Viral Video: ಐಸ್ಲ್ಯಾಂಡ್ ಜ್ವಾಲಾಮುಖಿ ಸ್ಫೋಟದ ಡ್ರೋನ್ ವಿಡಿಯೋ ವೈರಲ್
ಐಸ್‌ಲ್ಯಾಂಡಿಕ್ ರಾಜಧಾನಿ ರೇಕ್‌ಜಾವಿಕ್‌ನಿಂದ ಸುಮಾರು 40 ಕಿಮೀ ದೂರದಲ್ಲಿರುವ ಫಾಗ್ರಾಡಾಲ್ಸ್‌ಫ್ಜಾಲ್ ಪರ್ವತದಲ್ಲಿ ಈ ಜ್ವಾಲಾಮುಖಿಯ ದೃಶ್ಯವನ್ನು ಚಿತ್ರೀಕರಿಸಲಾಗಿದೆ.
ಐಸ್‌ಲ್ಯಾಂಡ್‌ನಲ್ಲಿ ಜ್ವಾಲಾಮುಖಿ ಎದ್ದಿರುವ ಅಚ್ಚರಿಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಜ್ವಾಲಾಮುಖಿಯ ಡ್ರೋನ್ ಕ್ಯಾಮೆರಾದ ವಿಡಿಯೊವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ನೋಡಿದವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ನಿಮ್ಮನ್ನು ವಿಸ್ಮಯಗೊಳಿಸುತ್ತದೆ. ಡ್ರೋನ್‌ನಿಂದ ಸೆರೆಹಿಡಿಯಲಾದ ವಿಡಿಯೋದ ತುಣುಕಿನಲ್ಲಿ ಜ್ವಾಲಾಮುಖಿ ಸ್ಫೋಟವಾಗುತ್ತಿರುವುದನ್ನು ನೋಡಬಹುದು. ಈ ವಿಡಿಯೋ ನೋಡಿದರೆ ಕೂದಲು ನಿಮಿರುವುದರಲ್ಲಿ ಎರಡು ಮಾತಿಲ್ಲ.
ಐಸ್‌ಲ್ಯಾಂಡಿಕ್ ರಾಜಧಾನಿ ರೇಕ್‌ಜಾವಿಕ್‌ನಿಂದ ಸುಮಾರು 40 ಕಿಮೀ ದೂರದಲ್ಲಿರುವ ಫಾಗ್ರಾಡಾಲ್ಸ್‌ಫ್ಜಾಲ್ ಪರ್ವತದಲ್ಲಿ ಈ ಜ್ವಾಲಾಮುಖಿಯ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಇದು ಈ ವರ್ಷದ ಆರಂಭದಲ್ಲಿ ಮಾರ್ಚ್ 19ರಂದು ಸ್ಫೋಟಗೊಂಡಿತು. ಇದನ್ನು ನೋಡಿದ ನೆಟ್ಟಿಗರು ಬೆರಗುಗೊಂಡಿದ್ದಾರೆ. ಜ್ವಾಲಾಮುಖಿಯ ಮೇಲ್ಭಾಗದಿಂದ ಸೆರೆಹಿಡಿಯಲಾದ ಡ್ರೋನ್ ಕ್ಯಾಮೆರಾದ ವಿಡಿಯೋದಲ್ಲಿ ಒಂದು ಭಾಗವು ಕುಸಿಯುತ್ತಿರುವುದನ್ನು ನೋಡಬಹುದು.
Icelandic photographer Hörður Kristleifsson happened to be flying his drone over Fagradalsfjall volcanic crater when part of crater rim collapsed. “That part may look “small”, but it’s actually around the same size of a 5 story building! ?” (?:@h0rdur)pic.twitter.com/PT2PWJZsiK
— GoodNewsCorrespondent (@GoodNewsCorres1) November 23, 2021
ಈ ವಿಡಿಯೋವನ್ನು 8,300 ಜನರು ವೀಕ್ಷಿಸಿದ್ದಾರೆ. ನೆಟ್ಟಿಗರಿಂದ ಈ ವಿಡಿಯೋಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜ್ವಾಲಾಮುಖಿ ಸ್ಫೋಟವಾಗುವಾಗ ಐಸ್‌ಲ್ಯಾಂಡಿಕ್ ಫೋಟೋಗ್ರಾಫರ್ ಹರೌರ್ ಕ್ರಿಸ್ಟ್ಲೆಫ್ಸನ್ ಐಸ್ಲ್ಯಾಂಡ್ ಮೇಲೆ ಡ್ರೋನ್ ಕ್ಯಾಮೆರಾವನ್ನು ಹಾರಿಸಿ, ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
Frightening as it may look yet it also looks incredibly beautiful in a dark sort of way. Or if you could imagine what an angry, bitter, spiteful, revengeful, hateful man looks like within…. him… https://t.co/O2qQw3N12m
— Francissca Peter (@FranticKL) November 23, 2021
ಇದನ್ನೂ ಓದಿ: ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಬಿದ್ದ ಮಗನ ಜತೆ ಹೆಮ್ಮೆಯಿಂದ ಪೋಸ್ ಕೊಟ್ಟ ತಂದೆ; ನಗೆಪಾಟಲಿನ ವಿಡಿಯೋ ವೈರಲ್
ಹಾಸನದಲ್ಲಿ 24 ಆನೆಗಳ ದಾಳಿಗೆ ಅಪಾರ ಬೆಳೆ ಹಾನಿ! ಸಾಲಾಗಿ ಹೆಜ್ಜೆ ಹಾಕುತ್ತಿರುವ ಗಜಪಡೆಗಳ ವಿಡಿಯೋ ವೈರಲ್