Viral: ಕೊಡಲಿಯಿಂದ ತನ್ನ ಗುಪ್ತಾಂಗವನ್ನೇ ಕತ್ತರಿಸಿಕೊಂಡ ಆಸಾಮಿ; ಕಾರಣ ಏನ್ ಗೊತ್ತಾ?
ಪ್ರತಿನಿತ್ಯ ಚಿತ್ರವಿಚಿತ್ರ ಸುದ್ದಿಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದ್ದು, ಆಸ್ಟ್ರೀಯಾದ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗವನ್ನು ತಾನೇ ಕೊಡಲಿಯಿಂದ ಕತ್ತರಿಸಿಕೊಂಡಿದ್ದಾನೆ. ಇದರ ಹಿಂದಿನ ಕಾರಣ ಏನು ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನು ತಿನ್ನಬೇಕೋ ಅದನ್ನೇ ತಿನ್ನಬೇಕು. ಆದ್ರೆ ಈ ಕೆಲವೊಬ್ಬರಿಗೆ ಸಿಕ್ಕಿದ್ದನ್ನೆಲ್ಲಾ ತಿನ್ನೋ ಅಭ್ಯಾಸ, ಹೀಗೆ ಏನೇನೋ ತಿಂದು ಪಜೀತಿಗೆ ಸಿಲುಕಿದವರು ಹಲವರಿದ್ದಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕೂಡಾ ಮ್ಯಾಜಿಕ್ ಮಶ್ರೂಮ್ ತಿಂದು, ಭ್ರಮೆಯಲ್ಲಿ ಸಿಲುಕಿ ತನ್ನ ಖಾಸಗಿ ಅಂಗವನ್ನು ತಾನೇ ಕತ್ತರಿಸಿಕೊಂಡಿದ್ದಾನೆ. ಹೌದು ಮ್ಯಾಜಿಕ್ ಮಶ್ರೂಮ್ ಎಂದು ಕರೆಯಲ್ಪಡುವ ಸೈಲೋಸಿಬಿನ್ ಅಣಬೆಯನ್ನು ತಿಂದ ಪರಿಣಾಮ ಭ್ರಮೆ ಉಂಟಾಗಿ ಆಸ್ಟ್ರೀಯಾದ ವ್ಯಕ್ತಿ ಕೊಡಲಿಯಿಂದ ತನ್ನ ಗುಪ್ತಾಂಗವನ್ನೇ ಕತ್ತರಿಸಿಕೊಂಡಿದ್ದಾನೆ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಅತಿಯಾದ ಮದ್ಯಪಾನ ಮತ್ತು ಖಿನ್ನತೆಗೆ ಒಳಗಾಗಿದ್ದ ಆಸ್ಟ್ರೀಯಾದ 37 ವರ್ಷದ ವ್ಯಕ್ತಿ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ನಾಲ್ಕರಿಂದ ಐದು ಒಣಗಿದ ಸೈಲೋಸಿಬಿನ್ ಅಣಬೆಗಳನ್ನು ತಿಂದಿದ್ದಾನೆ. ಈ ಅಣಬೆಯನ್ನು ತಿಂದ ಬಳಿಕ ಆತನಿಗೆ ತಲೆ ತಿರುಗಲಾರಂಭಿಸಿತು ಮತ್ತು ಈ ಭ್ರಮೆಯಿಂದಾಗಿ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡು ತನ್ನ ಖಾಸಗಿ ಅಂಗವನ್ನು ಕೊಡಲಿಯಿಂದ ಕತ್ತರಿಸಿಕೊಂಡಿದ್ದಾನೆ. ಇದರಿಂದ ವಿಪರೀತ ರಕ್ತಸ್ರಾವವಾಗಿದ್ದು, ಬಟ್ಟೆ ಕಟ್ಟುವ ಮೂಲಕ ರಕ್ತಸ್ರಾವವನ್ನು ನಿಲ್ಲಿಸಲು ಯತ್ನಿಸಿದ್ದಾನೆ. ಮತ್ತು ತುಂಡಾದ ಗುಪ್ತಾಂಗದ ಭಾಗವನ್ನು ಐಸ್ ತುಂಬಿದ ಬೌಲ್‌ನಲ್ಲಿ ಇರಿಸಿ ಸೀದಾ ಮನೆಯಿಂದ ಹೊರ ಹೋಗಿದ್ದಾನೆ.
ಈತ ರಕ್ತದ ಮಡುವಿನಲ್ಲಿ ಮುಳುಗಿರುವುದನ್ನು ಕಂಡ ದಾರಿಹೋಕರೊಬ್ಬರು ಆಂಬ್ಯಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದರು. ಮಣ್ಣು ಮತ್ತು ಕೋಲ್ಡ್ ನೀರು ಗುಪ್ತಾಂಗಕ್ಕೆ ತಗುಲಿದ ಪರಿಣಾಮ ಶಸ್ತ್ರ ಚಿಕಿತ್ಸೆ ಮಾಡಲು ಕಷ್ಟಕರವಾಗಿದ್ದರೂ ಕೂಡಾ ವೈದ್ಯರು ತುಂಡರಿಸಿದ ಜನನಾಂಗವನ್ನು ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತು ನಂತರ ಆ ವ್ಯಕ್ತಿಯನ್ನು ಮನೋವೈದ್ಯಕೀಯ ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಯಿತು. ಇದೀಗ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡ ಆ ವ್ಯಕ್ತಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ.
ಸೈಲೋಸಿಬಿನ್ ಅಣಬೆಗಳನ್ನು ತಿಂದ ಪರಿಣಾಮ ಭ್ರಮೆ ಆವರಿಸಿ ಆ ವ್ಯಕ್ತಿ ತನ್ನ ಜನನಾಂಗವನ್ನೇ ಕತ್ತರಿಸಿಕೊಂಡಿದ್ದು ಎಂಬ ವಿಚಾರ ತಿಳಿದು ಬಂದಿದ್ದು, ಈ ವಿಚಿತ್ರ ಪ್ರಕರಣ ಮೆಗಾ ಜರ್ನಲ್ ಆಫ್ ಸರ್ಜರಿ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.
ಇದನ್ನೂ ಓದಿ: ಗಮನ ಸೆಳೆಯುತ್ತಿದೆ ಪುತ್ತೂರು ಪಿಲಿಗೊಬ್ಬು ಕಾರ್ಯಕ್ರಮದಲ್ಲಿನ ವಿನೂತನ ಸ್ವಚ್ಛತಾ ಆಂದೋಲನ
ಮ್ಯಾಜಿಕ್ ಮಶ್ರೂಮ್ ಎಂದರೇನು?
ಮ್ಯಾಜಿಕ್ ಮಶ್ರೂಮ್ ಒಂದು ರೀತಿಯ ಅಣಬೆಯಾಗಿದ್ದು, ಇದರಲ್ಲಿ ನೈಸರ್ಗಿಕವಾಗಿ ಕಂಡು ಬರುವ ಸೈಲೋಸಿಬಿನ್ ಎಂಬ ಸಂಯುಕ್ತವಿದೆ. ಈ ಅಣಬೆಯನ್ನು ಸೇವಿಸಿದರೆ ಇದು ಮೆದುಳಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರಿ ಮನುಷ್ಯನನ್ನು ಭ್ರಮೆಯ ಸ್ಥಿತಿಗೆ ತಳ್ಳುತ್ತದೆ. ಮತ್ತು ವ್ಯಕ್ತಿಯು ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ವಿಶೇಷವೆಂದರೆ ಈ ಅಣಬೆಯನ್ನು ಅನೇಕ ರೋಗಗಳಿಗೆ ಔಷಧಿಯಾಗಿಯೂ ಕೂಡಾ ಬಳಸಲಾಗುತ್ತಿದೆ. ಖಿನ್ನತೆ ಮತ್ತು ಇತರೆ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿರುವ ಈ ಮ್ಯಾಜಿಕ್ ಮಶ್ರೂಮ್ ಅನ್ನು ವೈದ್ಯರ ಸಲಹೆ ಇಲ್ಲದೆ ಸೇವಿಸಬಾರದೂ ಎಂದು ಕೂಡಾ ಹೇಳಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ