ಸಾಮೂಹಿಕ ವಿವಾಹವಾದ್ರೆ ಹಣ ಸಿಗುತ್ತೆ ಎಂದು ಅಣ್ಣ, ತಂಗಿಯೇ ಮದುವೆಯಾದ್ರು

ಹಣವನ್ನು ಕಂಡರೆ ಹೆಣವೂ ಬಾಯಿ ಬಿಡುತ್ತೆ ಎನ್ನುವಂತೆ, ಸರ್ಕಾರದ ಯೋಜನೆಯ ಲಾಭ ಪಡೆಯಲು ಅಣ್ಣ-ತಂಗಿಯೇ ಸಾಮೂಹಿಕ ವಿವಾಹವೊಂದರಲ್ಲಿ ಹಸೆಮಣೆ ಏರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಹಣಕ್ಕಾಗಿ ಸಂಬಂಧವನ್ನೇ ಮರೆತು ವರ್ತಿಸಿದ್ದಾರೆ.

ಸಾಮೂಹಿಕ ವಿವಾಹವಾದ್ರೆ ಹಣ ಸಿಗುತ್ತೆ ಎಂದು ಅಣ್ಣ, ತಂಗಿಯೇ ಮದುವೆಯಾದ್ರು
ಮದುವೆ
Image Credit source: The Print

Updated on: Oct 07, 2024 | 2:27 PM

ಸಾಮೂಹಿಕ ವಿವಾಹವಾದರೆ ಸರ್ಕಾರದಿಂದ ಹಣ ಸಿಗುತ್ತೆ ಎಂದು ಅಣ್ಣ, ತಂಗಿಯೇ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶ ಹತ್ರಾಸ್​ನಲ್ಲಿ ನಡೆದಿದೆ. ಉತ್ತರ ಪ್ರದೇಶ ಸರ್ಕಾರದ ಯೋಜನೆಯಡಿಯಲ್ಲಿ ನವವಿವಾಹಿತರಿಗೆ ಸರ್ಕಾರದಿಂದ 35,000 ರೂ. ನೀಡಲಾಗುತ್ತದೆ. ಆ ಹಣವನ್ನು ಪಡೆಯಲು ಅಣ್ಣ-ತಂಗಿಯೇ ಮದುವೆಯಾಗಿದ್ದಾರೆ.

ಹಣಕಾಸಿನ ನೆರವು ಪಡೆಯಲು ಕೆಲವರು ಮರು ಮದುವೆಯಾದರೆ ಇನ್ನೂ ಕೆಲವರು ಸಹೋದರ, ಸಹೋದರಿಯರೇ ಮದುವೆಯಾಗಿದ್ದಾರೆ. ವಿವಾಹಗಳಿಗೆ ಹಣಕಾಸಿನ ನೆರವು ನೀಡುವ ಮೂಲಕ ಕಡಿಮೆ-ಆದಾಯದ ಕುಟುಂಬಗಳನ್ನು ಬೆಂಬಲಿಸಲು ಈ ಯೋಜನೆ ರೂಪಿಸಲಾಗಿದೆ.

ಆದರೆ ಸಾಮೂಹಿಕ ವಿವಾಹ ಮೋಸದ ವಿವಾಹವಾಗಿತ್ತು, 10,000 ರೂ ಮೌಲ್ಯದ ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುತ್ತದೆ ಮತ್ತು ಮದುವೆಯ ವೆಚ್ಚಕ್ಕಾಗಿ ರೂ 6,000 ನಿಗದಿಪಡಿಸಲಾಗಿದೆ. ಈಗಾಗಲೇ-ವಿವಾಹಿತ ದಂಪತಿಗಳು ಮರುಮದುವೆಯಾಗುವ ಮೂಲಕ ಯೋಜನೆಯ ಲಾಭವನ್ನು ಪಡೆದಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.

ಮತ್ತಷ್ಟು ಓದಿ: Viral Video: ವಧುವಿನ ದೃಷ್ಟಿ ತೆಗೆದು ಮದುವೆ ಮಂಟಪಕ್ಕೆ ಕೈ ಹಿಡಿದು ಕರೆದ್ಯೊಯ್ದ ವರ

ಆದರೆ ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಸಹೋದರ ಮತ್ತು ಸಹೋದರಿಯರು ಮದುವೆಯಾಗಿರುವುದು ಆಘಾತಕಾರಿ ಸಂಗತಿಯಾಗಿದೆ. ಈ ಸಮಯದಲ್ಲಿ 217 ಜೋಡಿಗಳು ವಿವಾಹವಾದರು, ಸರ್ಕಾರದ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡಿರುವ ತಪ್ಪಿತಸ್ಥರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಜವಾದ ಫಲಾನುಭವಿಗಳನ್ನು ಬೆಂಬಲಿಸಲು ಕಲ್ಯಾಣ ಕಾರ್ಯಕ್ರಮವನ್ನು ರೂಪಿಸಲಾಗಿದೆ, ದುರುಪಯೋಗಪಡಿಸಿಕೊಳ್ಳುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ