AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರೀಕ್ಷೆ ಬರೆಯುತ್ತಿದ್ದ ಮಹಿಳೆಯ ಶಿಶುವಿಗೆ ಎದೆಹಾಲು ಕುಡಿಸಿ ತಾಯ್ತನ ಮೆರೆದ ಪೊಲೀಸ್!

ಮಹಿಳೆಯೊಬ್ಬಳು ತನ್ನ ಹಸುಗೂಸನ್ನು ಹೊರಗಡೆ ಸಂಬಂಧಿಕರೊಂದಿಗೆ ಬಿಟ್ಟು ಪರೀಕ್ಷೆ ಬರೆಯಲು ಕೊಠಡಿಯೊಳಗೆ ಹೋಗಿದ್ದರು. ಆಗ ಆ ಮಗು ಜೋರಾಗಿ ಅಳುತ್ತಿತ್ತು. ಇದರಿಂದ ಒಳಗೆ ತಾಯಿಗೆ ಏಕಾಗ್ರತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಮಗು ಅಳುತ್ತಿದ್ದುದರಿಂದ ಆ ತಾಯಿಗೆ ಸಂಕಟವಾಗುತ್ತಿತ್ತು. ಆ ತಾಯಿಗೆ ಕಷ್ಟವಾಗಬಾರದೆಂದು ಅಲ್ಲಿದ್ದ ಮಹಿಳಾ ಕಾನ್ಸ್​ಟೆಬಲ್ ಒಬ್ಬರು ತಾವೇ ಆ ಶಿಶುವಿಗೆ ಎದೆಹಾಲು ಕುಡಿಸಿ, ಸಮಾಧಾನ ಮಾಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಪರೀಕ್ಷೆ ಬರೆಯುತ್ತಿದ್ದ ಮಹಿಳೆಯ ಶಿಶುವಿಗೆ ಎದೆಹಾಲು ಕುಡಿಸಿ ತಾಯ್ತನ ಮೆರೆದ ಪೊಲೀಸ್!
Odisha Constable Breast Feeding Child
ಸುಷ್ಮಾ ಚಕ್ರೆ
|

Updated on: Nov 10, 2025 | 5:28 PM

Share

ಪುರಿ, ನವೆಂಬರ್ 10: ಒಡಿಶಾದ (Odisha) ಮಲ್ಕನ್‌ಗಿರಿ ಜಿಲ್ಲೆಯಲ್ಲಿ ಸರ್ಕಾರಿ ನೇಮಕಾತಿ ಪರೀಕ್ಷೆ ನಡೆಯುತ್ತಿತ್ತು. ಇಲ್ಲಿಗೆ ಬಾಣಂತಿಯೊಬ್ಬರು ತಮ್ಮ ಪುಟ್ಟ ಮಗುವಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಒಳಗೆ ಆ ಮಹಿಳೆ ಪರೀಕ್ಷೆ ಬರೆಯುವಾಗ ಆ ಮಗು ಹಸಿವಿನಿಂದ ಜೋರಾಗಿ ಅಳುತ್ತಿತ್ತು. ಇದರಿಂದ ಒಳಗಿದ್ದ ಅಮ್ಮನಿಗೆ ಸಂಕಟವಾಗಿ ಪರೀಕ್ಷೆಯತ್ತ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಆ ತಾಯಿಗೆ ಸಹಾಯ ಮಾಡಲು ಮುಂದಾದ ಒಡಿಶಾ ಮಹಿಳಾ ಕಾನ್‌ಸ್ಟೆಬಲ್ ತಾನೇ ಆ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು, ಎದೆಹಾಲು (Breast Feeding) ಕುಡಿಸಿ, ನಿದ್ರೆ ಮಾಡಿಸುವ ಮೂಲಕ ತಾಯ್ತನ ಮತ್ತು ಮಾನವೀಯತೆ ಮೆರೆದಿದ್ದಾರೆ.

ಹಾಲು ಕುಡಿದ ಆ ಮಗು ಅಳುವುದು ನಿಲ್ಲಿಸಿ ಆ ಪೊಲೀಸ್ ಮಡಿಲಲ್ಲೇ ನಿದ್ರೆ ಮಾಡಿದೆ. ನೇಮಕಾತಿ ಪರೀಕ್ಷೆಯ ವೇಳೆ ಭದ್ರತೆಗೆ ಬಂದಿದ್ದ ಪೊಲೀಸ್​ ಕಾನ್​ಸ್ಟೆಬಲ್ ಆ ಮಗುವಿಗೆ ಹಾಲುಣಿಸಿ, ತಾಯ್ತನ ತೋರಿದ ಘಟನೆಯ ಬಗ್ಗೆ ಒಡಿಶಾ ಪೊಲೀಸ್ ಇಲಾಖೆ ಎಕ್ಸ್​​ನಲ್ಲಿ ಮಾಹಿತಿ ನೀಡಿದೆ. ಮಹಿಳಾ ಕಾನ್‌ಸ್ಟೆಬಲ್ ರಜನಿ ಮಾಝಿ ಗಂಟೆಗಟ್ಟಲೆ ಅಳುತ್ತಿದ್ದ ಮಗುವಿಗೆ ಹಾಲುಣಿಸಿ ಸಾಂತ್ವನ ಹೇಳಿದ್ದಾರೆ. ಇದರಿಂದ ತಾಯಿ ನೆಮ್ಮದಿಯಿಂದ ಪರೀಕ್ಷೆ ಬರೆದು ಹೊರಬಂದಿದ್ದಾರೆ.

ಈ ಘಟನೆ ಭಾನುವಾರ ಬಿಬಿಗುಡಾ ಪರೀಕ್ಷಾ ಕೇಂದ್ರದಲ್ಲಿ ಆರ್‌ಐ ಮತ್ತು ಅಮೀನ್ ನೇಮಕಾತಿ ಪರೀಕ್ಷೆಗಳ ಸಮಯದಲ್ಲಿ ನಡೆಯಿತು. ಈ ಪರೀಕ್ಷೆಗೆ ಹಾಜರಾಗುತ್ತಿದ್ದ ಭೈರವಿ ಮಂಡಲ್ ಎಂಬ ಮಹಿಳೆ ತನ್ನ ಒಂದೂವರೆ ತಿಂಗಳ ಮಗು ಪರೀಕ್ಷಾ ಕೇಂದ್ರದ ಹೊರಗೆ ತನ್ನ ಮಗು ಜೋರಾಗಿ ಅಳುತ್ತಿದ್ದುದರಿಂದ ಪರೀಕ್ಷೆ ಬರೆಯಲಾಗದೆ ಚಡಪಡಿಸುತ್ತಿದ್ದರು. ಆ ಶಿಶುವನ್ನು ಸಮಾಧಾನಪಡಿಸಲು ಆಕೆಯ ಪತಿ ಪ್ರಯತ್ನಿಸಿದರೂ ಅದು ಸುಮ್ಮನಾಗಲಿಲ್ಲ. ಇದರಿಂದ ಆಕೆ ಪರೀಕ್ಷೆಯನ್ನು ಮಧ್ಯದಲ್ಲಿಯೇ ಬಿಟ್ಟು ಹೊರಗೆ ಬರಲು ಯೋಚಿಸಿದ್ದರು.

ಇದನ್ನೂ ಓದಿ: Video: ತಡರಾತ್ರಿ ಮನೆಗೆ ಬಂದ ಮಗನನ್ನು ಆರತಿ ಎತ್ತಿ ಮನೆಯೊಳಗೆ ಬರಮಾಡಿಕೊಂಡ ತಂದೆ

ಆ ಮಗು ಅಳುತ್ತಿರುವುದನ್ನು ನೋಡಲಾಗದೆ ಅಲ್ಲೇ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಕಾನ್​ಸ್ಟೆಬಲ್ ಮಗುವನ್ನು ಎತ್ತಿಕೊಂಡು, ಹಾಲುಣಿಸಿ ಸಮಾಧಾನ ಮಾಡಿದ್ದಾರೆ. 7 ವರ್ಷಗಳಿಂದ ಮಲ್ಕನ್‌ಗಿರಿ ಮೀಸಲು ಪೊಲೀಸರಲ್ಲಿ ಸೇವೆ ಸಲ್ಲಿಸಿರುವ ಕಾನ್‌ಸ್ಟೆಬಲ್ ಮಾಝಿ ಆ ಒಂದೂವರೆ ತಿಂಗಳ ಮಗುವಿನ ಹಸಿವು ನೀಗಿಸಿದ್ದಾರೆ. ಮಾಝಿ ಅವರಿಗೂ ಪುಟ್ಟ ಮಗುವಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳಾ ಕಾನ್​ಸ್ಟೆಬಲ್ ರಜನಿ ಮಾಝಿ, “ಆ ಮಹಿಳೆ ಪರೀಕ್ಷೆಗೆ ಹಾಜರಾಗಬೇಕೇ ಬೇಡವೇ ಎಂಬ ಸಂದಿಗ್ಧ ಸ್ಥಿತಿಯಲ್ಲಿದ್ದರು. ಏಕೆಂದರೆ, ಅವರ ಮಗು ಬಹಳ ಸಮಯದಿಂದ ಅಳುತ್ತಿತ್ತು. ಆದರೆ, ನಾನು ಅವರಿಗೆ ನಾನೇ ಮಗುವನ್ನು ನೋಡಿಕೊಳ್ಳುತ್ತೇನೆ, ನೀವು ಪರೀಕ್ಷೆ ಬರೆಯಿರಿ ಎಂದು ಭರವಸೆ ನೀಡಿದೆ” ಎಂದಿದ್ದಾರೆ.

ಇದನ್ನೂ ಓದಿ: ಮಗನಿಗೆ ಅದೃಷ್ಟ ತಂದ ತಾಯಿ ಜನ್ಮ ದಿನಾಂಕ: ಲಾಟರಿಯಲ್ಲಿ 240 ಕೋಟಿ ರೂ ಗೆದ್ದ ಯುವಕ

“ನನಗೂ 9 ತಿಂಗಳ ಮಗು ಇರುವುದರಿಂದ ಆ ತಾಯಿಯ ಸಂಕಟ, ನೋವು ನನಗೆ ಅರ್ಥವಾಗುತ್ತಿತ್ತು. ನಾನು ಅವರ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಂಡೆ. ಹೀಗಾಗಿ, ಆ ಮಗುವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದೆ. ಆಕೆ ಪರೀಕ್ಷೆ ಬರೆದುಬರುವವರೆಗೂ ಸುಮಾರು 2 ಗಂಟೆ ನಾನೇ ಆ ಮಗುವಿಗೆ ಹಾಲು ಕುಡಿಸಿ, ನೋಡಿಕೊಂಡೆ” ಎಂದು ಮಾಝಿ ಹೇಳಿದ್ದಾರೆ.

ತನ್ನ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ ಆ ಮಹಿಳೆ ಕಣ್ಣೀರು ಸುರಿಸುತ್ತಾ ಪೊಲೀಸ್ ಕಾನ್‌ಸ್ಟೆಬಲ್ ಅವರ ಸಹಾಯಕ್ಕೆ ಧನ್ಯವಾದ ಹೇಳಿದ್ದಾರೆ. “ನನ್ನ ಮಗು ಅಳುತ್ತಿದ್ದಾಗ ನಾನು ಪರೀಕ್ಷೆಗೆ ಹಾಜರಾಗಬಾರದೆಂದು ನಿರ್ಧರಿಸಿದೆ. ಆದರೆ ಕಾನ್‌ಸ್ಟೆಬಲ್ ಅಕ್ಕ ಮುಂದೆ ಬಂದು ಪರೀಕ್ಷಾ ಸಮಯದಲ್ಲಿ ಶಿಶುವಿನ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುವುದಾಗಿ ನನಗೆ ಭರವಸೆ ನೀಡಿದರು. ಅವರು ನನ್ನ ಮಗುವನ್ನು ತಮ್ಮ ಮಡಿಲಲ್ಲಿಟ್ಟುಕೊಂಡು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರು. ನನ್ನ ಮಗುವಿನ ಪರಿಸ್ಥಿತಿಯ ಬಗ್ಗೆ ನನಗೆ ಇನ್ನೂ ಚಿಂತೆಯಾಗಿತ್ತು. ಆದರೆ ಕಾನ್‌ಸ್ಟೆಬಲ್ ಅಕ್ಕ ಆ ಮಗುವನ್ನು ಚೆನ್ನಾಗಿ ನೋಡಿಕೊಂಡರು. ನಾನು ಅವರಿಗೆ ಮತ್ತು ಇತರ ಸಿಬ್ಬಂದಿಗೆ ಧನ್ಯವಾದ ಹೇಳಲೇಬೇಕು. ಅವರಿಗೆ ಎಂದೆಂದಿಗೂ ಕೃತಜ್ಞರಾಗಿರುತ್ತೇನೆ” ಎಂದು ಮಂಡಲ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ