ಸೋಷಿಯಲ್ ಮೀಡಿಯಾದಲ್ಲಿ ಅದೆಷ್ಟೋ ವಿಡಿಯೊಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ತಮಾಷೆಯ ವಿಡಿಯೊಗಳಾಗಿದ್ದರೆ, ಇನ್ನು ಕೆಲವು ನಿಜವಾಗಿಯೂ ಆಶ್ಚರ್ಯವನ್ನುಂಟು ಮಾಡುತ್ತವೆ. ಏತನ್ಮಧ್ಯೆ ಕೆಲವು ವಿಡಿಯೊಗಳು ಕುತೂಹಲ ಕೆರಳಿಸುತ್ತವೆ. ಇಂತಹುದೇ ಒಂದು ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮದುವೆಗೆಂದು ಅಲಂಕಾರಗೊಂಡ ವಧು ಜಿಮ್ ಮಾಡುತ್ತಿದ್ದಾಳೆ. ಫೋಟೋ ಶೂಟ್ಗಾಗಿ ಜಿಮ್ ಮಾಡುತ್ತಿರುವಂತೆ ಪೋಸ್ ಕೊಡುತ್ತಿರುವಂತೆ ಅನಿಸುತ್ತದೆ. ಈ ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ.
ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ ಸುಮಾರು 2,300 ಕ್ಕೂ ಹೆಚ್ಚಿನ ಲೈಕ್ಸ್ಗಳನ್ನು ಗಳಿಸಿಕೊಂಡಿದೆ. ವಧು ಸೀರೆಯನ್ನುಟ್ಟು ಸುಂದರವಾಗಿ ಅಲಂಕಾರಗೊಂಡಿದ್ದಾಳೆ. ವಧು ಜಿಮ್ ಮಾಡುತ್ತಿದ್ದಂತೆಯೇ ಫೋಟೊಗ್ರಾಫರ್ ಕ್ಯಾಮೆರಾದಲ್ಲಿ ಫೊಟೊ ಕ್ಲಿಕ್ಕಿಸುತ್ತಿರುವುದನ್ನು ನೋಡಬಹುದು.
ವಿಡಿಯೊದಲ್ಲಿ ವಧು ವೇಟ್ ಲಿಫ್ಟಿಂಗ್ ಮಾಡುವುದನ್ನು ನೋಡಬಹುದು. ಈ ವಿಡಿಯೊ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ವಧು ಸುಂದರವಾಗಿ ರೆಡಿ ಆಗಿದ್ದಾಳೆ ಎಂದು ಕೆಲವರು ಪ್ರತಿಕ್ರಿಯಿಸಿದ್ದರೆ, ಮದುವೆಯ ದಿನ ಜಿಮ್? ಎಂದು ಕೆಲವರು ಪ್ರಶ್ನಿಸಿದ್ದಾರೆ. ಫೋಟೊ ಶೂಟ್ಗಾಗಿ ವಧು ಪೋಸ್ ಕೊಡುತ್ತಿದ್ದಾಳೆ ಎಂದು ಹಲವರು ಹೇಳಿದ್ದಾರೆ.
ಇದನ್ನೂ ಓದಿ:
Viral Video: ನೀರಿನಲ್ಲಿ ಕೋಬ್ರಾ ಮತ್ತು ಹೆಬ್ಬಾವಿನ ಮಧ್ಯೆ ಭರ್ಜರಿ ಫೈಟ್; ವಿಡಿಯೊ ವೈರಲ್
Viral Video: ಐಸ್ಲ್ಯಾಂಡ್ ಜ್ವಾಲಾಮುಖಿ ಸ್ಫೋಟದ ಡ್ರೋನ್ ವಿಡಿಯೋ ವೈರಲ್