Breast Ironing: ಹೆಣ್ಣು ಮಕ್ಕಳ ಲೈಂಗಿಕ ಆಕರ್ಷಣೆಯನ್ನು ಹತ್ತಿಕ್ಕಲು ಈ ದೇಶದಲ್ಲಿ ಏನು ಮಾಡುತ್ತಾರೆ ಗೊತ್ತಾ?

|

Updated on: Aug 04, 2024 | 3:47 PM

ಋತುಮತಿಯಾಗುವ ಹೆಣ್ಣಿನ ಬೆಳವಣಿಗೆ ಹೊಂದುವ ಸ್ತನಗಳ ಮೇಲೆ ಗಟ್ಟಿಯಾದ ಅಥವಾ ಬಿಸಿಯಾದ ವಸ್ತುಗಳಿಂದ ಬಡಿಯುವುದು ಅವುಗಳನ್ನು ಬೆಳೆಯದಂತೆ ಚಪ್ಪಟೆಗೊಳಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಹೆಣ್ಣು ಪುರುಷರಿಗೆ ಆಕರ್ಷಣೆಗೆ ಒಳಗಾಗುವುದಿಲ್ಲ ಮತ್ತು ಹೆಣ್ಣಿನ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುವುದಿಲ್ಲ ಎಂಬುದು ಅಲ್ಲಿನ ಜನರ ನಂಬಿಕೆ.

Breast Ironing: ಹೆಣ್ಣು ಮಕ್ಕಳ ಲೈಂಗಿಕ ಆಕರ್ಷಣೆಯನ್ನು ಹತ್ತಿಕ್ಕಲು ಈ ದೇಶದಲ್ಲಿ ಏನು ಮಾಡುತ್ತಾರೆ ಗೊತ್ತಾ?
Breast ironing
Follow us on

ಹೆಣ್ಣು ಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆ ಅವರ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯಲು ಆಫ್ರಿಕನ್ ದೇಶಗಳಲ್ಲಿ ವಿಚಿತ್ರ ಸಂಪ್ರದಾಯವೊಂದನ್ನು ಆಚರಿಸುತ್ತಾರೆ. ನೈಜೀರಿಯಾ, ಟೋಗೊ, ಗಿನಿಯಾ, ಕೋಟ್ ಡಿಐವೊಯಿರ್, ಕೀನ್ಯಾ ಮತ್ತು ಜಿಂಬಾಬ್ವೆ ಗಳಲ್ಲಿ ಹೆಣ್ಣು ಋತುಮತಿಯಾಗುತ್ತಿದ್ದಂತೆ ಅವರ ಬೆಳವಣೆಯಾಗುವ ಸ್ತನಗಳನ್ನು ಚಪ್ಪಟೆಗೊಳಿಸಲಾಗುತ್ತದೆ. ಇದನ್ನು ಬ್ರೆಸ್ಟ್​​​​ ಐರನಿಂಗ್​​(Breast ironing) ಎಂದು ಕರೆಯಾಗುತ್ತದೆ.

ಈ ರೀತಿ ಮಾಡುವುದರಿಂದ ಹೆಣ್ಣು ಪುರುಷರಿಗೆ ಆಕರ್ಷಣೆಗೆ ಒಳಗಾಗುವುದಿಲ್ಲ ಮತ್ತು ಹೆಣ್ಣಿನ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುವುದಿಲ್ಲ ಎಂಬುದು ಅಲ್ಲಿನ ಜನರ ನಂಬಿಕೆ. ಹೆಣ್ಣು ಮಕ್ಕಳ ಬೆಳವಣಿಗೆ ಹೊಂದುವ ಸ್ತನಗಳ ಮೇಲೆ ಗಟ್ಟಿಯಾದ ಅಥವಾ ಬಿಸಿಯಾದ ವಸ್ತುಗಳಿಂದ ಬಡಿಯುವುದು ಮತ್ತು ಮಸಾಜ್ ಮಾಡಿ ಅವುಗಳನ್ನು ಬೆಳೆಯದಂತೆ ಚಪ್ಪಟೆಗೊಳಿಸುವುದಾಗಿದೆ. ಈ ಪ್ರಕಿಯೆ ಬಹಳ ನೋವಿನಿಂದ ಕೂಡಿದ್ದು, ಇದು ಋತುಮತಿಯಾಗುವ ಹೆಣ್ಣಿನ ಮೇಲೆ ಮಾನಸಿಕ ಹಾಗೂ ದೈಹಿಕವಾಗಿ ಪರಿಣಾಮ ಬೀರುತ್ತದೆ. ಇದಲ್ಲದೇ ಈ ಪ್ರಕ್ರಿಯೆ ಮುಂಬುರುವ ದಿನಗಳಲ್ಲಿ ಸ್ತನ್ಯಪಾನದಲ್ಲಿ ತೊಂದರೆಗಳನ್ನು ಒಳಗೊಂಡಿರುತ್ತದೆ ಮತ್ತು ಸೋಂಕುಗಳು, ಮತ್ತು ಸ್ತನ ಕ್ಯಾನ್ಸರ್ನ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಮದುವೆಗೂ ಮುಂಚೆ ತಾಯಿ ಆಗ್ತಾರೆ ಇಲ್ಲಿನ ಹೆಣ್ಣು ಮಕ್ಕಳು, ಈ ವಿಚಿತ್ರ ಸಂಪ್ರದಾಯವಿರುವುದು ಎಲ್ಲಿ?

ಇತ್ತೀಚಿನ ದಿನಗಳಲ್ಲಿ ಇಂತಹ ಹಿಂಸಾತ್ಮಕ ಕೃತ್ಯಗಳ ಬಗ್ಗೆ ಅಲ್ಲಿನ ಸರ್ಕಾರ ಎಚ್ಚೆತ್ತುಕೊಂಡಿದ್ದು, ಹಿಂಸಾಚಾರ ಮತ್ತು ನಿಷೇಧ (VAPP) ಕಾಯಿದೆಯಂತಹ ಕೆಲವು ಕಾನೂನು ಚೌಕಟ್ಟುಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವು ಸಂಘ ಸಂಸ್ಥೆಗಳು ಈ ಸಂಪ್ರದಾಯದ ವಿರುದ್ಧ ಜಾಗೃತಿಯನ್ನು ಮೂಡಿಸುವ ಪ್ರಯತ್ನ ನಡೆಸುತ್ತಿದ್ದರೂ ಕೂಡ ಆಫ್ರಿಕನ್ ದೇಶಗಳಲ್ಲಿ ಇನ್ನೂ ಕೂಡ ಈ ಭಯಾನಕ ಪದ್ಧತಿ ಜಾರಿಯಲ್ಲಿದೆ ಎಂಬುದು ವಿಪರ್ಯಾಸದ ಸಂಗಂತಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ