
Viral : ವಿಮಾನದಲ್ಲಿ ಪೂರೈಸುವ ಆಹಾರ ಎಲ್ಲವೂ ಶುದ್ಧವಾಗಿರುತ್ತದೆ ಎಂಬ ಭ್ರಮೆಯನ್ನು ಆಗಾಗ ಇಂಥ ವರದಿಗಳು ಕಳಚುತ್ತವೆ. ಇದೀಗ ವೈರಲ್ ಆಗಿರುವ ಈ ವರದಿಯ ಪ್ರಕಾರ, ಬ್ರಿಟಿಷ್ ಏರ್ವೇಸ್ನ ಪ್ರಯಾಣಿಕರಿಗೆ ಏರ್ವೇಸ್ ಪೂರೈಸಿದ ಊಟದಲ್ಲಿ ಕೃತಕ ಹಲ್ಲೊಂದು ಪತ್ತೆಯಾಗಿದೆ. ಇದರಿಂದ ವಿಚಲಿತರಾದ ಪ್ರಯಾಣಿಕರು @British_Airways ಟ್ಯಾಗ್ ಮಾಡಿ ಫೋಟೋ ಟ್ವೀಟ್ ಮಾಡಿದ್ದಾರೆ.
‘ಅಕ್ಟೋಬರ್ 25ರಂದು BA107 ಲಂಡನ್ನಿಂದ ದುಬೈಗೆ ಪ್ರಯಾಣಿಸುವಾಗ ನೀವು ಕೊಟ್ಟ ಊಟದಲ್ಲಿ ಈ ಕೃತಕ ಹಲ್ಲು ಕಾಣಿಸಿಕೊಂಡಿದೆ (ಇದು ನನ್ನ ಹಲ್ಲು ಅಲ್ಲ, ನನ್ನ ಹಲ್ಲುಗಳೆಲ್ಲವೂ ಸುಸ್ಥಿತಿಯಲ್ಲಿವೆ). ಇದನ್ನು ನೋಡಿ ನಿಜಕ್ಕೂ ನನಗೆ ಭಯವಾಗಿದೆ. ಕಾಲ್ ಸೆಂಟರ್ಗೆ ಸಂಪರ್ಕಿಸಲು ಪ್ರಯತ್ನಿಸುತ್ತಲೇ ಇದ್ದೇನೆ, ಸಾಧ್ಯವಾಗುತ್ತಿಲ್ಲ’ ಎಂದು ಪ್ರಯಾಣಿಕರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಎಂಟು ತಾಸಿನ ವಿಮಾನ ಪ್ರಯಾಣದಲ್ಲಿ ಈ ಮಗು ಅವರಿಗೆಲ್ಲ ದುಃಸ್ವಪ್ನದಂತೆ ಕಾಡಿತೆ?
‘ಈ ವಿಷಯವಾಗಿ ನಿಜವಾಗಲೂ ವಿಷಾದಿಸುತ್ತೇವೆ’ ಎಂದು ತಕ್ಷಣವೇ ಟ್ವೀಟ್ ಮೂಲಕ ಉತ್ತರಿಸಿದೆ ಬ್ರಿಟೀಷ್ ಏರ್ವೇಸ್. ಅನ್ನ ಮತ್ತು ತರಕಾರಿಯುಳ್ಳ ಊಟದಲ್ಲಿ ಈ ಹಲ್ಲು ಪತ್ತೆಯಾಗಿದೆ. ಈ ಮಹಿಳೆ ಟ್ವೀಟ್ ಮಾಡುತ್ತಿದ್ದಂತೆ ಏರ್ವೇಸ್ ಆಕೆಯ ವಿವರಗಳನ್ನು ಪಡೆದುಕೊಂಡು ಕ್ಷಮೆ ಕೇಳಿದೆ. ಈ ಕುರಿತು ಅವಶ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಇದನ್ನೂ ಓದಿ : ವಿಮಾನ ನಿಲ್ದಾಣದ ಸ್ಕ್ಯಾನಿಂಗ್ ಮಶೀನಿನಲ್ಲಿ ಪತ್ತೆಯಾದ ನಾಯಿ; ನೆಟ್ಟಿಗರ ಆಕ್ರೋಶ
ನೆಟ್ಟಿಗರು ಈ ಪೋಸ್ಟ್ ನೋಡಿ ಎಂಥ ಅಸಹ್ಯವಿದು ಎನ್ನುತ್ತಿದ್ದಾರೆ. ನಾನು ಡೆಂಟಲ್ ಇಂಪ್ಲ್ಯಾಂಟ್ ಸ್ಪೆಷಲಿಸ್ಟ್ ಈ ಪ್ರಕರಣದ ಬಗ್ಗೆ ನನಗೆ ನಿಜಕ್ಕೂ ಕುತೂಹಲವಿದೆ ಎಂದಿದ್ದಾರೆ ಒಬ್ಬರು. ಇದು ಜೋಳದಂತೆ ಕಾಣುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ನಾನು ನಿಯಮಿತವಾಗಿ ಇದೇ ಏರ್ವೇಸ್ ಮೂಲಕ ಪ್ರಯಾಣಿಸುತ್ತೇನೆ. ಈ ವಿಷಯ ತಿಳಿದು ನನಗೆ ಅಸಹ್ಯವೆನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು.
ಈ ವರದಿ ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:24 pm, Sat, 10 December 22