Viral: 3 ರೂ.ಗೆ ಅನ್‌ಲಿಮಿಟೆಡ್‌ ಬಿರಿಯಾನಿ… ಆಫರ್‌ ಕೊಟ್ಟ ಹೊಟೇಲ್‌ ಮುಂದೆ ಕ್ಯೂ ನಿಂತ ಜನ

ಬಿರಿಯಾನಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಈ ಬಿರಿಯಾನಿಗೆ 200, 300 ರೂಪಾಯಿ ಇದ್ರೂ ಕೂಡಾ ಇಷ್ಟಪಟ್ಟು ಇದನ್ನ ತಿನ್ನುತ್ತಾರೆ. ಇನ್ನೂ ಕಮ್ಮಿ ಬೆಲೆಗೆ ಬಿರಿಯಾನಿ ಕೊಡ್ತೀವಿ ಅಂದ್ರೆ ಯಾರು ತಾನೇ ಬಿಡ್ತಾರೆ ಹೇಳಿ, ಅದೇ ರೀತಿ ಇಲ್ಲೊಂದು ಕಡೆ 3 ರೂಪಾಯಿಗೆ ಅನ್‌ಲಿಮಿಟೆಡ್‌ ಬಿರಿಯಾನಿ ನೀಡುವುದಾಗಿ ವಿಶೇಷ ಆಫರ್‌ ಒಂದನ್ನು ನೀಡಲಾಗಿದ್ದು, ಈ ಮೂರು ರೂಪಾಯಿ ಬಿರಿಯಾನಿ ತಿನ್ನಲು ಹೊಟೇಲ್‌ ಮುಂದೆ ಜನ ಸಾಗರವೇ ಜಮಾಯಿಸಿದೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 07, 2024 | 6:37 PM

ಗ್ರಾಹಕರನ್ನು ಸೆಳೆಯುವ ಸಲುವಾಗಿ ಅಂಗಡಿ ಮಾಲೀಕರು ಹಬ್ಬ ಇತ್ಯಾದಿ ಸಮಯಗಳಲ್ಲಿ ವಿವಿಧ ಮಾರುಕಟ್ಟೆ ತಂತ್ರಗಳನ್ನು ಉಪಯೋಗಿಸುತ್ತಿರುತ್ತಾರೆ. ಇವುಗಳಿಗೆ ಆಕರ್ಷಿತರಾಗಿ ಜನರು ಈ ರಿಯಾಯಿತಿ ದರದಲ್ಲಿ ಸಿಗುವ ವಸ್ತುಗಳನ್ನು ಖರೀದಿಸಿಲು ಮುಗಿ ಬೀಳುತ್ತಾರೆ. ಅದೇ ರೀತಿ ಇಲ್ಲೊಬ್ರು ಹೊಟೇಲ್‌ ಮಾಲೀಕ 3 ರೂಪಾಯಿಗೆ ಅನ್‌ಲಿಮಿಟೆಲ್‌ ಬಿರಿಯಾನಿ ನೀಡುವುದಾಗಿ ಭರ್ಜರಿ ಆಫರ್‌ ಒಂದನ್ನು ನೀಡಿದ್ದು, ಸಿಕ್ಕಿದೆ ಚಾನ್ಸು ಎನ್ನುತ್ತಾ ಬಿರಿಯಾನಿ ಪ್ರಿಯರು 3 ರೂಪಾಯಿ ಬಿರಿಯಾನಿ ಸಮಿಯಲು ಹೊಟೇಲ್‌ ಮುಂದೆ ಜಮಾಯಿಸಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಸಾಮಾನ್ಯವಾಗಿ ಒಂದು ಪ್ಲೇಟ್‌ ಬಿರಿಯಾನಿಗೆ 150 ರಿಂದ 200, 300 ರೂ. ಇರುತ್ತೆ. ಹೀಗಿರುವಾಗ ಕಮ್ಮಿ ಬೆಲೆಗೆ ಬಿರಿಯಾನಿ ಸಿಗುತ್ತೆ ಅಂದ್ರೆ ಈ ಸುರ್ಣಾವಕಾಶವನ್ನು ಯಾರಾದ್ರೂ ಮಿಸ್‌ ಮಾಡ್ತಾರಾ. ಖಂಡಿತವಾಗಿಯೂ ಇಲ್ಲ. ಇದೇ ರೀತಿ ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಜಂಗಾರೆಡ್ಡಿಗುಂಡೆನಲ್ಲಿ ಹೊಸ ರೆಸ್ಟೋರೆಂಟ್‌ ಉದ್ಘಾಟನೆಯ ಪ್ರಯುಕ್ತ ರೆಸ್ಟೋರೆಂಟ್‌ ಮಾಲೀಕ 3 ರೂಪಾಯಿಗೆ ಅನ್‌ಲಿಮಿಟೆಡ್‌ ಕೊಡುವುದಾಗಿ ಬಿಗ್‌ ಆಫರ್‌ ಒಂದನ್ನು ನೀಡಿದ್ದು, ಈ ಕಮ್ಮಿ ಬೆಲೆಯ ಭರ್ಜರಿ ಭೋಜನವನ್ನು ಸವಿಯಲು ಬಿರಿಯಾನಿ ಪ್ರಿಯರು ಕ್ಯೂನಲ್ಲಿ ಬಂದಿದ್ರು.

ಇದನ್ನೂ ಓದಿ: ಕೊಡಲಿಯಿಂದ ತನ್ನ ಗುಪ್ತಾಂಗವನ್ನೇ ಕತ್ತರಿಸಿಕೊಂಡ ಆಸಾಮಿ; ಕಾರಣ ಏನ್‌ ಗೊತ್ತಾ?

ರೆಸ್ಟೋರೆಂಟ್‌ ಉದ್ಘಾಟನೆಯ ದಿನ ಬೆಳಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ 3 ರೂಪಾಯಿಗೆ ಅನ್‌ಲಿಮಿಟೆಡ್‌ ಬಿರಿಯಾನಿ ಸೇರಿದಂತೆ ಹಲವು ಆಫರ್‌ಗಳ ಜಾಹಿರಾತು ಜಾಹೀರಾತು ಸಿಕ್ಕಾಪಟ್ಟೆ ಪ್ರಚಾರವನ್ನು ಪಡೆದುಕೊಂಡಿದ್ದು, ರೆಸ್ಟೋರೆಂಟ್‌ ಉದ್ಘಾಟನೆಯ ದಿನ ಅಂದರೆ ಶನಿವಾರ (ಅ.5) ಬಿರಿಯಾನಿ ಸವಿಯಲು ಜನ ಸಾಗರವೇ ಸೇರಿತ್ತು. ಗಲಾಟೆ ಅಥವಾ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬಿಗಿ ಭದ್ರತೆಯನ್ನು ಕೂಡಾ ಏರ್ಪಡಿಸಲಾಗಿತ್ತು. ಸುಮಾರು 4,000 ರಿಂದ 5,000 ಜನರು ಈ ಭರ್ಜರಿ ಆಫರ್‌ ಅನ್ನು ಪಡೆದುಕೊಂಡಿದ್ದು, ಮಿಕ್ಕವರು 3 ರೂಪಾಯಿ ಬಿರಿಯಾನಿ ಸಿಗದೆ ನಿರಾಸೆ ಅನುಭವಿಸಿದರು.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ