ತರಗತಿ ವೇಳೆ ಶೌಚಾಲಯಕ್ಕೆ ಹೋಗದ ಮಕ್ಕಳಿಗೆ ಬೋನಸ್ ಅಂಕ, ಶಿಕ್ಷಕನ ವಿರುದ್ಧ ಆಕ್ರೋಶ

ತರಗತಿ ವೇಳೆ ಶೌಚಾಲಯಕ್ಕೆ ಹೋಗದ ಮಕ್ಕಳಿಗೆ ಬೋನಸ್ ಅಂಕ ನೀಡಿರುವ ಶಿಕ್ಷಕನ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಮಕ್ಕಳು ಹೆಚ್ಚು ನೀರು ಕುಡಿಬೇಕು, ಚಟುವಟಿಕೆಯಿಂದಿರಬೇಕು, ಸರಿಯಾದ ಸಮಯಕ್ಕೆ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಮಾತ್ರ ಅವರು ಆರೋಗ್ಯದಿಂದಿರಲು ಸಾಧ್ಯ.

ತರಗತಿ ವೇಳೆ ಶೌಚಾಲಯಕ್ಕೆ ಹೋಗದ ಮಕ್ಕಳಿಗೆ ಬೋನಸ್ ಅಂಕ, ಶಿಕ್ಷಕನ ವಿರುದ್ಧ ಆಕ್ರೋಶ
ತರಗತಿ ಮಕ್ಕಳು, ಸಾಂದರ್ಭಿಕ ಚಿತ್ರImage Credit source: Reason Foundation
Follow us
ನಯನಾ ರಾಜೀವ್
|

Updated on: Oct 08, 2024 | 11:07 AM

ತರಗತಿ ವೇಳೆ ಶೌಚಾಲಯಕ್ಕೆ ಹೋಗದ ಮಕ್ಕಳಿಗೆ ಬೋನಸ್ ಅಂಕ ನೀಡಿರುವ ಶಿಕ್ಷಕನ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಮಕ್ಕಳು ಹೆಚ್ಚು ನೀರು ಕುಡಿಬೇಕು, ಚಟುವಟಿಕೆಯಿಂದಿರಬೇಕು, ಸರಿಯಾದ ಸಮಯಕ್ಕೆ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಮಾತ್ರ ಅವರು ಆರೋಗ್ಯದಿಂದಿರಲು ಸಾಧ್ಯ.

ಆದರೆ ಕ್ಯಾಲಿಫೋರ್ನಿಯಾದ ಶಿಕ್ಷಕರೊಬ್ಬರು ತರಗತಿ ವೇಳೆ ಯಾರು ಕಡಿಮೆ ಬಾರಿ ಶೌಚಾಲಯಕ್ಕೆ ಹೋಗುತ್ತಾರೋ ಅವರಿಗೆ ಬೋನಸ್ ಅಂಕಗಳನ್ನು ನೀಡಿದ್ದು, ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಏಕೆಂದರೆ ದಿನಕ್ಕೆ 6 ರಿಂದ 8 ಬಾರಿ ಮೂತ್ರ ವಿಸರ್ಜನೆ ಮಾಡಲೇಬೇಕು, ದೇಹದಲ್ಲಿ ಚಯಾಪಚಯ ಕ್ರಿಯೆ ನಡೆಯಲು ನೀರಿನ ಅವಶ್ಯಕತೆ ತುಂಬಾ ಇದೆ.

ಮೂತ್ರಕ್ಕೆ ಹೋಗಬೇಕಾಗುತ್ತದೆ ಎಂದು ನೀರು ಕುಡಿಯದಿದ್ದರೆ ಮಕ್ಕಳು ನಿರ್ಜಲೀಕರಣದಂತಹ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ಗಣಿತ ಶಿಕ್ಷಕರೊಬ್ಬರು ವಾರಕ್ಕೆ ಒಂದೇ ಒಂದು ಬಾತ್​ ರೂಂ ಪಾಸ್​ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ ನೀಡುವ ಆಮಿಷವೊಡ್ಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಸೆಪ್ಟೆಂಬರ್​ 5ರಂದು ಪೋಷಕರೊಬ್ಬರು ತಮ್ಮ ಎಕ್ಸ್​ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮೂತ್ರ ಬಂದಾಗ 30 ನಿಮಿಷಗಳ ಕಾಲ ಮಗಳಿಗೆ ತಡೆದುಕೊಳ್ಳುವಂತೆಯೂ ಆಕೆ ಹೇಳಿದ್ದಾಗಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಅಂದು ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಇಂದು ಡಾಕ್ಟರ್​​; ಬಡತನ ಗೆದ್ದ ಸ್ಫೂರ್ತಿದಾಯಕ ಕಥೆ

ಇಂತಹ ಅನೇಕ ಘಟನೆಗಳು ಸಾಕಷ್ಟು ಶಾಲೆಗಳಲ್ಲಿ ನಡೆಯುತ್ತಿರುತ್ತದೆ, ಅಹಮದಾಬಾದ್​ನ ಮಾಧವ್ ಪಬ್ಲಿಕ್ ಸ್ಕೂಲ್​ನಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಯನ್ನು ಗೋಡೆಗೆ ತಳ್ಳಿ ಹಲ್ಲೆ ನಡೆಸಿ ಸಿಕ್ಕಿಬಿದ್ದಿದ್ದರು.

ಜಿಲ್ಲಾ ಶಿಕ್ಷಣಾಧಿಕಾರಿಗಳ ಆದೇಶದ ಮೇರೆಗೆ ಶಾಲೆಯು ಪಟೇಲ್ ಅವರನ್ನು ಅಮಾನತುಗೊಳಿಸಿದೆ. ಶಿಕ್ಷಕನನ್ನು ವತ್ವಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವರದಿಯಂತೆ ಆ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ರಾಜಸ್ಥಾನದ ಟೋಂಕ್‌ನಲ್ಲಿ 5 ನೇ ತರಗತಿಯ ಬಾಲಕಿಯರಿಗೆ ಅಶ್ಲೀಲ ವೀಡಿಯೊಗಳನ್ನು ತೋರಿಸಿದ ಆರೋಪದ ಮೇಲೆ ಸರ್ಕಾರಿ ಶಿಕ್ಷಕನನ್ನು ಬಂಧಿಸಲಾಗಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ