AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಎಂಥಾ ಕಾಲ ಬಂತು ನೋಡಿ, ಸಾಲ ಪಡೆಯಲು ಸತ್ತ ಹೆಣವನ್ನೇ ಬ್ಯಾಂಕಿಗೆ ತಂದ ಮಹಿಳೆ

ಹಣವನ್ನು ಕಂಡರೆ ಹೆಣ ಕೂಡಾ ಬಾಯಿ ಬಿಡುತ್ತೆ ಎಂಬ ಮಾತಿದೆ ಮಾತಿದೆ.  ಆದರೆ ಇಲ್ಲೊಬ್ಬಳು ಮಹಿಳೆ  ಮಾತ್ರ  ಹೆಣದ ಹೆಸರಲ್ಲಿ ಹಣ ಪೀಕಲು ಹೋಗಿದ್ದಾಳೆ. ಹೌದು ಮಹಿಳೆಯೊಬ್ಬಳು ತಾನು ಬ್ಯಾಂಕಿನಿಂದ ಸಾಲ ಪಡೆಯಲು ತನ್ನ ಚಿಕ್ಕಪ್ಪನ ಹೆಣವನ್ನೇ ಬ್ಯಾಂಕಿಗೆ ಕೊಂಡೊಯ್ದಿದ್ದಾಳೆ. ಈ ಕುರಿತ ಸುದ್ದಿಯೊಂದು ಇದೀಗ ವೈರಲ್ ಆಗುತ್ತಿದೆ. 

Viral Video: ಎಂಥಾ ಕಾಲ ಬಂತು ನೋಡಿ, ಸಾಲ ಪಡೆಯಲು ಸತ್ತ ಹೆಣವನ್ನೇ ಬ್ಯಾಂಕಿಗೆ ತಂದ ಮಹಿಳೆ
ವೈರಲ್​​ ವಿಡಿಯೋ ಇಲ್ಲಿದೆ
ಮಾಲಾಶ್ರೀ ಅಂಚನ್​
| Edited By: |

Updated on: Apr 19, 2024 | 5:04 PM

Share

ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಎಂಬ ಹಳೆಯ ಕಾಲದ ಮಾತೊಂದಿದೆ. ಹೌದು ಈ ಹಣದ ಮಹಿಮೆಯೇ ಅಂತಹದ್ದು,  ಇದು ಶತ್ರುಗಳನ್ನೂ ಮಿತ್ರರನ್ನಾಗಿಸುತ್ತದೆ, ಮಿತ್ರರನ್ನೂ  ಶತ್ರುಗಳನ್ನಾಗಿಸುತ್ತದೆ.  ಈ ಕುರುಡು ಕಾಂಚಾಣದ ಮಹಿಮೆಯಿಂದ  ಇದ್ದವರನ್ನು ಇಲ್ಲವಾಗಿಸುವ, ಸತ್ತವರನ್ನು ಮರು ಸೃಷ್ಟಿಸುವ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಇಂತಹ ಚಿತ್ರ ವಿಚಿತ್ರ ಸುದ್ದಿಗಳ ಬಗ್ಗೆ ನೀವು ಕೂಡಾ ಕೇಳಿರುತ್ತೀರಿ ಅಲ್ವಾ. ಸದ್ಯ ಅಂತಹದ್ದೇ ಸುದ್ದಿಯೊಂದು ಇದೀಗ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬಳು ಸಾಲ ಪಡೆಯಲು ಸತ್ತ ಹೆಣವನ್ನೇ ಬ್ಯಾಂಕಿಗೆ ಕೊಂಡೊಯ್ದಿದ್ದಾಳೆ.

ಈ ವಿಚಿತ್ರ ಘಟನೆ ಬ್ರೆಜಿಲ್ ದೇಶದ ರಿಯೊ ಡಿ ಜನೈರೊದಲ್ಲಿ ನಡೆದಿದ್ದು, ಇಲ್ಲಿನ ಮಹಿಳೆಯೊಬ್ಬಳು ಮೃತ ಚಿಕ್ಕಪ್ಪನ ಹೆಸರಿನಲ್ಲಿ ಬ್ಯಾಂಕ್ ಸಾಲ ಪಡೆಯಲು ಮುಂದಾಗಿದ್ದಾಳೆ. ಇದಕ್ಕಾಗಿ ಆಕೆ  ಯಾರಿಗೂ ಅನುಮಾನ ಬಾರದಂತೆ ತನ್ನ ಚಿಕ್ಕಪ್ಪನ ಮೃತದೇಹವನ್ನು ವೀಲ್ ಚೇರ್ ಮೇಲೆ ಕೂರಿಸಿ ಬ್ಯಾಂಕಿಗೆ ಕೊಂಡೊಯ್ದಿದ್ದಾಳೆ. ಹಾಗೂ ಬ್ಯಾಂಕ್ ಸಿಬ್ಬಂದಿಗಳ ಬಳಿ  ನನ್ನ ಚಿಕ್ಕಪ್ಪನಿಗೆ ತೀವ್ರ ಜ್ವರ ಅದಕ್ಕಾಗಿ ಅವರಿಗೆ ಮಾತನಾಡಲು ಕಷ್ಟವಾಗುತ್ತಿದೆ ಎಂದು ಹೇಳಿದ್ದಾಳೆ. ನಂತರ ಕಾಗದ ಪತ್ರಗಳ ಮೇಲೆ ಸಹಿ ಹಾಕಿಸುವ ಸಲುವಾಗಿ ಆಕೆ ತನ್ನ ಮೃತ ಚಿಕ್ಕಪ್ಪನ ಕೈಯಲ್ಲಿ ಪೆನ್ನನ್ನು ಇರಿಸುತ್ತಾಳೆ.  ಸಾಲ ಪತ್ರಕ್ಕೆ ಸಹಿ ಹಾಕಬೇಕಾದ ವ್ಯಕ್ತಿಯ ದೇಹದಲ್ಲಿ ಯಾವುದೇ ಸ್ಪಂದನೆ ವ್ಯಕ್ತವಾಗುವುದಿಲ್ಲ. ಈ ಸಂದರ್ಭದಲ್ಲಿ ಮಹಿಳೆಯ ವರ್ತನೆಯು ಬ್ಯಾಂಕ್ ಸಿಬ್ಬಂದಿಗಳಲ್ಲಿ ಅನುಮಾನ ಮೂಡಿಸುತ್ತದೆ. ಕೂಡಲೆ ಬ್ಯಾಂಕ್ ಅಧಿಕಾರಿಗಳು ಪೋಲಿಸರಿಗೆ ಈ ಕುರಿತ ಮಾಹಿತಿನ್ನು ನೀಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ:

ಬ್ಯಾಂಕ್ ಅಧಿಕಾರಿಗಳು ಕರೆಗೆ ಓಗೊಟ್ಟು ಆ ತಕ್ಷಣ ಧಾವಿಸಿದ ವೈದ್ಯರೊಂದಿಗೆ ಬ್ಯಾಂಕಿಗೆ ಧಾವಿಸುತ್ತಾರೆ. ವೈದ್ಯರು ಆ ವ್ಯಕ್ತಿಯನ್ನು ಪರಿಶೀಲನೆ ನಡೆಸಿದಾಗ ವ್ಯಕ್ತಿ ಮೃತಪಟ್ಟು ಕೆಲ ಹೊತ್ತುಗಳೇ ಕಳೆದಿವೆ ಎಂಬ ವಿಚಾರ ಗೊತ್ತಾಗುತ್ತದೆ. ನಂತರ ವಂಚನೆಯ ಆರೋಪದ ಮೇಲೆ ಆ ಮಹಿಳೆಯನ್ನು ಪೋಲಿಸರು ಸ್ಥಳದಲ್ಲಿಯೇ ಬಂಧಿಸಿದ್ದಾರೆ  ಮತ್ತು  ಆಕೆಯ ಚಿಕ್ಕಪ್ಪನ ಮೃತ ದೇಹವನ್ನು ಶವಾಗಾರಕ್ಕೆ ಕೊಂಡೊಯ್ಯಲಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಯಮನಂತೆ ಹಾರಿ ಬಂದು ಯುವಕನ ಪ್ರಾಣ ತೆಗೆದ ನೀಲಗಾಯ್

ಈ ಘಟನೆಯ ಕುರಿತ ವಿಡಿಯೋವನ್ನು @MoreCrazyClips ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೋ 18.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ