ಮದುವೆಯಲ್ಲಿ ನಡೆಯುವುದೆಲ್ಲ ಬಹುತೇಕ ಅದ್ಧೂರಿಯಾಗಿಯೇ ಇರುತ್ತದೆ. ಮದುವೆಗೆ ಲಕ್ಷಗಟ್ಟಲೆ ಹಣ ಖರ್ಚು ಮಾಡುತ್ತಾರೆ. ಮದುವೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಒಂದು ಪ್ರಮುಖ, ಮಧುರ ಕ್ಷಣವಾಗಿರುವುದರಿಂದ, ವಧು ಮತ್ತು ವರರು ತಮ್ಮ ಮದುವೆಯ ದಿನವನ್ನು ವಿಶೇಷ ಮತ್ತು ಸ್ಮರಣೀಯವಾಗಿಸಲು ಯೋಜಿಸುತ್ತಾರೆ. ಅದಕ್ಕಾಗಿ ಆಗಾಗ್ಗೆ ಹೊಸ, ವಿಭಿನ್ನ ಮತ್ತು ವಿನೂತನ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಇಂತಹ ವಿವಾಹ ಸಮಾರಂಭಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ, ಮದುವೆ ಮಂಟಪದಲ್ಲಿ ಮದುವೆ ಜೋಡಿಯೇ ಹುಕ್ಕಾ ಸೇದುತ್ತಾ ಪರಸ್ಪರರ ಬಾಯಲ್ಲಿ ಹೊಗೆ ಊದುತ್ತಿರುವ ವಿಡಿಯೋವೊಂದು ಅಂತರ್ಜಾಲವನ್ನು ಬೆಚ್ಚಿಬೀಳಿಸಿದೆ. ಈ ವಿಡಿಯೋದಲ್ಲಿ ವಧು-ವರರು ವೇದಿಕೆಯ ಮೇಲೆ ಎಲ್ಲರೂ ನೋಡುತ್ತಿರುವಾಗಲೇ ಹುಕ್ಕಾ ಸೇದುತ್ತಾ ಎಂಜಾಯ್ ಮಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇದು ಆನ್‌ಲೈನ್‌ನಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.
ವೈರಲ್ ವೀಡಿಯೊದಲ್ಲಿ ವಧು ಮರೂನ್ ಮತ್ತು ಪೀಚ್ ಲೆಹೆಂಗಾವನ್ನು ಧರಿಸಿ ವರನ ಪಕ್ಕದಲ್ಲಿ ನಿಂತಿದ್ದಾರೆ. ದಂಪತಿ ನೋಡಲು ಅದ್ಭುತವಾಗಿ ಕಾಣುತ್ತಿದ್ದರು. ಇಬ್ಬರೂ ಮದುವೆಯ ವೇದಿಕೆಯ ಮೇಲೆ ನಿಂತಿದ್ದಾರೆ. ಏತನ್ಮಧ್ಯೆ, ವಧು ವೇದಿಕೆಯ ಮೇಲೆ ಸಿದ್ಧವಾಗಿರುವ ದೊಡ್ಡ ಹುಕ್ಕಾ ಪಾತ್ರೆಯಿಂದ ಹುಕ್ಕಾವನ್ನು ಎಳೆಯುತ್ತಾ ಆನಂದಿಸುತ್ತಾಳೆ. ಮತ್ತು… ಅದೇ ಮತ್ತಿನಲ್ಲಿ ಬಾಯ್ತುಂಬಾ ಹೊಗೆ ತುಂಬಿಕೊಂಡು ಅವಳು ವರನಿಗೆ ಚುಂಬಿಸುತ್ತಾಳೆ. ಹುಕ್ಕಾ ಹೊಗೆ ಅವನ ಬಾಯಿಗೂ ತುಂಬಿಕೊಳ್ಳುತ್ತದೆ! ಅವನೂ ತಾನೇನು ಕಮ್ಮಿ ಎಂದು ತನ್ನ ಬಾಯಿಯಲ್ಲಿರುವ ಹುಕ್ಕಾ ಹೊಗೆಯಲ್ಲೇ ಉಸಿರಾಡುತ್ತಾ, ಅವಳ ಬಾಯೊಳಕ್ಕೂ ಗಾಳಿ ಬಿಡುವ ಮೂಲಕ ಅವಳನ್ನು ಉತ್ತೇಜಿಸುತ್ತಾನೆ, ಪ್ರಚೋದಿಸುತ್ತಾನೆ, ಬೆಂಬಲಿಸುತ್ತಾನೆ.
ಆದರೆ ಸಂಬಂಧಿಕರು ಮತ್ತು ಪುರೋಹಿತರ ಮುಂದೆ ವಧು-ವರರು ಪರಸ್ಪರ ಚುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ ಬಳಕೆದಾರರನ್ನು ಕೆರಳಿಸಿದೆ. ಮದುವೆ ಸಮಾರಂಭದಲ್ಲಿ, ಅದೂ ವಧೂ ವರರು ಈ ರೀತಿ ಮಾಡುವುದಾ? ಎಂದು ನೆಟ್ಟಿಗರು ಅವರನ್ನು ನೆಟ್ಟಗೆ ವಿಚಾರಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವಿವಾದಕ್ಕೆ ಕಾರಣವಾಗಿದೆ.
ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಇಲ್ಲಿ ನವ ದಂಪತಿ ಏನು ಮಾಡಿದ್ದಾರೆ ಎಂದು ಟೀಕಿಸುತ್ತಿದ್ದಾರೆ, ಹುಕ್ಕಾ ಸೇದುವುದು ಒಳ್ಳೆಯದಲ್ಲ ಮತ್ತು ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಈ ರೀತಿ ಮಾಡುತ್ತಿದ್ದಾರಾ? ಎಂದಿರುವ ಕೆಲ ನೆಟಿಜನ್‌ಗಳು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರಕ್ಕಾಗಿ ಮಾಡಿದ್ದಾರೆ ಎಂದು ಷರಾ ಬರೆದಿದ್ದಾರೆ. ಇತರರು ಇದನ್ನು ಮುದ್ದುಮುದ್ದು ಎಂದು ಮುದ್ದಾಗಿ ಭಾವಿಸಿದ್ದಾರೆ.
ಹೆಚ್ಚಿನ ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:01 pm, Wed, 20 September 23