Viral Video: ಕೋಪಗೊಂಡ ವಧು ಬರ್ಫಿ ತಿನ್ನಿಸಲು ಬಂದ ವರನಿಗೆ ಮಾಡಿದ್ದೇನು ಗೊತ್ತಾ? ವಿಡಿಯೋ ಕಂಡು ಅಕ್ಕ ಚಿಲ್ ಎಂದ ನೆಟ್ಟಿಗರು

ವೈರಲ್​ ಆದ ವಿಡಿಯೋದಲ್ಲಿ ವೇದಿಕೆಯಲ್ಲಿ ವಧು- ವರರು ನಿಂತಿದ್ದಾರೆ. ಕೆಂಪು ಲೆಹೆಂಗಾದಲ್ಲಿ ವಧು ಮತ್ತು ಸೂಟ್‌ನಲ್ಲಿ ವರನನ್ನು ಇಲ್ಲಿ ಕಾಣಬಹುದು. ಪೂಜಾ ವಿಧಾನಕ್ಕೆ ಅನುಸಾರವಾಗಿ ವಧುವಿಗೆ ತಿನ್ನಿಸಲು ಪಂಡಿತರು ಸಿಹಿತಿಂಡಿಗಳನ್ನು (ಬರ್ಫಿ) ನೀಡುತ್ತಾರೆ. ವರನು ವಧುವಿಗೆ ಅದರಂತೆ ಬರ್ಫಿಯ ತುಂಡನ್ನು ತಿನ್ನಿಸಲು ಪ್ರಾರಂಭಿಸಿದಾಗ, ಅವಳು ಕೋಪದಿಂದ ಸಿಹಿಯನ್ನು ತೆಗೆದುಕೊಂಡು ದೂರಕ್ಕೆ ಎಸೆಯುತ್ತಾಳೆ.

Viral Video: ಕೋಪಗೊಂಡ ವಧು ಬರ್ಫಿ ತಿನ್ನಿಸಲು ಬಂದ ವರನಿಗೆ ಮಾಡಿದ್ದೇನು ಗೊತ್ತಾ? ವಿಡಿಯೋ ಕಂಡು ಅಕ್ಕ ಚಿಲ್ ಎಂದ ನೆಟ್ಟಿಗರು
ವಧು-ವರ
Updated By: preethi shettigar

Updated on: Feb 21, 2022 | 8:29 AM

ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲಾ ಒಂದು ವಿಡಿಯೋಗಳು ವೈರಲ್(Viral Video)​ ಆಗುತ್ತಲೇ ಇರುತ್ತದೆ. ಅದರಲ್ಲೂ ಇತ್ತೀಚೆಗೆ ಮದುವೆ (Marriage) ಮನೆಯಲ್ಲಿ ನಡೆಯುವ ಅದೆಷ್ಟೋ ಸಂಗತಿಗಳು ನಾನಾ ತರಹದಲ್ಲಿ ವೈರಲ್​ ಆಗುತ್ತವೆ. ಕೆಲವು ವಿಡಿಯೋಗಳು ಅಚ್ಚರಿ ಮೂಡಿಸುವಂತಿದ್ದರೆ, ಇನ್ನೂ ಕೆಲವು ವಿಡಿಯೋಗಳು ತಮಾಷೆಯಾಗಿರುತ್ತದೆ. ಇಂತಹ ವಿಡಿಯೋಗಳನ್ನು ನೆಟ್ಟಿಗರು ಕೂಡ ಹೆಚ್ಚು ಇಷ್ಟಪಡುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ(Social media) ಮದುವೆಯ ವಿಡಿಯೋವೊಂದು ವೈರಲ್​ ಆಗಿದೆ. ವಧು- ವರ ವೇದಿಕೆಯ ಮೇಲೆ ವರ್ತಿಸಿದ ರೀತಿಯ ಬಗ್ಗೆ ಈ ವಿಡಿಯೋ ಬೆಳಕು ಚೆಲ್ಲುತ್ತದೆ.

ವೈರಲ್​ ಆದ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ದಿ ಪೇಜ್ ಆಫ್ ಘಂಟಾ ಹಂಚಿಕೊಂಡಿದೆ. ಈ ವಿಡಿಯೋವನ್ನು ಈಗ 1.24 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ವಿಡಿಯೋ ಅತಿ ಹೆಚ್ಚು ವ್ಯೂವ್ಸ್​ ಪಡೆದುಕೊಂಡು ವೈರಲ್ ಆಗಿದೆ.

ವೈರಲ್​ ಆದ ವಿಡಿಯೋದಲ್ಲಿ ವೇದಿಕೆಯಲ್ಲಿ ವಧು- ವರರು ನಿಂತಿದ್ದಾರೆ. ಕೆಂಪು ಲೆಹೆಂಗಾದಲ್ಲಿ ವಧು ಮತ್ತು ಸೂಟ್‌ನಲ್ಲಿ ವರನನ್ನು ಇಲ್ಲಿ ಕಾಣಬಹುದು. ಪೂಜಾ ವಿಧಾನಕ್ಕೆ ಅನುಸಾರವಾಗಿ ವಧುವಿಗೆ ತಿನ್ನಿಸಲು ಪಂಡಿತರು ಸಿಹಿತಿಂಡಿಗಳನ್ನು (ಬರ್ಫಿ) ನೀಡುತ್ತಾರೆ. ವರನು ವಧುವಿಗೆ ಅದರಂತೆ ಬರ್ಫಿಯ ತುಂಡನ್ನು ತಿನ್ನಿಸಲು ಪ್ರಾರಂಭಿಸಿದಾಗ, ಅವಳು ಕೋಪದಿಂದ ಸಿಹಿಯನ್ನು ತೆಗೆದುಕೊಂಡು ದೂರಕ್ಕೆ ಎಸೆಯುತ್ತಾಳೆ.

ಇದರ ನಂತರ ಪಂಡಿತರು ವರನಿಗೆ ಕೊಡಲು ಒಂದು ಲೋಟ ನೀರು ವಧುವಿಗೆ ಕೊಡುತ್ತಾರೆ. ಆದರೆ ಅವಳು ಅವನಿಗೆ ನೀರಿನ ಲೋಟವನ್ನು ನೀಡಿದಾಗ, ವರ ಅವಳಂತೆಯೇ ಸ್ವೀಕರಿಸಲು ನಿರಾಕರಿಸುತ್ತಾನೆ. ಆಗ ವಧು ನೀರಿನ ಲೋಟವನ್ನು ತೆಗೆದುಕೊಂಡು ಕೋಪದಿಂದ ದೂರಕ್ಕೆ ಎಸೆಯುತ್ತಾಳೆ. ಈ ವೈರಲ್​ ವಿಡಿಯೋವನ್ನು ಕಂಡ ನೆಟ್ಟಿಗರು ತಮಾಷೆಯಾಗಿ ತಮ್ಮ ಪ್ರತಿಕ್ರಿಯೆಯನ್ನು ಕಮೆಂಟ್​ ಮೂಲಕ ತಿಳಿಸಿದ್ದಾರೆ.

ನೆಟ್ಟಿಗರು ಈ ವಿಡಿಯೋ ಕಂಡು ಇಬ್ಬರೂ ಬಲವಂತವಾಗಿ ಮದುವೆಯಾದರು ಎಂದು ಕಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ಉಲ್ಲಾಸದಾಯಕವೆಂದು ತಿಳಿಸಿದರೆ, ಮತ್ತಷ್ಟು ಮಂದಿ ನಗುವ ಎಮೋಜಿಗಳು ಮತ್ತು ಬಹಳಷ್ಟು ಜೋಕ್‌ಗಳ ಕುರಿತು ಕಾಮೆಂಟ್ ಮಾಡಿದ್ದಾರೆ. ಇದರಲ್ಲಿ ಮತ್ತೊಬ್ಬರು ಅಕ್ಕ ಚಿಲ್​ ಎಂದು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:

Viral Video: ಕಚ್ಚಾ ಬಾದಮ್ ಹಾಡಿಗೆ ನೃತ್ಯ ಮಾಡಿದ ‘ದಿ ಗ್ರೇಟ್ ಖಲಿ’; ವೈರಲ್​ ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?

ತಪ್ಪು ಮಾಡದಿದ್ದರೂ ಕೈ ಮುಗಿದು ಕ್ಷಮೆ ಕೇಳಿದ ‘ದಳಪತಿ’ ವಿಜಯ್; ವೈರಲ್​ ಆಗುತ್ತಿದೆ ವಿಡಿಯೋ