AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: 6,66,66,666 ಮೌಲ್ಯದ ಕರೆನ್ಸಿ ನೋಟಿನಿಂದ ದೇವಿಗೆ ವಿಶೇಷ ಅಲಂಕಾರ

ನವರಾತ್ರಿಯ 9 ದಿನದಂದು ದೇವಿಯ ನವರೂಪವನ್ನು ಪೂಜಿಸಲಾಗುತ್ತದೆ ಮತ್ತು ಪ್ರತಿಯೊಂದು ದೇವಿ ದೇವಸ್ಥಾನದಲ್ಲೂ ಈ ನವ ದಿನದಂದು ಅಮ್ಮನವರಿಗೆ ವಿಶೇಷ ಅಲಂಕಾರವನ್ನು ಮಾಡಲಾಗುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಭಕ್ತರು ಅಮ್ಮನವರಿಗೆ ಮಹಾಲಕ್ಷ್ಮಿಯ ಅಲಂಕಾರವನ್ನು ಮಾಡಿದ್ದು, 6.66 ಕೋಟಿ ಮೌಲ್ಯದ ನೋಟುಗಳಿಂದ ದೇವಿಯನ್ನು ಶೃಂಗರಿಸಿದ್ದಾರೆ. ಈ ಕುರಿತ ಫೋಟೋಗಳು ಇದೀಗ ವೈರಲ್‌ ಆಗುತ್ತಿದೆ.

Viral: 6,66,66,666 ಮೌಲ್ಯದ ಕರೆನ್ಸಿ ನೋಟಿನಿಂದ ದೇವಿಗೆ ವಿಶೇಷ ಅಲಂಕಾರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Oct 07, 2024 | 5:46 PM

Share

ವಿಶೇಷ ದಿನ ಅಥವಾ ಹಬ್ಬಗಳ ಸಂದರ್ಭದಲ್ಲಿ ಹಲವು ದೇವಾಲಯಗಳಲ್ಲಿ ದೇವರನ್ನು ಹೂವುಗಳಿಂದ ಅಲಂಕರಿಸುವಂತೆ ಭಕ್ತರು ಭಕ್ತಿಯಿಂದ ದೇವರಿಗೆ ಲಕ್ಷ ಲಕ್ಷ ಮೌಲ್ಯದ ನೋಟುಗಳ ಅಲಂಕಾರವನ್ನು ಕೂಡಾ ಮಾಡುವುದುಂಟು. ಅದೇ ರೀತಿ ಇಲ್ಲೊಂದು ಕಡೆ ನವರಾತ್ರಿಯ ಪ್ರಯುಕ್ತವಾಗಿ ಭಕ್ತರು ದೇವಿ ದೇವಾಲಯದಲ್ಲಿ 6.66 ಕೋಟಿ ಮೌಲ್ಯದ ಕರೆನ್ಸಿ ನೋಟುಗಳಿಂದ ವಿಶೇಷ ಅಲಂಕಾರವನ್ನು ಮಾಡಿದ್ದಾರೆ. ಈ ಕುರಿತ ಫೋಟೋಗಳು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ತೆಲಂಗಾಲಣದ ಮಹಬೂಬನಗರ ಜಿಲ್ಲೆಯ ಬ್ರಾಹ್ಮಣವಾಡಿಯಲ್ಲಿರುವ ದೇವಿ ದೇವಾಲಯವನ್ನು ಭಕ್ತರು 6,66,66,666 ಕರೆನ್ಸಿ ನೋಟುಗಳಿಂದ ವಿಶೇಷವಾಗಿ ಅಲಂಕರಿಸಿದ್ದಾರೆ. ಹೌದು ನವರಾತ್ರಿ ಹಬ್ಬದ ಪ್ರಯುಕ್ತ ಬ್ರಾಹ್ಮಣವಾಡಿ ವಾಸವಿ ಕನ್ಯಾಕಾ ಪರಮೇಶ್ವರಿ ದೇವಾಲಯದ ಅಮ್ಮನವರಿಗೆ ಭಕ್ತರೆಲ್ಲರೂ ಸೇರಿ 6.66 ಕೋಟಿ ರೂಪಾಯಿ ಮೌಲ್ಯದ ನೋಟುಗಳಿಂದ ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿಯ ಅಲಂಕಾರವನ್ನು ಮಾಡಿದ್ದಾರೆ. ಈ ವಿಶೇಷ ಅಲಂಕಾರದಲ್ಲಿ ನಾಣ್ಯಗಳಿಂದ ಹಿಡಿದು 50,100,200,500 ರೂಪಾಯಿ ನೋಟುಗಳನ್ನು ಬಳಸಲಾಗಿದೆ.

ನವರಾತ್ರಿ ಹಬ್ಬದ ಒಂದು ದಿನದಂದು ದೇವರಿಗೆ 6.66 ಕೋಟಿ ಮೌಲ್ಯದ ನೋಟುಗಳ ಅಲಂಕಾರವನ್ನು ಮಾಡಬೇಕೆಂದು ಅಲ್ಲಿನ ಸಂಘಟಕರು ನಿರ್ಧರಿಸಿದ್ದರು. ಈ ಬಗ್ಗೆ ದಾನಿಗಳು ಹಾಗೂ ಭಕ್ತರಲ್ಲಿ ಚರ್ಚಿಸಿದಾಗ ಇದಕ್ಕೆ ಸಂಪೂರ್ಣವಾಗಿ ಒಪ್ಪಿಗೆಯನ್ನು ನೀಡಿದ್ದಾರೆ. ಹೀಗೆ ಭಕ್ತರು ಭಕ್ತಿ ಪೂರ್ವಕವಾಗಿ ನೀಡಿದ ನೋಟುಗಳಿಂದ ದೇವಿಗೆ ವಿಶೇಷ ಅಲಂಕಾರವನ್ನು ಮಾಡಿದ್ದಾರೆ. ಕರೆನ್ಸಿ ನೋಟುಗಳಿಂದ ಅಮ್ಮನವರಿಗೆ ಅಲಂಕಾರ ಮಾಡಲು ತಮಿಳುನಾಡಿನಿಂದ ವಿಶೇಷ ಕಲಾವಿದರನ್ನು ಕರೆತರಲಾಗಿತ್ತು.

ಇದನ್ನೂ ಓದಿ: ಗಮನ ಸೆಳೆಯುತ್ತಿದೆ ಪುತ್ತೂರು ಪಿಲಿಗೊಬ್ಬು ಕಾರ್ಯಕ್ರಮದಲ್ಲಿನ ವಿನೂತನ ಸ್ವಚ್ಛತಾ ಆಂದೋಲನ

ಅಮ್ಮನನವರ ಈ ಮಹಾಲಕ್ಷ್ಮಿಯ ಅಲಂಕಾರವನ್ನು ಕಣ್ತುಂಬಿಕೊಳ್ಳಲು ಕನಸಾಗರವೇ ಹರಿದು ಬಂದಿತ್ತು. ಭಕ್ತರ ದರ್ಶನದ ನಂತರ ಭಾನುವಾರ (ಅ.6) ರಾತ್ರಿ ಭಕ್ತರು ಅಲಂಕಾರಕ್ಕಾಗಿ ನೀಡಿದ ಹಣವನ್ನು ಅವರಿಗೆ ಹಿಂತಿರುಗಿಸಲು ನಿರ್ಧರಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ