AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video : ಬೆಂಗಳೂರಿನ ಆರ್ಥಿಕತೆ ನಡೆಯುವುದೇ ನಮ್ಮಿಂದ : ಬೆಂಗಳೂರು ರಿಕ್ಷಾ ಚಾಲಕನ ಮೇಲೆ ದರ್ಪ ತೋರಿದ ಹಿಂದಿ ಮಹಿಳೆ

ನಮ್ಮ ರಾಜ್ಯಕ್ಕೆ ಬಂದು ನೆಲೆಸಿರುವ ಉತ್ತರ ಭಾರತೀಯರು ಕನ್ನಡ ಮಾತಾಡಲ್ಲ, ಸೇರಿದಂತೆ ಇನ್ನಿತ್ತರ ವಿಚಾರದಲ್ಲಿ ಕನ್ನಡಿಗರ ಜೊತೆಯಲ್ಲಿ ಜಗಳಕ್ಕೆ ಇಳಿಯುವುದು ಹೊಸದೇನಲ್ಲ. ಈಗಾಗಲೇ ಇಂತಹ ಸಾಕಷ್ಟು ಘಟನೆಗಳು ನಡೆದಿದ್ದು, ಇದೀಗ ಹಿಂದಿ ಮಾತನಾಡುವ ಮಹಿಳೆಯೊಬ್ಬಳು ಆಟೋ ಬಾಡಿಗೆ ವಿಚಾರಕ್ಕೆ ಬೆಂಗಳೂರಿನ ಆಟೋ ಚಾಲಕನ ಜೊತೆಗೆ ಜಗಳಕ್ಕೆ ಇಳಿದಿದ್ದಾಳೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ಮಹಿಳೆಯ ಅತಿರೇಕದ ವರ್ತನೆಗೆ ಬಳಕೆದಾರರು ಗರಂ ಆಗಿದ್ದು ಖಾರವಾಗಿಯೇ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಸಾಯಿನಂದಾ
|

Updated on: Jun 09, 2025 | 11:03 AM

Share

ಬೆಂಗಳೂರು, ಜೂನ್ 09: ವಿವಿಧ ರಾಜ್ಯದಿಂದ ಬಂದು ಕರ್ನಾಟಕ (Karnataka) ದಲ್ಲಿ ನೆಲೆಸುವ ಉತ್ತರ ಭಾರತೀಯರು ಕನ್ನಡಿಗರ ಮೇಲೆ ದರ್ಪ ತೋರಿಸುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಕಳೆದ ವಾರವಷ್ಟೇ ಬಿಹಾರ ಮೂಲದ ಮಹಿಳೆಯೊಬ್ಬರು ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಬಾರಿಸಿದ ಘಟನೆಯೂ ಮಾಸುವ ಮುನ್ನವೇ ಇದೀಗ ಮತ್ತೊಬ್ಬ ಹಿಂದಿ ಮಹಿಳೆಯೂ ಆಟೋ ಚಾಲಕನ ಜೊತೆಗೆ ಕಿರಿಕಿರಿ ಮಾಡಿಕೊಂಡಿದ್ದಾಳೆ. ಹೌದು, ಬೆಂಗಳೂರಿನ ಆಟೋ ಚಾಲಕ (Bengaluru auto driver) ನ ಜೊತೆಗೆ ಆಟೋ ಚಾರ್ಜ್ ವಿಚಾರವಾಗಿ ಶುರುವಾದ ಜಗಳವು, ಕನ್ನಡದಲ್ಲಿ ಮಾತನಾಡು ಎನ್ನುವ ಹಂತಕ್ಕೆ ಹೋಗಿದೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ (social media) ದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಇದನ್ನೂ ಓದಿ
Image
ಹಣ್ಣುಗಳ ರಾಜ ಮಾವಿನ ಹಣ್ಣಾದ್ರೆ, ಹಣ್ಣುಗಳ ರಾಣಿ ಯಾವ ಹಣ್ಣು ಗೊತ್ತಾ?
Image
ಈ ಟೀ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಎಂದು ಹೇಳುವಿರಾ?
Image
ಒಂದೇ ಒಂದು ರಜೆ ತೆಗೆದುಕೊಳ್ಳದ್ದಕ್ಕೆ ನಿಷ್ಠಾವಂತ ಅಧಿಕಾರಿಗೆ ಈ ಶಿಕ್ಷೆನಾ?
Image
ತಾನು ಸಿಗರೇಟ್ ಸೇದುತ್ತಾ, ಪತಿಗೂ ಸೇದಲು ಕೊಟ್ಟ ಪತ್ನಿ

@VigilntHindutva ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಹಿಂದಿ ಮಾತನಾಡುವ ಮಹಿಳೆಯೊಬ್ಬರು ಆಟೋ ಚಾಲಕನ ಜೊತೆಗೆ ಆಟೋ ಬಾಡಿಗೆ ವಿಚಾರವಾಗಿ ಜಗಳ ಆಡುತ್ತಿರುವುದನ್ನು ಕಾಣಬಹುದು. ಆಟೋ ಹತ್ತುವ ಸಮಯದಲ್ಲಿ 296 ರೂ ತೋರಿಸುತ್ತಿತ್ತು, ಈಗ 390 ರೂ ಆಟೋ ಬಾಡಿಗೆ ಕೇಳ್ತಾ ಇದ್ದೀರಾ ಎಂದು ಪ್ರಶ್ನೆ ಮಾಡಿದ್ದಾಳೆ. ಈ ವೇಳೆಯಲ್ಲಿ ಆಟೋ ಅಪ್ಲಿಕೇಶನ್ ನಲ್ಲಿ ಎಷ್ಟು ತೋರಿಸುತ್ತಿದೆ ನೋಡಿ ಎಂದು ಆಟೋ ಚಾಲಕನು ತೋರಿಸಿದ್ದು, ಆದರೆ ಮಾತಿಗೆ ಮಾತು ಬೆಳೆದು ಈ ಜಗಳವು ಅತಿರೇಕಕ್ಕೆ ತಲುಪಿದೆ.

ಆಟೋ ಚಾಲಕನು ಏನೇ ಹೇಳಿದ್ರೂ ಕೂಡ ಕ್ಯಾರೇ ಎನ್ನದೇ ಹಿಂದಿ ಮಹಿಳೆಯೂ ಮಾತನಾಡಿದ್ದಾಳೆ. ಈ ವೇಳೆಯಲ್ಲಿ ಕೋಪಗೊಂಡ ಆಟೋ ಚಾಲಕನು ಕನ್ನಡದಲ್ಲಿ ಮಾತನಾಡು ಎಂದಿದ್ದಾನೆ. ಹೀಗೆನ್ನುತ್ತಿದ್ದಂತೆ ಸಿಟ್ಟಿನಿಂದ ಮಹಿಳೆಯೂ ನಾವು ಬೆಂಗಳೂರಿನ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದೇವೆ, ನಿನಗೇನಾದರೂ ಗೊತ್ತಿದೆಯಾ ಎಂದು ಪ್ರಶ್ನಿಸಿರುವುದನ್ನು ಕಾಣಬಹುದು.

ಇದನ್ನೂ ಓದಿ : Queen of Fruits : ಹಣ್ಣುಗಳ ರಾಜ ಮಾವಿನ ಹಣ್ಣಾದ್ರೆ, ಹಣ್ಣುಗಳ ರಾಣಿ ಯಾವ ಹಣ್ಣು ಗೊತ್ತಾ?

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಜೂನ್ 7 ರಂದು ಶೇರ್ ಮಾಡಲಾದ ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬಳಕೆದಾರರೊಬ್ಬರು ಬೆಂಗಳೂರು ತನ್ನ ಐಟಿ ಉದ್ಯಮವನ್ನು ಸಂಪೂರ್ಣವಾಗಿ ಕಳೆದುಕೊಂಡಾಗ ಇಂತಹ ಘಟನೆಗಳು ನಡೆಯುವುದಿಲ್ಲ ಎಂದಿದ್ದಾರೆ. ಮತ್ತೊಬ್ಬರು, ಕನ್ನಡ ಕಲಿಯುವುದು ಅಷ್ಟೇನು ಕಷ್ಟವಲ್ಲ, ಇಂಗ್ಲೀಷ್ ಭಾಷೆ ಮಾತನಾಡುವುದಕ್ಕಿಂತ ಇದು ಸುಲಭ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಆಟೋ ಡ್ರೈವರ್‌ನೊಂದಿಗೆ ಯಾಕೆ ಈ ರೀತಿ ನಡೆದುಕೊಳ್ಳುತ್ತೀರಾ,  ಬೇರೆ ಆಟೋ ಬುಕ್ ಮಾಡುವ ಆಯ್ಕೆ ನಿಮಗಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ