Video: ಬೇರೊಬ್ಬ ಯುವಕನ ಜತೆ ಸುತ್ತಾಟ, ಗೆಳತಿಯ ಮೋಸದಾಟ ಕಂಡು ನಡು ರಸ್ತೆಯಲ್ಲಿ ಗಳಗಳನೇ ಅತ್ತ ಪ್ರೇಮಿ

ಪ್ರೀತಿಸಿದವರು ವಂಚಿಸಿದಾಗ ಅದರಿಂದಾಗುವ ನೋವು ಅಷ್ಟಿಷ್ಟಲ್ಲ. ಈ ನೋವಿನಿಂದ ಹೊರಬರಲಾರದೆ ಆತ್ಮಹತ್ಯೆ ಮಾಡಿಕೊಂಡವರು ಹಲವರಿದ್ದಾರೆ. ಸಾಮಾನ್ಯವಾಗಿ ಈ ಪ್ರೀತಿಯಲ್ಲಿ ಮೋಸ ಹೋಗುವವರು ಹುಡುಗರೇ ಎಂಬ ಮಾತಿದೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ತನ್ನ ಗೆಳತಿ ಬೇರೊಬ್ಬ ಯುವಕನ ಜೊತೆ ಸುತ್ತಾಡುವುದನ್ನು ಕಂಡ ಪ್ರಿಯಕರ ನನಗ್ಯಾಕೆ ಮೋಸ ಮಾಡಿದೆ ಎಂದು ಗೆಳತಿಯ ಮೋಸದಾಟವನ್ನು ಸಹಿಸಲಾರದೆ ನಡು ರಸ್ತೆಯಲ್ಲಿಯೇ ಗಳಗಳನೇ ಅತ್ತಿದ್ದಾನೆ. ಈ ವಿಡಿಯೋ ಇದೀಗ ವೈರಲ್‌ ಆಗುತ್ತಿದ್ದು, ಯುವಕನ ರೋಧನೆಯನ್ನು ಕಂಡು ನೆಟ್ಟಿಗರು ಮರುಕ ವ್ಯಕ್ತಪಡಿಸಿದ್ದಾರೆ.

Video: ಬೇರೊಬ್ಬ ಯುವಕನ ಜತೆ ಸುತ್ತಾಟ, ಗೆಳತಿಯ ಮೋಸದಾಟ ಕಂಡು ನಡು ರಸ್ತೆಯಲ್ಲಿ ಗಳಗಳನೇ ಅತ್ತ ಪ್ರೇಮಿ
ವೈರಲ್ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 05, 2024 | 10:59 AM

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದವರು ಮೋಸ ಮಾಡಿದಾಗ, ಬೆನ್ನಿಗೆ ಚೂರಿ ಹಾಕಿ ಬಿಟ್ಟು ಹೋದಾಗ ಅದರಿಂದಾಗುವ ನೋವು ಅಷ್ಟಿಷ್ಟಲ್ಲ. ಪ್ರೀತಿಸಿದವರು ಕೈಕೊಟ್ಟಾಗ ಬಹುತೇಕರು ಇಂತಹ ನೋವುಗಳಿಂದ ಹೊರ ಬರಲು ಹೆಣಗಾಡುತ್ತಿರುತ್ತಾರೆ. ಇನ್ನೂ ಕೆಲವರು ನಾನು ಇಷ್ಟಪಟ್ಟ ಜೀವ ನನಗೆ ಮೋಸ ಮಾಡಿತೇ ಎಂದು ಬ್ರೇಕಪ್‌ ನೋವಿನಿಂದ ಹೊರ ಬರಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಪ್ರೀತಿ-ಪ್ರೇಮದ ವಿಚಾರದಲ್ಲಿ ಮೋಸ ಹೋಗುವವರು ಹುಡುಗರೇ ಎಂಬ ಮಾತಿದೆ. ಅಂತಹದ್ದೇ ಘಟನೆಯೊಂದು ಇದೀಗ ನಡೆದಿದ್ದು, ತನ್ನ ಗೆಳತಿ ಬೇರೊಬ್ಬ ಯುವಕನ ಜೊತೆ ಸುತ್ತಾಡುವುದನ್ನು ಕಂಡ ಪ್ರಿಯಕರ, ಗೆಳತಿಯ ಮೋಸದಾಟವನ್ನು ಕಣ್ಣಾರೆ ಕಂಡು ನನಗ್ಯಾಕೆ ಮೋಸ ಮಾಡಿದೆ ಎಂದು ನಡು ರಸ್ತೆಯಲ್ಲಿಯೇ ಗಳಗಳನೇ ಅತ್ತಿದ್ದಾನೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

flirting.lines ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಬೇರೊಬ್ಬ ಯುವಕನ ಸುತ್ತಾಡುವಾಗ ತನ್ನ ಗೆಳತಿಯನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದ ಪ್ರಿಯಕರ; ಏಕೆ ಯಾವಾಗಲೂ ಹುಡುಗರಿಗೆ ಪ್ರೀತಿಯಲ್ಲಿ ಮೋಸವಾಗುತ್ತೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ

ವೈರಲ್‌ ವಿಡಿಯೋದಲ್ಲಿ ಕಾರ್‌ ಒಂದರಲ್ಲಿ ತನ್ನ ಗೆಳತಿ ಬೇರೊಬ್ಬ ಯುವಕನ ಜೊತೆ ಸುತ್ತಾಡುವುದನ್ನು ಕಂಡ ಗೆಳೆಯ ಆ ಕಾರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ, ಸಪ್ನಾ ನನಗ್ಯಾಕೆ ಮೋಸ ಮಾಡಿದೆ ಎಂದು ಗೆಳತಿಯ ಮೋಸದಾಟವನ್ನು ಅರಗಿಸಿಕೊಳ್ಳಲಾರದೆ ಆತ ಗಳಗಳನೇ ಅಳುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಕಲಾವಿದ ಬಿಡಿಸಿದ ತನ್ನ ಚಿತ್ರ ಕಂಡು ಭಾವುಕರಾದ ಬಸ್‌ ಕಂಡಕ್ಟರ್;‌ ಹೃದಯಸ್ಪರ್ಶಿ ವಿಡಿಯೋ ವೈರಲ್

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 12.7 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾನು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಾಗ ಇದೇ ರೀತಿ ನನ್ನ ಗೆಳತಿಯೂ ನನ್ನನ್ನು ಬಿಟ್ಟು ಹೋದ್ಳು, ಆದ್ರೆ ನನ್ನ ತಾಯಿ ಯಾವತ್ತೂ ನನ್ನನ್ನು ಬಿಟ್ಟು ಹೋಗಲೇ ಇಲ್ಲʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೀಗೆ ಮೋಸ ಮಾಡುವುದಾದರೆ ನಿಮಗೆಲ್ಲಾ ಪ್ರೀತಿ ಏಕೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಿಟ್ಟು ಹೋದವಳಿಗಾಗಿ ಅಳಬೇಡ ಗೆಳೆಯʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:58 am, Mon, 5 August 24

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?