AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ವಿದ್ಯಾದೇಗುಲದಲ್ಲಿ ಇದೆಂತಾ ಅಸಹ್ಯ ಕೃತ್ಯ, ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಕಿಸ್ಸಿಂಗ್‌

ಕೆಲವೊಂದು ವಿದ್ಯಾರ್ಥಿಗಳು ತಾವು ಯಾವ ಕಾರಣಕ್ಕಾಗಿ ಕಾಲೇಜಿಗೆ ಬಂದಿದ್ದೇವೆ ಎಂಬುದನ್ನು ಮರೆತು ಅತಿರೇಕದ ವರ್ತನೆಯನ್ನು ತೋರುತ್ತಾರೆ. ಅಂತಹದ್ದೇ ಅಸಹ್ಯಕರ ಘಟನೆಯೊಂದು ಇದೀಗ ನಡೆದಿದ್ದು, ತಾವು ವಿದ್ಯಾದೇಗುಲದಲ್ಲಿದ್ದೇವೆ ಎಂಬುದನ್ನು ಕೂಡಾ ಮರೆತು ವಿದ್ಯಾರ್ಥಿಗಳಿಬ್ಬರು ಕಾಲೇಜು ಕ್ಯಾಂಪಸ್‌ನಲ್ಲಿಯೇ ಲವ್ವಿ ಡವ್ವಿಯಲ್ಲಿ ತೊಡಗಿದ್ದಾರೆ. ಇವರ ಸರಸ ಸಲ್ಲಾಪದ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Video: ವಿದ್ಯಾದೇಗುಲದಲ್ಲಿ ಇದೆಂತಾ ಅಸಹ್ಯ ಕೃತ್ಯ, ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಕಿಸ್ಸಿಂಗ್‌
ವಿದ್ಯಾರ್ಥಿಗಳ ವಿಡಿಯೋ ವೈರಲ್
ಮಾಲಾಶ್ರೀ ಅಂಚನ್​
| Edited By: |

Updated on: Aug 05, 2024 | 12:23 PM

Share

ಒಂದು ಉತ್ತಮ ಭವಿಷ್ಯವನ್ನು ಕಟ್ಟುಕೊಳ್ಳಲಿ ಎಂದು ಸುಂದರ ಕನಸನ್ನು ಹೊತ್ತು ಪೋಷಕರು ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕಳಿಸುತ್ತಾರೆ. ಆದ್ರೆ ಕೆಲವೊಂದು ವಿದ್ಯಾರ್ಥಿಗಳು ತಾವು ಯಾವ ಕಾರಣಕ್ಕಾಗಿ ಕಾಲೇಜಿಗೆ ಬಂದಿದ್ದೇವೆ ಎಂಬುದನ್ನು ಮರೆತು, ಪ್ರೀತಿ-ಪ್ರೇಮ ಇತ್ಯಾದಿ ಮಂಗನಾಟವನ್ನು ಆಡಿ ಪೋಷಕರು ತಲೆ ತಗ್ಗಿಸುವಂತಹ ಕೆಲಸವನ್ನು ಮಾಡುತ್ತಾರೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ತಾವು ವಿದ್ಯಾದೇಗುಲದಲ್ಲಿದ್ದೇವೆ ಎಂಬುದನ್ನು ಕೂಡಾ ಮರೆತು ವಿದ್ಯಾರ್ಥಿಗಳಿಬ್ಬರು ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿಯೇ ಕಿಸ್ಸಿಂಗ್‌, ರೊಮ್ಯಾನ್ಸ್‌ನಲ್ಲಿ ತೊಡಗಿದ್ದಾರೆ. ಈ ಕುರಿತ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ಘಟನೆ 2023 ರಲ್ಲಿ ನೋಯ್ಡಾದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ ನಡೆದಿದ್ದು, ವಿದ್ಯಾರ್ಥಿಗಳಿಬ್ಬರು ಮೈ ಮರೆತು ಯೂನಿವರ್ಸಿಟಿ ಕ್ಯಾಂಪಸ್‌ ಒಳಗಡೆಯೇ ರೊಮ್ಯಾನ್ಸ್‌ ಮಾಡಿದ್ದಾರೆ. ಈ ಕುರಿತ ವಿಡಿಯೋವೊಂದು ಮತ್ತೊಮ್ಮೆ ವೈರಲ್‌ ಆಗುತ್ತಿದೆ. ಜನಬ್‌ ಖಾನ್‌ (janabkhan08) ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ವಿಶ್ವವಿದ್ಯಾಲಯದ ಸ್ಥಿತಿ ನೋಡಿ… ಅಧ್ಯಯನದ ಬದಲು ಅಶ್ಲೀಲತೆಯಲ್ಲಿ ತೊಡಗಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ (ಎಕ್ಸ್​​ ಖಾತೆ)

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ವಿದ್ಯಾರ್ಥಿಗಳಿಬ್ಬರು ನೋಯ್ಡಾದ ಪ್ರತಿಷ್ಠಿತ ಯೂನಿವರ್ಸಿಟಿ ಕ್ಯಾಂಪಸ್‌ ಒಳಗಡೆ ಯಾರು ಇಲ್ಲದಿರುವ ವೇಳೆ ಲಿಪ್‌ ಕಿಸ್ಸಿಂಗ್‌ ಮಾಡುತ್ತಾ ಮೈ ಮರೆತು ಸರಸ ಸಲ್ಲಾಪದಲ್ಲಿ ತೊಡಗಿರುವ ಅಸಹ್ಯಕರ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಬೇರೊಬ್ಬ ಯುವಕನ ಜತೆ ಸುತ್ತಾಟ, ಗೆಳತಿಯ ಮೋಸದಾಟ ಕಂಡು ನಡು ರಸ್ತೆಯಲ್ಲಿ ಗಳಗಳನೇ ಅತ್ತ ಪ್ರೇಮಿ

ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 36 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ವಿಡಿಯೋವನ್ನು ವೈರಲ್‌ ಮಾಡುವ ಅವಶ್ಯಕತೆ ಇತ್ತೇʼ ಎಂದು ಪ್ರಶ್ನೆ ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ