ಮದುವೆಗಳಲ್ಲಿ ವಧುವಿಗೆ (Bride) ಮೈತುಂಬ ಒಡವೆ. ದುಬಾರಿ ಲೆಹಂಗಾದೊಂದಿಗೆ ಅಲಂಕರಿಸಿರುತ್ತಾರೆ. ಇದರಲ್ಲಿ ಮೂಗುತಿ (Nose Ring), ಜುಮುಕಿ, ಹಲವು ರೀತಿಯ ನೆಕ್ಲೆಸ್ಗಳು, ಕೈತುಂಬ ಬಳೆ ಹೀಗೆ ಆಭರಣಗಳಿಂದ ಆಕೆಯನ್ನು ಮುಚ್ಚಿರುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಒಡವೆಗಳು ವಧುವಿಗೆ ಕಿರಿಕಿರಿ ಉಂಟುಮಾಡುತ್ತವೆ. ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಗೋಲ್ಗಪ್ಪಾ ತಿನ್ನುವ ವೇಳೆ ವಧುವಿಗೆ ಮೂಗುತಿ ಅಡ್ಡವಾಗಿದ್ದು ಅದನ್ನು ವರ (Groom) ಸರಿಪಡಿಸಿದ ವಿಡಿಯೋ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ವಧು ಬಾಯಲ್ಲಿ ನೀರೂರಿಸಿಕೊಂಡು ಗೋಲ್ಗಪ್ಪಾ ತಿನ್ನಲು ಯತ್ನಿಸುತ್ತಾಳೆ. ಆದರೆ ಆಕೆಗೆ ಮೂಗುತಿ ಅಡ್ಡವಾಗುತ್ತದೆ. ಈ ವೇಳೆ ಆಕೆ ವರನ ಕಡೆಗೆ ತಿರುಗುತ್ತಾಳೆ. ಆಗ ವರ ಆಕೆಯ ಮೂಗುತಿಯನ್ನು ಎತ್ತಿ ಹಿಡಿದುಕೊಳ್ಳುತ್ತಾನೆ. ಆಗ ಆಕೆ ಗೋಲ್ಗಪ್ಪಾವನ್ನು ತಿನ್ನುತ್ತಾಳೆ. ಇದರ ವಿಡಿಯೋ ಗೋಲ್ಗಪ್ಪಾ ವಧು ಎನ್ನುವ ಕ್ಯಾಪ್ಷನ್ ಮೂಲಕ ಹಂಚಿಕೊಳ್ಳಲಾಗಿದೆ.
ಸದ್ಯ ವಿಡಿಯೋ ನೋಡಿ ನೆಟ್ಟಿಗರು ನಕ್ಕಿದ್ದಾರೆ. ವಧುವಿನ ಗೋಲ್ಗಪ್ಪಾ ಪ್ರೀತಿ ಕಂಡು ಬೆರಗಾಗಿದ್ದಾರೆ. ಈ ವಿಡಿಯೋವನ್ನು ಕಳೆದ ಡಿಸೆಂಬರ್ನಲ್ಲಿ ಅಭಿಷೇಕ್ಪ್ರಿಯಾಮೇಕ್ಓವರ್ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಇದೀಗ ದಿ ವೆಡ್ಡಿಂಗ್ ವರ್ಲ್ಡ್ ಎನ್ನುವ ಇನ್ಸ್ಟಾಗ್ರಾಮ್ ಖಾತೆ ಹಂಚಿಕೊಂಡಿದೆ. ಸದ್ಯ ವಿಡಿಯೋ 23 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಇದನ್ನೂ ಓದಿ: