AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವಾಗ ಮದುವೆ ಎಂದು ಪದೇ ಪದೇ ಕೇಳುತ್ತಿದ್ದ ಪಕ್ಕದ ಮನೆಯ ವೃದ್ದನನ್ನೇ ಕೊಂದ ವ್ಯಕ್ತಿ

45 ವರ್ಷವಾದರೂ ಇನ್ನೂ ಯಾಕೆ ಒಂಟಿಯಾಗಿದ್ದೀರಿ? ಯಾವಾಗ ಮದುವೆ ಎಂದು ಪದೇ ಪದೇ ಕೇಳುತ್ತಿದ್ದ ವೃದ್ದನನ್ನು ವ್ಯಕ್ತಿಯೊರ್ವ ಮರದ ದಿಮ್ಮಿಯಿಂದ ಹೊಡೆದು ಕೊಂದಿದ್ದಾನೆ. ಇನ್ನೂ ಮದುವೆಯಾಗದೇ ಒಂಟಿ ಜೀವನ ನಡೆಸುತ್ತಿದ್ದ ಈತ ಮಾನಸಿಕವಾಗಿ ನೊಂದಿದ್ದ ಎಂದು ತನಿಖೆಯ ವೇಳೆ ತಿಳಿದುಬಂದಿದೆ.

ಯಾವಾಗ ಮದುವೆ ಎಂದು ಪದೇ ಪದೇ ಕೇಳುತ್ತಿದ್ದ ಪಕ್ಕದ ಮನೆಯ ವೃದ್ದನನ್ನೇ ಕೊಂದ ವ್ಯಕ್ತಿ
ಅಕ್ಷತಾ ವರ್ಕಾಡಿ
|

Updated on:Aug 04, 2024 | 6:17 PM

Share

ಇಂಡೋನೇಷ್ಯಾ: 45 ವರ್ಷವಾದರೂ ಇನ್ನೂ ಯಾಕೆ ಒಂಟಿಯಾಗಿದ್ದೀರಿ? ಯಾವಾಗ ಮದುವೆ ಎಂದು ಪದೇ ಪದೇ ಕೇಳುತ್ತಿದ್ದ ವೃದ್ದನನ್ನು ಕೊಂದಿರುವ ಘಟನೆ ಇಂಡೋನೇಷ್ಯಾದ ಉತ್ತರ ಸುಮಾತ್ರಾದಲ್ಲಿ ನಡೆದಿದೆ. ಕೋಪಗೊಂಡ ಅವಿವಾಹಿತ ವ್ಯಕ್ತಿ 60 ವರ್ಷದ ವೃದ್ಧನ ಮನೆಯೊಳಗೆ ನುಗ್ಗಿ ಮರದ ದಿಮ್ಮಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.

ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಜುಲೈ 29 ರಂದು ನಡೆದ ಘಟನೆ ನಡೆದಿದ್ದು, ಕೊಲೆಯಾದ ವೃದ್ಧ ಅಸ್ಗಿಮ್ ಇರಿಯಾಂಟೊ ಎಂದು ಗುರುತಿಸಲಾಗಿದೆ. ಮೃತನ ಪತ್ನಿ ಸಹಾಯಕ ಪೊಲೀಸ್ ಕಮಿಷನರ್ (ಎಕೆಪಿ) ಮಾರಿಯಾ ಮಾರ್ಪಾಂಗ್ ಅವರಿಗೆ ನೀಡಿದ ಹೇಳಿಕೆಯ ಪ್ರಕಾರ, ಅವಿವಾಹಿತ ವ್ಯಕ್ತಿ ಮನೆಯ ಬಾಗಿಲು ಮುರಿದು ಬಂದು ತನ್ನ ಪತಿ ಅಸ್ಗಿಮ್ ಮೇಲೆ ಮರದ ದಿಮ್ಮಿಯಿಂದ ಹೊಡೆದು ಕೊಂದಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ‘ಇದು ಮದರಸಾ ಅಲ್ಲ, ಕಾಲೇಜು’ ಗಡ್ಡ ಬಿಟ್ಟ ವಿದ್ಯಾರ್ಥಿಯನ್ನು ಹೊರದಬ್ಬಿದ ಪ್ರಾಂಶುಪಾಲ

45 ವರ್ಷ ವಯಸ್ಸಾದರೂ ಒಂಟಿ ಜೀವನ ನಡೆಸುತ್ತಿದ್ದ ಈತ ಮಾನಸಿಕವಾಗಿ ನೊಂದಿದ್ದ. ಇದಲ್ಲದೇ ಪಕ್ಕದ ಮನೆಯ ವೃದ್ಧ ಪದೇ ಪದೇ ಮದುವೆ ಬಗ್ಗೆ ಕೇಳಿದ್ದರಿಂದ ಮತ್ತಷ್ಟು ನೋವು ಅನುಭವಿಸಿದ್ದ. ಕೊನೆಗೆ ಕೋಪ ತಡೆಯಲಾರದೇ ವೃದ್ದನನ್ನು ಕೊಂದಿರುವುದಾಗಿ ವರದಿಯಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:42 pm, Sun, 4 August 24

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ