ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳು ಹಾಗೂ ಬ್ರೈನ್ ಟೀಸರ್ (brain teaser) ಗಳು ಮೆದುಳಿಗೆ ಕೆಲಸ ಕೊಡುವುದು ಮಾತ್ರವಲ್ಲ, ನಮ್ಮ ಬುದ್ಧಿವಂತಿಕೆ ಹಾಗೂ ಯೋಚನಾಶಕ್ತಿಗೆ ಸವಾಲು ಹಾಕುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಕೆಲವೊಮ್ಮೆ ಈ ಚಿತ್ರಗಳು ನಮ್ಮ ಕಣ್ಣನ್ನು ಮೋಸಗೊಳಿಸಬಹುದು. ಇದೀಗ ಇಲ್ಲಿರುವ ಬ್ರೈನ್ ಟೀಸರ್‌ನಲ್ಲಿ ಬಿಳಿ ಬಣ್ಣದ ಟೀ ಶರ್ಟ್ ಇದೆ. ನೀವು ಈ ಟೀ ಶರ್ಟ್ (tea shirt) ನಲ್ಲಿ ಎಷ್ಟು ತೂತುಗಳಿವೆ ಎನ್ನುವುದನ್ನು ಒಂದು ನಿರ್ದಿಷ್ಟ ಸಮಯದೊಳಗೆ ಗುರುತಿಸಲೇಬೇಕು. ಒಂದು ವೇಳೆ ನಿಮ್ಮ ಕೈಯಿಂದ ಸಾಧ್ಯವಾಗದೇ ಹೋದರೆ ನೀವು ಸೋತಿದದ್ದೀರಿ ಎಂದರ್ಥ. ಇದೊಂದು ನಿಮ್ಮ ಬುದ್ಧಿವಂತಿಕೆಗೆ ಚಾಲೆಂಜ್ ಇದಾಗಿದ್ದು, ಈ ಚಿತ್ರದಲ್ಲಿರುವ ರಂಧ್ರಗಳನ್ನು ಹುಡುಕಲು ನೀವು ಸಿದ್ಧವಿದ್ದೀರಾ. ಈ ಚಿತ್ರದಲ್ಲಿ ಏನಿದೆ? ಬಿಳಿ ಬಣ್ಣದ ಟೀ ಶರ್ಟ್‌ನ್ನು ಮೊದಲಿಗೆ ನೋಡಿದಾಗ ಟೀ ಶರ್ಟ್ ಮೇಲೆ ಎರಡು ತೂತುಗಳಿರುವಂತೆ ಕಾಣುತ್ತದೆ. ಇದನ್ನೇ ನಂಬಿಕೊಂಡು ಎರಡು ತೂತುಗಳು ಎಂದು ಉತ್ತರ ನೀಡಿದರೆ ನಿಮ್ಮ ಉತ್ತರ ತಪ್ಪು, ಈ ಚಿತ್ರ ನಿಮ್ಮ ಕಣ್ಣಿಗೆ ಮೋಸ ಮಾಡಿತು ಎಂದರ್ಥ. ನೀವು ಅವಸರ ಪಡದೇ ಸೂಕ್ಷ್ಮವಾಗಿ ಈ ಚಿತ್ರವನ್ನು ಗಮನಿಸಿದರೆ ನೀವು ಸರಿಯಾದ ಉತ್ತರ ನೀಡಲು ಸಾಧ್ಯವಾಗುತ್ತದೆ. ಇದನ್ನೂ ಓದಿ : Video : ಒಂದೇ ಒಂದು ರಜೆ ತೆಗೆದುಕೊಳ್ಳದ್ದಕ್ಕೆ ನಿಷ್ಠಾವಂತ ಅಧಿಕಾರಿಗೆ ಈ ಶಿಕ್ಷೆನಾ? ಇದನ್ನೂ ಓದಿ ...