಯ ಧೋರಣೆಗಳು ಮಾಸಿನಕವಾಗಿ ಕುಗ್ಗಿಸುತ್ತದೆ ಎಂದು ಮಹಿಳೆ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೂಡ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಮ್ಯಾನೇಜರ್ ಈಗಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸಂಬಂಧಗಳ ನಡುವಿನ ರಹಸ್ಯ ಬಿಡಿಸಲು ಇಲ್ಲಿದೆ ಪ್ರಶ್ನೆ; ಈ ಒಗಟು ಬಿಡಿಸಿದ್ರೆ ನೀವು ಬುದ್ಧಿವಂತರು
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
My lead expects me to reply at 2:45 AM after a 14-hour day — I’m done byu/Ill-Amphibian-3117 inIndianWorkplace
ಇಲ್ಲೊಬ್ಬರು ತಮ್ಮ ಕೆಲಸದ ಸ್ಥಳದಲ್ಲಾದ ಕಹಿ ಅನುಭವವನ್ನು ಈ ಪೋಸ್ಟ್ನ ಕೆಳಗೆ ಹಂಚಿಕೊಂಡಿದ್ದಾರೆ. “ನನ್ನ ಕಂಪನಿಗಳಲ್ಲೂ ಇಂತಹ ಘಟನೆ ನಡೆದಿತ್ತು. ಕಂಪನಿಯಲ್ಲಿ ನನಗೆ ಆಗುವ ಸಮಸ್ಯೆಗಳ ಬಗ್ಗೆ ಪ್ರಾಜೆಕ್ಟ್ ಮ್ಯಾನೇಜರ್ಗೆ ದೂರು ನೀಡಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ನಂತರ HR ಗೆ ದೂರು ನೀಡಿದೆ. ಅಲ್ಲೂ ಯಾವುದೇ ಪರಿಹಾರ ಸಿಕ್ಕಿಲ್ಲ. ನಂತರ ಮುಂಬೈ ಹೆಡ್ ಆಫೀಸ್ಗೆ ದೂರು ನೀಡಿದೆ. ಮುಂಬೈ ಹೆಡ್ ಆಫೀಸ್ನಿಂದ ನನಗೆ ಒಂದು ಇಮೇಲ್ ಬಂತು, ಸ್ವಲ್ಪ ದಿನ ಕಾಯಿರಿ, ಎಲ್ಲವನ್ನು ಸರಿ ಮಾಡುವ ಎಂದು ಹೇಳಿದ್ರು, ಆದರೆ ನನ್ನ ತಂಡವನ್ನೇ ಬದಲಾವಣೆ ಮಾಡುವಂತೆ ಒತ್ತಾಯಿಸಿದ್ರು, ಅದನ್ನು ಕೂಡ ಮಾಡಿದೆ. ಕೊನೆಗೆ ಅಲ್ಲಿ ಕೆಲಸ ಮಾಡಲು ಸಾಧ್ಯವಾಗದೆ, ನಾನು ರಾಜೀನಾಮೆ ನೀಡಿ ಹೊರ ಬಂದೆ” ಎಂದು ಹೇಳಿಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




